Dr Bro: ಅಪಘಾನಿಸ್ತಾನ ಪ್ರವಾಸದಲ್ಲಿ ನಡೆದಿತ್ತು ದುರ್ಘಟನೆ! ಡಾಕ್ಟರ್ ಬ್ರೋ ಬಿಚ್ಚಿಟ್ಟ ಸತ್ಯ ಇಲ್ಲಿದೆ

Advertisement
ಸಾಮಾಜಿಕ ಜಾಲತಾಣಗಳು ಬಂದ ನಂತರ ಸಾವಿರಾರು ಜನರು ಯೂಟ್ಯೂಬ್ ( Youtube ), ಫೇಸ್‌ಬುಕ್ ( Facebook ), ಇನ್ಸ್ಟಾಗ್ರಾಂ (Instagram) ಹೀಗೆ ಇಂತಹ ವೇದಿಕೆಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಂತಹವರ ಸಾಲಿಗೆ ಡಾಕ್ಟರ್ ಬ್ರೋ ( Dr bro ) ಎನ್ನುವ ಯೂಟ್ಯೂಬರ್ (Youtuber) ಕೂಡ ಸೇರಿಕೊಳ್ಳುತ್ತಾರೆ. ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುವ ದೇಶ ಸುತ್ತುವ ಈ ಯುವಕ ಧೈರ್ಯವನ್ನು ಮೆಚ್ಚಲೇ ಬೇಕು. ಬ್ರೋ ಗೌಡ ಎಂದು ಫೇಮಸ್ ಆಗಿರುವ ಈತನ ಹೆಸರು ಗಗನ್ ಶ್ರೀನಿವಾಸ್ ( Gagan Shreenivas ).
ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತುವ ಎಲ್ಲರಿಗೂ ಕೂಡ ಚಿರ ಪರಿಚಿತ. ದೇಶ-ವಿದೇಶಗಳನ್ನು ಸುತ್ತುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ಹೇಳುತ್ತಾ ಫೇಮಸ್ ಆಗಿದ್ದಾರೆ ಈ ಯೂಟ್ಯೂಬರ್ ಡಾಕ್ಟರ್ ಬ್ರೋ.. ಈ ಡಾ ಬ್ರೋ ಎನ್ನುವ ಈ ಹುಡುಗನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈ ಹಿಂದೆಯಷ್ಟೇ ಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ ಅಪಘಾನಿಸ್ತಾನ ( Apaghanistan ) ಪ್ರವಾಸದ ವೇಳೆ ತಾನು ಅನುಭವಿಸಿದ ಮಾನಸಿಕ ಹಿಂಸೆಯ ಬಗ್ಗೆ ರಿವೀಲ್ ಮಾಡಿದ್ದರು.
ಅಪಘಾನಿಸ್ತಾನದಲ್ಲಿ ತಾನು ಅನುಭವಿಸಿದ ಮಾನಸಿಕ ಹಿಂಸೆ ಬಿಚ್ಚಿಟ್ಟ ಖ್ಯಾತ ಯೂಟ್ಯೂಬರ್
ಖಾಸಗಿ ವಾಹಿನಿಯಲ್ಲಿ ಅಪಘಾನಿಸ್ತಾನ ಪ್ರವಾಸದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಯೂಟ್ಯೂಬರ್ ಡಾಕ್ಟರ್ ಬ್ರೋ ಅವರು, “ಅಪಘಾನಿಸ್ತಾನದಲ್ಲಿ ನಾನು ಹನ್ನೊಂದು ದಿನಗಳ ಕಾಲ ಇದ್ದೆ. ಆ ಹನ್ನೊಂದು ದಿನದಲ್ಲಿ ಪ್ರತಿ ದಿನವೂ ನಾನು ಭಯದಲ್ಲಿಯೇ ಬದುಕಿದ್ದೆ, ಆ ಭಯದಲ್ಲಿಯೇ ನಾನು ವಿಡಿಯೋ ಮಾಡಿದ್ದೆ. ಅಪಘಾನಿಸ್ತಾನದ ಪರಿಸ್ಥಿತಿ ಆ ರೀತಿಯಿತ್ತು. ಒಂದು ರೀತಿಯ ಮಾನಸಿಕ ವೇದನೆಯೂ ನನಗೆ ಆಗಿತ್ತು.
ಅಲ್ಲಿ ಬೆಳಗ್ಗೆ ಎದ್ದ ಕೂಡಲೇ ನಮ್ಮ ಕಣ್ಣಿಗೆ ಉದ್ದುದ್ದ ದನಗಳನ್ನು ಹಿಡಿದುಕೊಂಡಿದ್ದಂತಹ ತಾಲಿಬಾನಿಗಳು. ಅಲ್ಲಿ ಅವರು ಏನು ಮಾಡಿ ಬಿಡ್ತಾರೋ ಅನ್ನೋ ಭಯ. ಆ ದೇಶದ ಪರಿಸ್ಥಿತಿ, ನಾವು ಒಂದು ಸಾವಿರ ಕೊಟ್ಟು ರೂಮ್ ನಲ್ಲಿದ್ದರೆ, ಆ ರೂಮಿನ ಸ್ವಚ್ಛತೆ, ಇದೆಲ್ಲದರಿಂದ ನಾನು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಿ ಬಿಟ್ಟಿದೇನೆ. ಅಲ್ಲಿಂದ ನನಗೆ ಯಾವಾಗ ಹೊರಗೆ ಬರ್ತೇನೆ ಎಂದು ಅನಿಸಿತ್ತು” ಎಂದಿದ್ದಾರೆ.