Rakshith Shetty: ನಟ ರಕ್ಷಿತ್ ಶೆಟ್ಟಿ ಕಟ್ಟುತ್ತಿರುವ ಹೊಸ ಮನೆ ಬಜೆಟ್ ಎಷ್ಟು ಗೊತ್ತಾ? ಒಳಗಡೆ ಏನೆಲ್ಲ ಇರಲಿದೆ ನೋಡಿ

Advertisement
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith shetty) ಅವರು ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಓರ್ವ ಸಿನೆಮಾ ನಟನೆನ್ನಬಹುದು. ಆರಂಭದಲ್ಲಿ ಸಾಕಷ್ಟು ಕಷ್ಟ ಪಟ್ಟು ಬಳಿಕ ತನ್ನ ಸ್ವ ಪ್ರಯತ್ನದಿಂದಲೆ ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದೀಗ ಅವರ ಕುರಿತಾಗಿ ಒಂದು ವಿಚಾರ ಮುನ್ನಲೆಗೆ ಬಂದಿದೆ. ಅವರು ಬಹುಕೋಟಿ ಮೌಲ್ಯದ ಮನೆಯ ಮಾಲಕ ಆಗಲಿದ್ದು ಈ ಮನೆ ತುಂಬಾ ವಿಶೇಷವಾಗಿದೆ ಎಂಬ ಅಂಶವಿಗ ಹೊರಬಂದಿದೆ.
ಹೆಸರು ತಂದು ಕೊಟ್ಟ ಚಿತ್ರ
ಕೆಲವೊಂದು ಸಿನೆಮಾದಲ್ಲಿ ಸಹ ನಿರ್ದೇಶಕನಾಗಿ ಬಳಿಕ ತುಂಬಾ ನಿರ್ದೇಶಕರ ಬಳಿ ಚಾನ್ಸ್ ಕೂಡ ಕೇಳಿದರು, ಆದರೆ ಯಾರು ಕೊಡದಿದ್ದಾಗ ನಮ್ ಏರಿಯಾದಲ್ಲೊಂದಿನ ಎಂಬ ಸಿನೆಮಾ ಮಾಡಿದರು, ಆದರೆ ಅದು ಯಶಸ್ಸು ಕಾಣಲಿಲ್ಲ ಬಳಿಕ ತುಘಲಕ್ ಅನ್ನೊ ಸಿನೆಮಾ ಮಾಡಿ ಅದು ಸಹ ಫ್ಲಾಪ್ ಆಯಿತು, ಬಳಿಕ ಮನೆಯವರ ಹಣ ಹಾಳಾಗುತ್ತಿದೆ ಎನ್ನೊ ಚಿಂತೆಯಲ್ಲಿದ್ದಾಗ ರಿಷಭ್ ಜೊತೆ ಸೇರಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಸಿನೆಮಾ ಮಾಡಿದರು, ಈ ಸಿನೆಮಾ ಕನ್ನಡದ ಇತಿಹಾಸದಲ್ಲೇ ಮೊದಲ ಬಾರು ಆರು ನಿಮಿಷದ ಟ್ರೈಲರ್ ನೀಡಿದ ಸಿನೆಮಾ ಎಂಬ ಖ್ಯಾತಿಯನ್ನು ಪಡೆದು ಇವರಿಗೆ ಹೆಸರು ತಂದುಕೊಟ್ಟಿತ್ತು.
ಬಳಿಕ ರಿಕ್ಕಿ, ವಾಸ್ತು ಪ್ರಕಾರ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಉಳಿದವರು ಕಂಡಂತೆ ಸಿನೆಮಾ ಹೊಸ ಆಯಾಮ ಹೊಂದಿದ್ದರು ಹೇಳಿ ಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ ಆಗ ಅವರಿಗೆ ಒಲಿದ ಅದೃಷ್ಟವೇ ಕಿರಿಕ್ ಪಾರ್ಟಿ.
ದೊಡ್ಡ ಮಟ್ಟದ ಯಶಸ್ಸಿಗೆ ಕಾರಣ
ಕಿರಿಕ್ ಪಾರ್ಟಿ ನಂತರ ಅವನೇ ಶ್ರೀಮನ್ ನಾರಾಯಣ ಉತ್ತಮ ಸಿನೆಮಾ ಸಾಲಿನಲ್ಲಿ ಸೇರಿದರೆ. ಚಾರ್ಲಿ ಸೂಪರ್ ಹಿಟ್ ಸಿನೆಮಾವಾಯಿತು. ಈಗ ಅವರು ಕನಸಿನ ಮನೆಯ ಯೋಚನೆ ಯಲ್ಲಿದ್ದಾರೆ ಎನ್ನಬಹುದು
ಏನಿದೆ ವಿಶೇಷತೆ
ಈ ಮನೆ ಕಟ್ಟುವಾಗ ರಶ್ಮಿಕಾ (Rashmika) ಅವರ ಕೊಡಗಿನ ಶೈಲಿಯ ಮನೆಯ ಅಲಂಕಾರ ಇಲ್ಲಿ ಮಾಡಲಾಗಿದ್ದು ಅದು ಹಾಗೇ ಇದೆಯಂತೆ ಮಾತ್ರವಲ್ಲದೆ ನಾಯಿ ಪ್ರಿಯರಾದ ಸಿಂಪಲ್ ಸ್ಟಾರ್ ನಾಯಿ ಸಾಕಲು ಸಾಕಷ್ಟು ಸ್ಥಳ ಮೀಸಲಾಗಿಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೆ ತಮ್ಮ ಶೂಟಿಂಗ್ ಕೆಲಸಕ್ಕೆ ಅನುವಾಗಲು ಕೆಲವು ಜಾಗ ಇಟ್ಟಿದ್ದಾರಂತೆ.
ರವಿಚಂದ್ರನ್ (Ravichandran) ಅವರಂತೆ ತಮ್ಮ ಸ್ವಂತ ಮನೆಯನ್ನೆ ಶೂಟಿಂಗ್ ಎರಿಯಾ ಮಾಡಲು ರಕ್ಷಿತ್ ಅವರು ಕೆಲವೊಂದಿಷ್ಟು ಪ್ಲ್ಯಾನ್ ಮಾಡಿದ್ದಾರೆ. ಸುಮಾರು 10ವರ್ಷ ಬೆಂಗಳೂರಿನ ಆರ್ ಆರ್ ನಗರದಲ್ಲಿ ಬಾಡಿಗೆ ಮನೆಲಿದ್ದ ಉತ್ತರ ಹಳ್ಳಿಯ ಮುಖ್ಯರಸ್ತೆಯಲ್ಲಿ ಇವರು ಸುಮಾರು 159ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಮನೆಯನ್ನು ನಿರ್ಮಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.