Actress Ramya: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟಿ ರಮ್ಯಾ ವಿರುದ್ಧ ಸಿಡಿದೆದ್ದ ಕನ್ನಡಿಗರು
ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮ ಯಾವಾಗ ಸ್ಟಾರ್ಟ್ ಆಗುತ್ತಪ್ಪ ಎಂದು ಕಾಯುತ್ತಿದ್ದ ಜನರಿಗೆ ಇದೀಗ ಖುಷಿ ನೀಡುತ್ತಿದೆ. ಸೀಸನ್ 5 (Sesion 5) ಮೊದಲ ಎಪಿಸೋಡ್ ಅದ್ಧೂರಿಯಾಗಿ ಆರಂಭಗೊಂಡಿದ್ದು ಇದೀಗ ನಟಿ ರಮ್ಯಾ (Ramya) ಅವರು ಜೀವನ ಚಿತ್ರ ಅನಾವರಣ ಆಗಿದೆ. ರಮ್ಯಾ ಅವರು ತಮ್ಮ ಜೀವನದ ಕಂಪ್ಲೀಟ್ ದೃಶ್ಯ ಕಂಡು ಭಾವನಾತ್ಮಕವಾಗಿದ್ದಾರೆ.
ವೀಕೆಂಡ್ ವಿತ್ ರಮೇಶ್ ಆರಂಭ ಎಂದಾಗಲೇ ಬಹುತೇಕರಿಗೆ ಯಾರೆಲ್ಲ ಸೆಲೆಬ್ರಿಟಿ ಬರಬಹುದು ಎಂಬುದೇ ದೊಡ್ಡ ಕುತೂಹಲ ವಾಗಿತ್ತು. ಈ ಮೂಲಕ ಮೊದಲ ಅತಿಥಿಯಾಗಿ ಮೊಹಕತಾರೆ ಎಂಟ್ರಿ ಕೊಟ್ಟಿದ್ದನ್ನು ಜೀ ವಾಹಿನಿಯೂ (Zee chanel) ಈ ಮೊದಲೇ ತಮ್ಮ ವಾಹಿನಿಯಲ್ಲಿ ಪ್ರಮೋಶನ್ ನೀಡಿ ಪ್ರಚಾರ ಕೂಡ ನೀಡಿದರು. ಈ ಮೂಲಕ ಶನಿವಾರ ಮತ್ತು ಭಾನುವಾರದ ಎಪಿಸೋಡ್ ಬಹುತೇಕ ವೀಕ್ಷಕರ ಮೆಚ್ಚಿನದ್ದಾಗಿದ್ದು ಟಿಆರ್ ಪಿ ಲೆವಲ್ ಕೂಡ ಉನ್ನತ ಮಟ್ಟದಲ್ಲೇ ಇದೆ ಎನ್ನಬಹುದು. ರಮ್ಯ ಅವರ ಬಾಲ್ಯ ಜೀವನ, ಶಿಕ್ಷಕರು, ಕಾಲೇಜು ಲೈಫ್ , ಸಿನೆಮಾ , ರಾಜಕೀಯ ಇನ್ನು ಅನೇಕ ವಿಧವಾದ ವೈಯಕ್ತಿಕ ಜೀವನದ ಚಿತ್ರಣ ಇಲ್ಲಿ ಅನಾವರಣ ಆಗಿದೆ.
ಟ್ರೋಲ್ ಎಪಿಸೋಡ್
ಈ ಬಾರಿಯ ಮೊದಲ ಸಂಚಿಕೆ ಎಷ್ಟು ಫೇಮಸ್ ಆಗಿದೆಯೋ ಅಷ್ಟೇ ಟ್ರೋಲ್ ಕೂಡ ಆಗಿದೆ. ರಮ್ಯಾ ಅವರು ಇಡೀ ಎಪಿಸೋಡ್ ನಲ್ಲಿ ಕನ್ನಡಕ್ಕಿಂತಲೂ ಆಂಗ್ಲಭಾಷೆಯನ್ನೇ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಕನ್ನಡ ಬಂದರೂ ಬೇಕಂತಲೇ ಸ್ಕೋಪ್ ನೀಡುತ್ತಾರೆ. ಈ ಮೂಲಕ ರಾಘವೇಂದ್ರ ಹುಣಸೂರು (Ragavendra Hunasuru) ಅವರಿಗೆ ಟ್ಯಾಗ್ ಮಾಡಿ ಇದು ಕಂಗ್ಲೀಶ್ ಪ್ರೋಗ್ರಾಂ (kanglish) ರಶ್ಮಿಕಾ (Rashmika) ಅವರಂತೆ ಇವರು ಬಿಡಿ ಎಂದೆಲ್ಲ ಟ್ರೋಲ್ ಮಾಡಿದ್ದಾರೆ. ಹಾಗಿದ್ದರೂ ರಮ್ಯಾ ಅವರು ಕಾರ್ಯಕ್ರಮದಲ್ಲಿ ಅಗತ್ಯ ಬಿದ್ದಾಗ ಮಾತ್ರ ಆಂಗ್ಲ ಭಾಷೆ ಮಾತಾಡಿದ್ದು ಬಿಟ್ಟರೆ ಅದರಲ್ಲಿ ಯಾವುದೇ ವೈಯಕ್ತಿಕ ಧೋರಣೆ ಇಲ್ಲ ಎಂದೆಲ್ಲ ಕಮೆಂಟ್ ಸಹ ಮಾಡಲಾಗಿದೆ.