Kiccha Sudeep: ರಕ್ಷಿತ್ ಶೆಟ್ಟಿಗೆ ಸಿಕ್ಕಾಪಟ್ಟೆ ಬೈದ್ದಿದ್ದೇನೆ ಎಂದ ಸುದೀಪ್, ಇಲ್ಲಿದೆ ಸುದೀಪ್ ಹೇಳಿಕೆ

Advertisement
ಸಿನಿಮಾರಂಗ ಎಂದ ಮೇಲೆ ನಟ ನಟಿಯರು ಒಳ್ಳೆಯ ಬಾಂಧವ್ಯವನ್ನು ಹೊಂದಿರುತ್ತಾರೆ. ಹೌದು, ಪ್ಯಾನ್ ಇಂಡಿಯಾ ಸ್ಟಾರ್ ಗಳಾದ ಕಿಚ್ಚ ಸುದೀಪ್ ( Kiccha Sudeep ) ಹಾಗೂ ರಕ್ಷಿತ್ ಶೆಟ್ಟಿ (Rakshith Shetty ) ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಈ ಇಬ್ಬರೂ ನಟರು ಒಬ್ಬರ ಬಗ್ಗೆ ಒಬ್ಬರು ಹೊಗಳಿಕೊಂಡಿದ್ದಾರೆ.
ಸದ್ಯಕ್ಕೆ ಈ ಇಬ್ಬರೂ ಸ್ಟಾರ್ ನಟರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತ್ ಶೆಟ್ಟಿಯವರ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಗ್ಗೆ ಕಿಚ್ಚ ಸುದೀಪ್ ಅವರು ಮಾತೇನಾಗಿತ್ತು?
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್ ಅವರು, ” ನಮ್ಮ ಮುಂದಿನ ಜನರೇಶನ್ ಅವರು ಬೆಳೆಯುತ್ತ ಹೋಗುತ್ತಾರೆ. ನಾವು ಸೈಡ್ ನಲ್ಲಿ ನಿಲ್ಲುವ ಕಾಲ ಕೂಡ ಬರುತ್ತದೆ. ರಕ್ಷಿತ್ ಶೆಟ್ಟಿಯವರು ನನ್ನ ಹತ್ರ ಬೈಸಿಕೊಂಡಷ್ಟು ಬೇರೆ ಯಾರ ಹತ್ರ ಕೂಡ ಬೈಸಿಕೊಳ್ಳಲ್ಲ, ಅದು ನಮ್ಮಿಬ್ಬರಿಗೆ ಮಾತ್ರ ಗೊತ್ತಿರುತ್ತೆ.
ಒಬ್ಬ ವ್ಯಕ್ತಿಯನ್ನು ನಾವು ಇಷ್ಟ ಪಡ್ತೇವೆ ಅಂದರೆ ಅವರು ನಮ್ಮ ಫ್ಯಾಮಿಲಿ. ಅವರ ಕೆಲವು ಟ್ವೀಟ್(Twitter) ವಿಚಾರದಲ್ಲಿ ನಾವು ಟೆಕ್ಸ್ಟ್ ಹಾಕಿ ಯಾಕೆ ಇದೆಲ್ಲಾ ಹೇಳಿಕ್ಕೆ ಹೋಗ್ತೀರಾ ಹೇಳ್ತೇನೆ. ನಮ್ಮ ಜೊತೆಗೆ ಸಿನಿಮಾ ಬಗ್ಗೆ ಮಾತಾಡಿರ್ತಾರೆ ಆದರೆ ಅವರು ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿರ್ತಾರೆ. ಹಾಗಂತ ಆ ವ್ಯಕ್ತಿಯನ್ನು ಪ್ರೀತಿಸುತ್ತೇವೆ. ಇವತ್ತಿಗೂ ನಮ್ಮ ಹತ್ರ ಹೇಳಿಲ್ಲ ಅಂದ್ರು ಅವರ ಸಿನಿಮಾ ಮೇಲೆ ಒಂದು ಕಣ್ಣು ಇಟ್ಟಿರುತ್ತೇವೆ, ಚೆನ್ನಾಗಿ ಮಾಡಿದ್ದಾರಾ ಅಂತ, ಯಾಕಂದ್ರೆ ಅವರು ನಮ್ಮ ಇಂಡಸ್ಟ್ರಿಯ ಫ್ಯೂಚರ್ ಸ್ಟಾರ್ “ಎಂದಿದ್ದಾರೆ.
ಸಿಂಪಲ್ ಸ್ಟಾರ್ ನಟನೆಯ ʻಸಪ್ತಸಾಗರದಾಚೆ ಎಲ್ಲೋʼ ಶೂಟಿಂಗ್ ಮುಕ್ತಾಯ
ಸಿನಿ ಬದುಕಿನಲ್ಲಿ ಬ್ಯುಸಿಯಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಹುನಿರೀಕ್ಷಿತ ʻಸಪ್ತಸಾಗರದಾಚೆ ಎಲ್ಲೋʼ ಚಿತ್ರದ ಶೂಟಿಂಗ್ ಮುಗಿಸಿದ್ದು, ರಕ್ಷಿತ್ ಶೆಟ್ಟಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಬರೋಬ್ಬರಿ 137 ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮಾಡಿರುವ ಚಿತ್ರತಂಡ ಕಡಲ ತಡಿಯಲ್ಲಿ ಪೂಜೆ ಸಲ್ಲಿಸಿ ಕುಂಬಳ ಕಾಯಿ ಒಡೆದು ಚಿತ್ರೀಕರಣಕ್ಕೆ ಪೂರ್ಣ ವಿರಾಮ.ಹಾಡಿದೆ.
ಚಿತ್ರೀಕರಣ ಪೂರ್ಣಗೊಂಡಿರುವ ವಿಚಾರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸಿನಿಮಾದ ಪ್ರೊಡಕ್ಷನ್ ವರ್ಕ್ ಆರಂಭವಾಗಿದೆ. ನಿರ್ದೇಶಕ ಹೇಮಂತ್ `ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದಲ್ಲಿ ನಟ ರಕ್ಷಿತ್‌ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ನಟಿಸಿದ್ದಾರೆ. ಒಟ್ಟಿನಲ್ಲಿ ಈ ಸಪ್ತಸಾಗರದಾಚೆ ಎಲ್ಲೋ’ ಸಿನಿ ಪ್ರೇಕ್ಷಕರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.