Abishek Ambareesh: ಕಾರ್ ಡ್ರೈವರ್ ಮೇಲೆ ಗರಂ ಆದ ಅಭಿಷೇಕ್ ಅಂಬರೀಶ್, ಆಗಿದ್ದೇ ಬೇರೆ.

Advertisement
ಕನ್ನಡ ಚಿತ್ರರಂಗದ ಪ್ರೀತಿಯ ಹಾಗೂ ಕರ್ನಾಟಕದ ಜನರ ಪ್ರೀತಿಯ ಮಂಡ್ಯದ ಗಂಡು ಆಗಿರುವಂತಹ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ಮಗ ಆಗಿರುವಂತಹ ಅಭಿಷೇಕ್ ಅಂಬರೀಶ್ (Abishek Ambareesh) ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಮಾಡಿದ್ದು ಒಂದೇ ಚಿತ್ರ ಆಗಿದ್ದರೂ ಕೂಡ ಕೇವಲ ಒಂದೇ ಒಂದು ಸಿನಿಮಾದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟವನ್ನು ಗಳಿಸಿಕೊಂಡಿದ್ದಾರೆ. ಇದರ ಮೂಲಕ ಜನರು ಅಂಬರೀಶ್ ಕುಟುಂಬದ ಮೇಲೆ ಇಟ್ಟಿರುವಂತಹ ಪ್ರೀತಿಯ ಮೌಲ್ಯ ತಿಳಿದು ಬರುತ್ತದೆ.
ತಂದೆ ಅಂಬರೀಶ್ ಅವರ ಹಾದಿಯಲ್ಲಿ ಅವರ ಪತ್ನಿ ಆಗಿರುವಂತಹ ಅಂದರೆ ಅಭಿಷೇಕ್ ಅಂಬರೀಶ್ ಅವರ ತಾಯಿಯಾಗಿರುವಂತಹ ಸುಮಲತಾ ಅಂಬರೀಶ್ (Sumalatha Ambareesh) ಕೂಡ ರಾಜಕೀಯ ಹಾದಿಯನ್ನು ತುಳೆದಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಷೇಕ್ ಅಂಬರೀಶ್ ಅವರು ಕೂಡ ರಾಜಕೀಯಕ್ಕೆ ಪ್ರವೇಶ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ. ಇನ್ನು ಸದ್ಯಕ್ಕೆ ಅಂಬರೀಶ್ ಅವರ ಸ್ಮಾರಕವನ್ನು ರಾಜ್ಯ ಸರ್ಕಾರ ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದು ಈ ಸಂದರ್ಭದಲ್ಲಿ ಅಭಿಷೇಕ್ ಅಂಬರೀಶ್ (Abishek Ambareesh) ಸೇರಿದಂತೆ ಕುಟುಂಬಸ್ಥರೆಲ್ಲರೂ ಕೂಡ ಹಾಜರಿದ್ದರು.
ಇನ್ನು ಇದೇ ಸಂದರ್ಭದಲ್ಲಿ ನಡೆದಿರುವಂತಹ ಒಂದು ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ವೈರಲ್ ಆಗುತ್ತಿದೆ. ಕಾರ್ಯಕ್ರಮ ಮುಗಿಸಿಕೊಂಡು ಕಾರಿನ ಮೂಲಕ ಮನೆಗೆ ಹೋಗಲು ಅಭಿಷೇಕ್ ಅಂಬರೀಶ್ (Abishek Ambareesh) ರವರು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಡ್ರೈವರ್ ಕಾರಿನ ಕೀಯನ್ನು ಮರೆತಿರುತ್ತಾನೆ. ಅದೇ ಸಂದರ್ಭದಲ್ಲಿ ಅವರು ತಮಾಷೆಯಾಗಿ ಡ್ರೈವರ್ ನನ್ನು ಗದರಿ ಕಾರಿನ ಕೀಯನ್ನು ತರಲು ಹೇಳುತ್ತಾರೆ. ಈ ದೃಶ್ಯ ಈಗಾಗಲೇ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು, ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಹರಿದಾಡುತ್ತಿದೆ.
ತಂದೆ ಅಂಬರೀಶ್ ಕೂಡ ಗದರಿದರೆ ಅಭಿಮಾನಿಗಳೆಲ್ಲರೂ ಕೂಡ ಇಷ್ಟಪಡುತ್ತಿದ್ದರು. ಈಗ ಅದೇ ರೀತಿ ಅವರ ವಾರಿಸುದಾರ ಆಗಿರುವಂತಹ ಜೂನಿಯರ್ ರೆಬೆಲ್ ಸ್ಟಾರ್ (Junior Rebel Star) ಅಭಿಷೇಕ್ ಅಂಬರೀಶ್ ಗದರಿಸಿದರೂ ಕೂಡ ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ತಂದೆಯಂತೆ ಮಗನನ್ನು ಕೂಡ ಕನ್ನಡ ಸಿನಿಮಾ ಅಭಿಮಾನಿಗಳು ಪ್ರತಿಭೆಯನ್ನು ಮೆಚ್ಚಿ ಬೆಳೆಸಲಿ ಎಂಬುದಾಗಿ ಹಾರೈಸೋಣ. ಅಭಿಷೇಕ್ ಅಂಬರೀಶ್ ಅವರ ವ್ಯಕ್ತಿತ್ವದ ಕುರಿತಂತೆ ನಿಮಗಿರುವ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.