Dr Rajkumar: ಅಣ್ಣಾವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಾಗ ಚಪ್ಪಲಿ ಎಸೆತ ಅಗಿದ್ದೇಕೆ! ಇಲ್ಲಿದೆ ಸತ್ಯ

Advertisement
Dr Rajkumar ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಬೆಟ್ಟದ ಹೂವು ಆಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಕೂಡ ಮಾಡುವಂತ ಅತ್ಯುನ್ನತ ಪ್ರಶಸ್ತಿ ಯಾಗಿರುವ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯನ್ನು ಮರಣೋತ್ತರವಾಗಿ ಸಿನಿಮಾ ಹಾಗೂ ಸಮಾಜಸೇವೆಯಲ್ಲಿ ಮಾಡಿರುವಂತಹ ಸಾಧನೆಯನ್ನು ಗುರುತಿಸಿ ನೀಡಲಾಗಿದೆ. ಪ್ರತಿಯೊಬ್ಬರೂ ಕೂಡ ಇದರಿಂದಾಗಿ ಕರ್ನಾಟಕ ರತ್ನ ಪ್ರಶಸ್ತಿಯ ಗೌರವವೇ ಹೆಚ್ಚಾಗಿದೆ ಎಂಬುದಾಗಿ ನಮ್ಮ ಮನಸ್ಸಿನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು 1992ರ ಇಸವಿಯಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಆರಂಭಿಸುವಾಗ ಮೊದಲಿಗೆ ಇದನ್ನು ಅಣ್ಣಾವ್ರಿಗೆ ನೀಡುವ ಮೂಲಕ ಪ್ರಾರಂಭಿಸಬೇಕು ಎನ್ನುವುದಾಗಿ ರಾಜ್ಯ ಸರ್ಕಾರ ಯೋಜನೆಯನ್ನು ಹಾಕಿಕೊಂಡಿತ್ತು. ಆದರೆ ರಾಜಕುಮಾರ್(Rajkumar) ಅವರು ಮಾತ್ರ ಇಂತಹ ದೊಡ್ಡ ಮಟ್ಟದ ಗೌರವಕ್ಕೆ ನಾನು ಅರ್ಹನಲ್ಲ ಅದರಲ್ಲಿಯೂ ಮೊದಲನೇದಾಗಿ ಈ ಪ್ರಶಸ್ತಿಯನ್ನು ನನಗೆ ನೀಡಬೇಡಿ ಎಂಬುದಾಗಿ ನಯವಾಗಿಯೇ ತಿರಸ್ಕರಿಸಿದ್ದರು. ಆಗ ಅಣ್ಣಾವ್ರ ಕೋರಿಕೆ ಮೇರೆಗೆ ಕುವೆಂಪು ಅವರಿಗೆ ಇದರ ಮೊದಲ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. ಅದಾಗಲೇ ಸಾಹಿತ್ಯ ಲೋಕದಲ್ಲಿ ಕುವೆಂಪು(Kuvempu) ಅವರು ತಮ್ಮದೇ ಆದಂತಹ ಸಾಮ್ರಾಜ್ಯವನ್ನು ಸೃಷ್ಟಿಸಿದ್ದರು.
ಅದಾದ ನಂತರ ರಾಜ್ಯ ಸರ್ಕಾರ ಅದೇ ಇಸವಿಯಲ್ಲಿ ಅದೇ ವಿಧಾನಸೌಧದ ಮೆಟ್ಟಿಲಿನ ಎದುರು ಭಾಗದಲ್ಲಿ ನಟಸಾರ್ವಭೌಮ ಆಗಿರುವಂತಹ ರಾಜಕುಮಾರ್(Rajkumar) ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುನ್ನತ ಗೌರವ ಆಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಈ ಸಂದರ್ಭದಲ್ಲಿ ಕಿಡಿಗೇಡಿ ಒಬ್ಬ ಚಪ್ಪಲಿಯನ್ನು ಎಸೆದು ಅಲ್ಲಿ ಒಂದು ಕ್ಷಣ ದೊಡ್ಡ ಮಟ್ಟದ ಗದ್ದಲವೇ ಸೃಷ್ಟಿಯಾಗುವಂತೆ ಮಾಡುತ್ತಾನೆ. ಅದರ ಹಿಂದಿನ ನಿಜವಾದ ಕಾರಣ ಏನೆಂಬುದನ್ನು ತಿಳಿಯೋಣ ಬನ್ನಿ.
ಆ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಎಸ್ ಬಂಗಾರಪ್ಪ(S Bangarappa) ಅವರು ರಾಜಕುಮಾರ ಅವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. ಆಗ ಕೆಲವು ರೋ’ ಗಿಷ್ಟ ಮನಸ್ಸಿನ ಜನರಲ್ಲಿ ರಾಜಕುಮಾರ್ ಅವರು ಎಸ್ ಬಂಗಾರಪ್ಪ ಅವರ ಬೀಗರಾಗಿರುವ ಕಾರಣದಿಂದಾಗಿ ಅವರಿಗೆ ಈ ಪ್ರಶಸ್ತಿ ಸಿಗುತ್ತಿದೆ ಎಂಬುದಾಗಿ ಕೆಟ್ಟ ಭಾವನೆ ಇತ್ತು. ಇನ್ನು ಕೆಲವರಿಗೆ ರಾಜಕೀಯವಾಗಿ ಎಸ್ ಬಂಗಾರಪ್ಪ ಅವರ ಮೇಲೆ ದ್ವೇಷ ಇದ್ದ ಕಾರಣದಿಂದಾಗಿ ಬಂಗಾರಪ್ಪ(Bangarappa) ಅವರ ಮೇಲೆ ಚಪ್ಪಲಿಯನ್ನು ಎಸೆದಿರುತ್ತಾರೆ. ಆ ಸಮಯದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ ಈ ಸಂದರ್ಭದಲ್ಲಿ ಅಣ್ಣಾವ್ರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಗುತ್ತಿರುವ ಬಗ್ಗೆ ಯಾರಲ್ಲಿಯೂ ಕೂಡ ಅಸಮಾಧಾನ ಇರಲಿಲ್ಲ.