Shwetha Chengappa: ಸೃಜನ್ ಕಂಡ್ರೆ ಆಗ್ತಾ ಇರಲಿಲ್ಲ, ಸತ್ಯ ಹೊರಹಾಕಿದ ಮಜಾ ಟಾಕೀಸ್ ಶ್ವೇತ ಚಂಗಪ್ಪ ಹೇಳಿದ್ದೇ ಬೇರೆ
ಕನ್ನಡದ ಹೆಸರಾಂತ ನಿರೂಪಕಿ, ನಟಿ ಶ್ವೇತಾ ಚೆಂಗಪ್ಪ (Shwetha chengapaa) ಅವರು ಹಲವಾರು ಸಿನೆಮಾದಲ್ಲಿ ಸಹಕಲಾವಿದೆ, ಪೋಷಕ ನಟಿಯಾಗಿ ನಟಿಸಿ ಜನಮಾನ್ಯತೆ ಪಡೆದಿದ್ದಾರೆ. ಸುಕನ್ಯಾ, ಸುಮತಿ, ಕಾದಂಬರಿ, ಅರುಂಧತಿ ಇನ್ನು ಅನೇಕ ಧಾರವಾಹಿಯಲ್ಲಿ ಮುಖ್ಯ ನಾಯಕಿಪಾತ್ರದಲ್ಲೂ ಮಿಂಚಿದ್ದರು ಬಳಿಕ ಮದುವೆಯಾಗಿ ಬಣ್ಣದ ಲೋಕದಿಂದ ದೂರಾಗಿದ್ದರು, ಬಳಿಕ ಸೃಜನ್ ಲೋಕೇಶ್ ಅವರೊಂದಿಗೆ ಮಜಾ ಟಾಕೀಸ್ ನಲ್ಲಿ ರಾಣಿಯಾಗಿ ಮೆರೆದು ಬಳಿಕ ಒಂದೆರೆಡು ಶೋ ನಲ್ಲಿ ನಿರೂಪಕಿಯಾಗಿ ಸಹ ಇದ್ದಾರೆ.
ಸಿನೆಮಾದಲ್ಲೂ ಸೈ
ಸಿನೆಮಾದಲ್ಲಿ ನಟಿಸಿದ್ದಾರೆ ಶ್ವೇತಾ ಅವರು. ವಿಷ್ಣು ವರ್ಧನ್ (vishnuvardhan), ದರ್ಶನ್ (Dharashan) ಅವರ ಜೊತೆ ತಂಗಿ ಪಾತ್ರ ನಟಿಸಿದ್ದು ಮಾತ್ರವಲ್ಲದೇ ವೇದಾ ಸಿನೆಮಾದಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಮದುವೆಯಾದ ಬಳಿಕ ಸೆಕೆಂಡ್ ಇನ್ನಿಂಗ್ಸ್ ಅಂತೂ ಬರ್ಜರಿಯಾಗೇ ನಡೆದಿದೆ.
ಸೃಜನ್ ಅಂದ್ರೆ ಆಗ್ತಿರಲಿಲ್ಲ
ಮಜಾ ಟಾಕೀಸ್(Maja Talkis) ನಿಮಗೆಲ್ಲ ಪರಿಚಯ ಇರಬಹುದು. ಇದರಲ್ಲಿ ಶ್ವೇತಾ ಚೆಂಗಪ್ಪ ಅವರು ರಾಣಿ ಪಾತ್ರದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇದರಲ್ಲಿ ಅಭಿನಯಿಸುವ ಮೊದಲು ಸೃಜನ್ ಅವರಿಗೆ ತುಂಬಾ ಅಹಂಕಾರ ಇದೆ ಗತ್ತು ಇದೆ ಎಂದು ಅಂದುಕೊಂಡಿದ್ದೆ ಆದರೆ ಅವರ ನಿಜ ಸ್ವಾಭಾವ ಮತ್ತೆ ಗೊತ್ತಾದದ್ದು. ಗ್ರಿಷ್ಮಾ (Greeshma) ಅವರು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದ ಬಳಿಕ ಎಲ್ಲ ವಿಚಾರ ತಿಳಿಯಿತು ಎಂದಿದ್ದಾರೆ.
ಒಟ್ಟಾರೆಯಾಗಿ ಶ್ವೇತಾ ಚೆಂಗಪ್ಪ ಅವರು ಈಗ ಆಲ್ ರೌಂಡರ್ ಆಗಿದ್ದು ಮುಂದಿನ ದಿನದಲ್ಲಿ ಸಿನೆಮಾ ಹಾಗೂ ಕಿರುತೆರೆಯಲ್ಲಿ ಮತ್ತಷ್ಟು ಪ್ರತಿಭೆಗಳನ್ನು ತೋರಿಸಲಿದ್ದಾರೆ ಎನ್ನಬಹುದು. ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. ಅರುಂಧತಿ ಸೀರಿಯಲ್‍ನಲ್ಲಿನ ನಟನೆಗಾಗಿ ಕರ್ನಾಟಕ ಸರಕಾರ ನೀಡುವ ಮಧ್ಯಂಸನ್ಮಾನ ಪ್ರಶಸ್ತಿ ಕೂಡ ಪಡೆದಿದ್ದಾರೆ