Raj B Shetty: ಕೊನೆಗೂ ಸಿಹಿಸುದ್ದಿ ಕೊಟ್ಟ ರಾಜ್ ಬಿ ಶೆಟ್ಟಿ

Advertisement
ಸ್ಯಾಂಡಲ್ ವುಡ್ ನ(SandalWood) ಭರವಸೆಯ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ಸಿನಿಮಾ ಕಥೆ ಅದ್ಭುತವಾಗಿರುತ್ತದೆ ಆದರೆ ಹೆಚ್ಚಿನ ಬಜೆಟ್(Budget) ಇರುವುದಿಲ್ಲ. ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಚಿತ್ರ ನಿರ್ಮಿಸುವ ಕಲೆ ರಾಜ್ ಬಿ ಶೆಟ್ಟಿ ಅವರಿಗೆ ಕರಗತವಾಗಿಬಿಟ್ಟಿದೆ. ಈಗಾಗಲೇ ಎರಡು, ಮೂರು ಸಿನಿಮಾಗಳನ್ನು ಮಾಡಿ ಗೆದ್ದಿರುವ ರಾಜ್ ಬಿ ಶೆಟ್ಟಿ(Raj B Shetty) ಮೋಹಕ ತಾರೆ ರಮ್ಯಾ(Ramya) ಪ್ರೊಡಕ್ಷನ್ ಆಪಲ್ ಕಟ್ ನಲ್ಲಿ ಸ್ವಾತಿ ಮುತ್ತಿನ ಮಳೆ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.
ಆದರೆ ಈ ಸಿನಿಮಾದ ಜೊತೆಗೆ ಸೈಲೆಂಟ್ ಆಗಿ ಟೋಬಿ ಸಿನಿಮಾದ ಕೆಲಸವನ್ನು ಕೂಡ ಕೊನೆಯ ಹಂತಕ್ಕೆ ತಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರಾಜ್ ಬಿ ಶೆಟ್ಟಿ ಅವರ ಸಿನಿಮಾಕ್ಕೆ ಬೇಡಿಕೆ ಹೆಚ್ಚಾಗಿದೆ. ಈಗಲೇ ರಾಜ್ ಬಿ ಶೆಟ್ಟಿ ರಿವೆಂಜ್ ಸ್ಟೋರಿ ಒಂದರ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಅದಕ್ಕೆ ಈಗ ಟೈಟಲ್ ಕೂಡ ಫಿಕ್ಸ್ ಆಗಿದ್ದು ’ಟೋಬಿ; ಎಂದು ನಾಮಕರಣ ಮಾಡಲಾಗಿದೆ. ಈ ಸಿನಿಮಾವನ್ನು ಬಾಸಿಲ್ ಅಲ್ಚಕ್ಕಲ್ ನಿರ್ದೇಶನ ಮಾಡಿದರೆ ಕಥೆ ರಾಜ ಬಿ ಶೆಟ್ಟಿ ಅವರದ್ದು. ಜೊತೆಗೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಕೂಡ ರಾಜ್ ಬಿ ಶೆಟ್ಟಿ ನಿಭಾಯಿಸಿದ್ದಾರೆ.
ಇನ್ನು ಈ ಸಿನಿಮಾಕ್ಕೆ ಚೈತ್ರ ಆಚಾರ್ ಹಾಗೂ ಸಂಯುಕ್ತ ಹೊರನಾಡ್ ಅವರು ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಅಂದ ಹಾಗೆ ರಾಜ ಬಿ ಶೆಟ್ಟಿ ಈವರೆಗೆ ಮಾಡಿರುವ ಎಲ್ಲಾ ಸಿನಿಮಾಗಳಿಗಿಂತಲೂ ಈ ಸಿನಿಮಾ ಹೆಚ್ಚು ಬಜೆಟ್ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಯಾವಾಗಲೂ ಸ್ಟಂಟ್ ಕೊರಿಯೋಗ್ರಾಫಿ ಕೂಡ ತಾವೇ ಮಾಡುತ್ತಿದ್ದ ರಾಜ್ ಬಿ ಶೆಟ್ಟಿ ಅವರು ಈ ಬಾರಿ ಸ್ಟಂಟ್ ಮಾಸ್ಟರ್ ಕೂಡ ನೇಮಿಸಿಕೊಂಡಿದ್ದಾರಂತೆ.
‘ಕಲಾವಿದನಿಗೆ ನೋವು ಕೊಟ್ಟಾಗ ಕವಿತೆಯೊಂದು ಹೊರಬರುತ್ತದೆ’ ಎಂದು ರಾಜ್ ಬಿ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದರು. ಅಂದ್ರೆ ಅವರ ಮುಂಬರುವ ಸಿನಿಮಾಗಳಲ್ಲಿ ಹೊಸತನ, ಕುತೂಹಲ ಇದ್ದೇ ಇರುತ್ತೆ ಎಂದು ಅರ್ಥ. ಟೋಬಿ ಸಿನಿಮಾ ಒಂದು ಕಾಲ್ಪನಿಕ ಕಥೆಯನ್ನು ಹೊಂದಿದೆ ಮಿಥುನ್ ಮುಕುಂದನ್ ಸಂಗೀತ ನೀಡಿದರೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.