Yash: ಪೆಪ್ಸಿ ಬ್ರ್ಯಾಂಡಿಗೆ ರಾಯಭಾರಿ ಆದ ರಾಕಿ ಬಾಯ್ ಜಾಹಿರಾತಿಗೆ ಪಡೆದ ಸಂಭಾವನೆ ಎಷ್ಟು?

Advertisement
ಸಿನೆಮಾ ತಾರೆಯರಿಗೆ ಜಾಹಿರಾತಿನಲ್ಲಿ ಬ್ರ್ಯಾಂಡ್ ಅಂಬಾಸಿಡರ್ (Brand Ambassador) ಆಗೋ ಅವಕಾಶ ಸಿಗುವುದು ಇಂದು ಕಾಮನ್ ಆಗಿ ಬಿಟ್ಟಿದೆ. ಪುನೀತ್, ದರ್ಶನ್, ಸುದೀಪ್, ಯಶ್ ನಿಂದ ಹಿಡಿದು ಸಣ್ಣ ಪುಟ್ಟ ಜಾಹಿರಾತಿಗೆ ಕಿರುತೆರೆ ಕಲಾವಿದರು ಸಹ ಹೈಲೈಟ್ ಆಗುತ್ತಿದ್ದಾರೆ. ಈ ಮೂಲಕ ಸದ್ಯ ಟಾಪ್ ಬ್ರ್ಯಾಂಡ್ (Top Brand) ಒಂದಕ್ಕೆ ರಾಯಬಾರಿಯಾಗಿ ರಾಕಿಬಾಯ್ ಯಶ್ (Rockey Boy Yash) ಅವರು ಸೇರ್ಪಡೆಯಾಗಿದ್ದು ಸದ್ಯ ಈ ಜಾಹಿರಾತು ಎಲ್ಲೆಡೆ ವೈರಲ್ ಆಗುತ್ತಿದೆ.
ಯಾವುದು ಆ Brand:
ಪ್ರತಿಷ್ಠಿತ ಕೋಲ್ಡ್ ಡ್ರಿಂಕ್ಸ್ ಕಂಪೆನಿ (Cold Drinks Company) ಯಾದ ಪೆಪ್ಸಿ (Pepsi) ಗೆ ರಾಯಭಾರಿ ಆಗಿ ಕೆಜಿಎಫ್ ರಾಕಿಬಾಯ್ ಯಶ್ ಆವರು ಆಯ್ಕೆಯಾಗಿದ್ದು ಈ ಮೂಲಕ ಆ ಜಾಹಿರಾತು ಫುಲ್ ಫೇಮಸ್ ಎನ್ನಬಹುದು. ಈ ಜಾಹಿರಾತಿನ ಆರಂಭದಲ್ಲಿ ಜನ ಹಾಗಂತಾರೆ ಹೀಗಂತಾರೆ , ಮಾತಿನ ದಾಳಿಮಾಡ್ತಾರೆ. ಕೇಳ್ತೀವಿ ಅಂತ ಗೊತ್ತಾದ್ರೆ ಕಂಟ್ರೋಲ್ ಮಾಡ್ತಾರೆ, ಜಡ್ಜ್ ಮಾಡುತ್ತಾರೆ. ತುಳಿಲಿಕ್ಕೂ ನೋಡ್ತಾರೆ ಆದರೆ ನಾವೇನೆಂದು ಪ್ರೂ ಮಾಡಬೇಕು. ಎಲ್ಲ ಗೇಲಿಗೂ ಹೊಡಿ ಗೋಲಿ ನೀನು ನೀನಾಗಿರು, ರೈಸ್ ಅಪ್ ಬೇಬಿಎಂದು ಸುಮಾರು 40 ಸೆಕೆಂಡ್ ಜಾಹಿರಾತಿನಲ್ಲಿ ಕಾಣಿಸುತ್ತಾರೆ. ಬಳಿಕ ಇನ್ನೊಂದು ಸಣ್ಣ ಜಾಹಿರಾತಿನಲ್ಲಿ ಕಂಗ್ರ್ಯಾಜುಲೇಷನ್ , ಐ ಲವ್ ಯು ಪೆಪ್ಸಿ ಎಂದು ಮುತ್ತು ನೀಡುತ್ತಾರೆ. ಈ ಮೂಲಕ ಜಾಹಿರಾತು ಅದ್ಧೂರಿಯಾಗಿ ರೆಡಿ ಯಾಗಿದೆ. ಈ ಜಾಹಿರಾತಿಗೆ ಯಶ್ ಅವರು 10.5ಕೋಟಿ ರೂ.ಪಡೆದಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದೆ.
ಈಗಾಗಲೇ ಅವರು ರಿಫೈಂಡ್ ಸನ್ ಫ್ಲೋರ್ ಎಣ್ಣೆ, ಟಿಎಂಟಿ ಬಾರ್, ರಾಮ್ ರಾಜ್ ಧೋತಿ, ಸೆಲ್ಕೊನ್ ಬ್ರ್ಯಾಂಡ್ ಗೆ ಬ್ರ್ಯಾಂಡ್ ಅಂಬಾಸಿಡರ್ (Brand Ambassador) ಆಗಿದ್ದರು ಈಗ ಪೆಪ್ಸಿ (Pepsi) ನಂತಹ ದೈತ್ಯ ಕಂಪೆನಿಯ ರಾಯಬಾರಿ ಆಗಿ ಆಯ್ಕೆ ಆಗಿದ್ದು ಮಾತ್ರ ಹೆಮ್ಮೆ ತರುವ ವಿಚಾರ ಎನ್ನಬಹುದು,ಈ ಮೂಲಕ ಯಶ್ (Yash) ಎಲ್ಲ ರಂಗದಲ್ಲು ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ ಎನ್ನಬಹುದು.