Darshan: ವಿರೋಧಿಗಳಿಗೆ ತಿರುಗೇಟು ಕೊಟ್ಟ ದರ್ಶನ್,.ಮುಲಾಜಿಲ್ಲದೆ ಹೇಳಿದ್ದೇ ಬೇರೆ

Advertisement
ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Darshan)ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ಆಗಿ ಮೆರೆದವರು ಆದರೆ ಕೆಲವು ಕಾರಣದಗಳಿಂದ ಇತ್ತೀಚಿಗೆ ಅವರ ಕುರಿತು ಆರೋಪ ಪ್ರತ್ಯಾರೋಪಗಳು ಎದುರಾಗುತ್ತಿದೆ.ಇದೇ ವರ್ಷದ ಜನವರಿ 26 ರಂದು ಅವರ ಸಿನೆಮಾ ಕ್ರಾಂತಿ ಬಿಡುಗಡೆಯಾಗಿತ್ತು. ಬಿಡುಗಡೆ ನಂತರ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ 100 ಕೋಟಿ ಕ್ಲಬ್ ಪಟ್ಟಿಗೆ ಸೇರಿತ್ತು.
ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಕೂಡ ಭಾರಿ ಬೆಲೆಗೆ ಮಾರಾಟವಾಗಿತ್ತು. ಕ್ರಾಂತಿ ನಂತರ ದರ್ಶನ್ ಯಾವ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ವಿಷಯ ಯಾರಿಗೂ ತಿಳಿದಿಲ್ಲ.ದರ್ಶನ್ ಗೆ ಮಾರ್ಕೆಟ್ ಬಿದ್ದುಹೋಗಿವೆ. ಅವರನ್ನು ಯಾರು ಸಿನೆಮಾ ಮಾಡಲು ಅಪ್ರೋಚ್ ಮಾಡುತ್ತಿಲ್ಲ ಎಂದು ಅನೇಕರು ಟ್ರೋಲ್ ಮಾಡುತ್ತಿದ್ದಾರೆ.
ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ(Kranti) ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತುಂಬಿದ ಜನಜಂಗುಳಿ ಮಧ್ಯೆ ನಾಯಕ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ರು ಈ ಘಟನೆ ಬಳಿಕ ದರ್ಶನ್ ಮೇಲೆ ಇನ್ನು ವಾಗ್ದಾಳಿಗಳು ನಡೆಯುತ್ತಲೇ ಬಂದಿದೆ.ದರ್ಶನ್ ಅಭಿಯನದ ಕ್ರಾಂತಿ ಚಿತ್ರದ ಆಡಿಯೋ ಲಾಂಚ್(Audio Lunch) ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆದಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಕೂಡಾ ನಡೆಸಿದ್ರು. ಕೆಲ ಯುವಕರು ದರ್ಶನ್ ಬ್ಯಾನರ್ ಹರಿದು ಕೂಡಾ ಹಾಕಿದ್ದರು.
ಆದ್ರೂ ಈ ಕುರಿತಂತೆ ದರ್ಶನ್ ಯಾವುದೇ ರೀತಿ ಮಾತನಾಡಿರಲಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಹೋಗಿದ್ರು.ಆದ್ರೆ ಇತ್ತೀಚಿಗೆ ಯೂಟ್ಯೂಬ್(Youtube) ಒಂದಕ್ಕೆ ಸಂದರ್ಶನ ನೀಡಿದ್ದು ಅವರ ವಿರುದ್ಧ ಪಿತೂರಿ ಮಾಡುವವರಿಗೆ ಸೈಲೆಂಟಾಗಿ ತಕ್ಕ ಉತ್ತರ ನೀಡಿದ್ದಾರೆ. ಏನೇ ಆದ್ರು ಹೆಂಗೆ ಆದ್ರು ನಮ್ಮ ಕೆಲಸ ಮಾತ್ರ ಮಾತಾಡಬೇಕು ನಾವು ಮಾತಾಡವಾರದು ನನ್ನ ಹೃದಯಕ್ಕೂ ಮೆದುಳಿಗೂ ಕನೆಕ್ಷನ್ ಇಲ್ಲ.ಏನ್ ಕೇಳಿಸಿಕೊಳ್ಳುತ್ತಿನೋ ಹೃದಯ ಏನು ಹೇಳುತ್ತೋ ಅದನ್ನೆ ಮಾತನಾಡುತ್ತನೆ ಎಂದಿದ್ದಾರೆ.ಈ ವಿಡಿಯೋ ಸಕ್ಕತ್ ವೈರಲ್ ಆಗಿದ್ದು ದಚ್ಚು ಅಭಿಮಾನಿಗಳು ಈ ವಿಡಿಯೋವನ್ನು ಸ್ಟೇಟಸ್‌ಗೆ ಹಾಕಿ ದಚ್ಚು ವೈರಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ವಿಡಿಯೋ ಈ ಕೆಳಗಿದೆ.