Abhishek Ambareesh: ಭಾವಿ ಪತ್ನಿ ಅವಿವಾ ಬಿದ್ದಪ್ಪರನ್ನು ಪ್ರೀತಿಯಿಂದ ನಟ ಅಭಿಷೇಕ್ ಅಂಬರೀಶ್ ಏನೆಂದು ಕರೆಯುತ್ತಾರೆ ಗೊತ್ತಾ?

Advertisement
ಚಂದನವನದ ನಟ ಅಭಿಷೇಕ್ ಅಂಬರೀಶ್ ( Abhishek Ambarish ) ಭರವಸೆಯ ನಟ ಎನಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಟ ರಾಜಕೀಯ ಅಖಾಡಕ್ಕೂ ಇಳಿಯುತ್ತಾರೆ ಎನ್ನಲಾಗಿದೆ. ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ತನ್ನ ತಾಯಿಗೆ ರಾಜಕೀಯ ರಂಗದಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಈ ಬ್ಯುಸಿಯ ನಡುವೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ನಟ ಅಭಿಷೇಕ್ ಅಂಬರೀಶ್ ತನ್ನ ಭಾವಿ ಪತ್ನಿ ಅವಿವಾ (Avivaa) ಹಾಗೂ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದಾರೆ. .
ಭಾವಿ ಪತ್ನಿಯನ್ನು ಪ್ರೀತಿಯಿಂದ ಕರೆಯುವುದೇನು?
ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, “ಲವ್ ಲೈಫ್ ಆರಾಮದಾಯಕವಾಗಿದೆ. ನನ್ನ ಲೈಫ್ ನಲ್ಲಿ ನನ್ನ ಕೆರಿಯರ್, ನನ್ನ ಗೋಲ್ಸ್, ನನ್ನ ಡ್ರೀಮ್ಸ್ ಗೆ ಸಪೋರ್ಟಿವ್ ಆಗಿ ನಿಂತುಕೊಳ್ಳುವವರು ಬೇಕಿತ್ತು. ಆ ತರಹನೇ ಒಬ್ರು ಸಿಕ್ಕಿದ್ದಾರೆ, ನಾನು ಹ್ಯಾಪಿ” ಎಂದಿದ್ದಾರೆ. ಅವಿವಾರನ್ನು ಏನಂತ ಕರೀತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಟ ಹೆಸರಿಡಿದು ಕರೆಯುತ್ತೇನೆ. ಕೆಲವೊಮ್ಮೆ ಎಲ್ಲರನ್ನು ಕರೆಯುವ ಹಾಗೆ ರಾಜಾ ಎನ್ನುತ್ತೇನೆ, ಅದು ಕೂಡ ಅಭ್ಯಾಸ ಆಗಿ ಬಿಟ್ಟಿದೆ” ಎಂದಿದ್ದಾರೆ.
ಎಲ್ಲರ ಒಪ್ಪಿಗೆ ಪಡೆದು ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಜೋಡಿ:
ಕಳೆದ ವರ್ಷ ಡಿಸೆಂಬರ್ 11 ರಂದು ರೆಬಲ್ ಸ್ಟಾರ್’ ಅಂಬರೀಷ್ ದಂಪತಿಗಳ ಪುತ್ರ ಅಭಿಷೇಕ್ ಅಂಬರೀಷ್ ಅವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಜೊತೆಗೆ ಖಾಸಗಿ ಹೋಟೆಲ್ನಲ್ಲಿ ನಿಶ್ಚಿತಾರ್ಥ ನೆರೆವೇರಿತ್ತು. ಎರಡು ಕುಟುಂಬದವರ ಸದಸ್ಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ಈ ಜೋಡಿ ಪರಸ್ಪರ ಉಂಗುರಗಳನ್ನು ಬದಲಾಯಿಸಿ ಕೊಂಡಿದ್ದರು. ನಗರದ ಪ್ರತಿಷ್ಠಿತ ಫೋರ್ ಸೀಸನ್ಸ್ ಹೊಟೇಲ್‍ನಲ್ಲಿ ನಡೆದ ನಿಶ್ಚಿತಾರ್ಥದಲ್ಲಿ ಅಂಬರೀಷ್ ಹಾಗೂ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪರ ಕುಟುಂಬದವರು, ಸಚಿವ ಅಶ್ವತ್ಥ ನಾರಾಯಣ, ನಿರ್ದೇಶಕ ಆಯೋಗ್ಯ ಮಹೇಶ್, ರಾಕ್ ಲೈನ್ ವೆಂಕಟೇಶ್, ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ಸೇರಿದಂತೆ ಕೆಲ ನಿರ್ಮಾಪಕರು, ನಿರ್ದೇಶಕರು, ಆಪ್ತರು ಮಾತ್ರ ಪಾಲ್ಗೊಂಡಿದ್ದರು.
ಸಾಲು ಸಾಲು ಸಿನಿಮಾಗಳಲ್ಲಿ ನಟ ಅಭಿಷೇಕ್ ಬ್ಯುಸಿ
ನಟ ಅಭಿಷೇಕ್ ಅಂಬರೀಶ್ ಅವರ ಕೈಯಲ್ಲಿ ಬ್ಯಾಡ್ ಮ್ಯಾನರ್ಸ್ ( Bad (Manars) , ಕಾಳಿ ( Kali ), ಮದಗಜ ( Madagaja) ಸಿನಿಮಾಗಳಿವೆ. ಈಗಾಗಲೇ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಿನಿಮಾದ ಫಸ್ಟ್ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ಗಾಯಕಿ ಉಷಾ ಉತ್ತುಪ್ ಈ ಗೀತೆಗೆ ಧ್ವನಿ ನೀಡಿದ್ದು, ಧನಂಜಯ್ ರಾಜನ್ ಸಾಹಿತ್ಯ ಬರೆದಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಫಸ್ಟ್ ಟೈಟಲ್ ಟ್ರ್ಯಾಕ್ ಕೇಳಿ (Fist title track ) ಫ್ಯಾನ್ಸ್ ಫಿದಾ ಆಗಿದ್ದಾರೆ. ಬಹುನಿರೀಕ್ಷಿತ ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಅಂಬರೀಶ್ ಅವರ ಜೊತೆಗೆ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ದುನಿಯಾ ಸೂರಿ ಆಕ್ಷನ್ ಕಟ್ ಹೇಳಿರುವ ಈ ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ಕೆ.ಎಂ.ಸುಧೀರ್ ನಿರ್ಮಾಣ ಮಾಡಿದ್ದು, ಚರಣರಾಜ್ ಸಂಗೀತ ನೀಡಿದ್ದಾರೆ. ಬ್ಯಾಡ್ ಮ್ಯಾನರ್ಸ್ ಸಿನಿಮಾದ ಬಗ್ಗೆ ಫ್ಯಾನ್ಸ್ ಬಹಳಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ