Basavaraj Bommai: ಅಂಬರೀಷ್ ಮಗ ಅಭಿಷೇಕ್ ಗೆ ವಿಶೇಷ ಹೆಸರಿನಿಂದ ಕರೆದ ಸಿಎಂ ಬೊಮ್ಮಾಯಿ.

Advertisement
Ambareesh Smaraka ನಮ್ಮೆಲ್ಲರ ನೆಚ್ಚಿನ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ದಹಿಕವಾಗಿ ನಮ್ಮನ್ನೆಲ್ಲ ಅಗಲಿ ಸಾಕಷ್ಟು ವರ್ಷಗಳೇ ಕಳೆದಿರಬಹುದು ಆದರೆ ಇಂದಿಗೂ ಅವರನ್ನು ಪ್ರೀತಿಸುವಂತಹ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರ ರಾಗಿದ್ದಾರೆ. ಇನ್ನು ಸಾಕಷ್ಟು ವರ್ಷಗಳ ನಂತರ ಕೊನೆಗೂ ಕೂಡ ರಾಜ್ಯ ಸರ್ಕಾರ(Karnataka Govt) ಅವರ ಸಮಾಧಿಯ ಬಳಿ ಅವರ ಸ್ಮಾರಕವನ್ನು ನಿರ್ಮಿಸುವ ಮೂಲಕ ಅರ್ಥಪೂರ್ಣವಾಗಿ ಗೌರವವನ್ನು ಸಲ್ಲಿಸಿದೆ.
ಇನ್ನು ಇದೇ ಸಂದರ್ಭದಲ್ಲಿ ಸ್ಮಾರಕವನ್ನು ಉದ್ಘಾಟನೆ ಮಾಡಿ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಹಾಗೂ ಅಂಬರೀಶ್ ಅವರ ನಡುವಿನ ಸ್ನೇಹವನ್ನು ಕೂಡ ಅರ್ಥಪೂರ್ಣವಾಗಿ ಬಣ್ಣಿಸುವ ಮೂಲಕ ತಾವು ಇಬ್ಬರು ಎಷ್ಟು ಚೆನ್ನಾಗಿ ಇದ್ದೇವು ಎಂಬುದನ್ನು ಜನತೆಯ ಮುಂದೆ ಬಿಚ್ಚಿಟ್ಟಿದ್ದಾರೆ. ಅಂಬರೀಶ್ ಅವರ ಸ್ಮಾರಕ(Ambareesh Smaraka) ಎನ್ನುವುದು ನಿಜಕ್ಕೂ ಕೂಡ ಅವರ ಲಕ್ಷಾಂತರ ಅಭಿಮಾನಿಗಳ ಸಾಕಷ್ಟು ವರ್ಷಗಳ ಕನಸಾಗಿದ್ದು ಕೊನೆಗೂ ಕೂಡ ಅದು ಈಡೇರಿದ್ದು ಎಲ್ಲರ ಮುಖದಲ್ಲಿ ಸಂತೋಷವನ್ನು ಮೂಡಿಸಿದೆ.
ಎಲ್ಲಕ್ಕಿಂತ ಪ್ರಮುಖವಾಗಿ ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡುತ್ತಿರುವ ಸಂದರ್ಭದಲ್ಲಿ ಅಂಬರೀಶ್ ಅವರ ಮಗನಾಗಿರುವಂತಹ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ಅವರನ್ನು ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Bommai) ಅವರು ವೇದಿಕೆ ಮೇಲೆ ಕರೆಯುತ್ತಾರೆ. ವೇದಿಕೆ ಮೇಲೆ ಕರೆದು ಅಭಿಷೇಕ್ ಅಂಬರೀಶ್ ಅವರನ್ನು ಯಾವ ಹೆಸರಿನಿಂದ ಕರೆದರು ಎಂಬುದನ್ನು ಕೇಳಿದ ಅಭಿಮಾನಿಗಳು ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ಅಷ್ಟಕ್ಕೂ ಮುಖ್ಯಮಂತ್ರಿಗಳು ಯಾವ ಹೆಸರಿನಿಂದ ಕರೆದರು ಎಂಬುದನ್ನು ತಿಳಿಯೋಣ ಬನ್ನಿ.
ಮೊದಲಿನಿಂದಲೂ ಕೂಡ ಅಂಬರೀಶ್ ಕುಟುಂಬದ(Ambareesh Family) ಜೊತೆಗೆ ಬಾಂಧವ್ಯವನ್ನು ಹೊಂದಿರುವಂತಹ ಬಸವರಾಜ ಬೊಮ್ಮಾಯಿ ಅವರು ಪ್ರೀತಿಯಿಂದ ಅಭಿಷೇಕ್ ಅಂಬರೀಶ್ ಅವರಿಗೆ ಡಬಲ್ ರೆಬೆಲ್ ಎಂಬುದಾಗಿ ಕರೆಯುತ್ತಾರೆ. ದೇಹದಲ್ಲಿ, ಮ್ಯಾನರಿಸಮ್ ನಲ್ಲಿ ಹಾಗೂ ಮುಂದಿನ ದಿನಗಳಲ್ಲಿ ನಟನೆಯಲ್ಲಿ ಕೂಡ ಅಭಿಷೇಕ್ ಅಂಬರೀಶ್ ಡಬಲ್ ಆಗಲಿ ಎಂಬುದಾಗಿ ವೇದಿಕೆ ಮೇಲೆ ಬಸವರಾಜ ಬೊಮ್ಮಾಯಿ ಅವರು ಅಭಿಷೇಕ್ ಅಂಬರೀಶ್ ಅವರ ಕುರಿತಂತೆ ಪ್ರೀತಿಯ ಮಾತುಗಳನ್ನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ರವರನ್ನು ಈ ರೀತಿ ಕರೆದಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.