Karnataka Times
Trending Stories, Viral News, Gossips & Everything in Kannada

Nikhil Kumaraswamy: ಎಲೆಕ್ಷನ್ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ಕೊಟ್ಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ.

ಕುಮಾರಸ್ವಾಮಿ(Kumaraswamy) ಕುಟುಂಬದವರು ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕ ರಾಜಕೀಯ (Karnataka Politics) ದಲ್ಲಿ ಸಕ್ರಿಯರಾಗಿ ಬಂದವರು. ರಾಜಕೀಯದಲ್ಲಿ ತಂದೆ ತಾತ ದೊಡ್ಡಪ್ಪನಿಂದ ಹಿಡಿದು ಬಹುತೇಕ ಎಲ್ಲರೂ ಕೂಡ ಕುಟುಂಬದಲ್ಲಿ ರಾಜಕೀಯದಲ್ಲಿ ನೆಲೆಯೂರಿದವರು. ಇನ್ನು ಕುಮಾರಸ್ವಾಮಿಯವರು ಸಿನಿಮಾ ನಿರ್ಮಾಪಕರಾಗಿ ಕೂಡ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

Advertisement

ಇನ್ನು ಕುಮಾರಸ್ವಾಮಿ ಅವರ ನಂತರ ಅವರ ಪುತ್ರ ಆಗಿರುವಂತಹ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕ ನಟನಾಗಿ ಈಗಾಗಲೇ ಸುದ್ದಿ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ನಟಿಸಿರುವುದು ಬೆರಳೆಣಿಕೆಯ ಸಿನಿಮಾಗಳು ಆಗಿದ್ದರೂ ಕೂಡ ಯಾವುದೇ ಟಾಪ್ ಲೆವೆಲ್ ಸ್ಟಾರ್ (Top Level Star) ನಟನಿಗೂ ಕಡಿಮೆ ಇಲ್ಲದಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದು ಪ್ರತಿಯೊಬ್ಬರೂ ಕೂಡ ಮೆಚ್ಚಿ ಕೊಳ್ಳಲೇ ಬೇಕಾಗಿರುವಂತಹ ವಿಚಾರ. ಇನ್ನು ನಿಮಗೆಲ್ಲರಿಗೂ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ದಾಂಪತ್ಯ ಜೀವನದ ಬಗ್ಗೆ ಕೂಡ ತಿಳಿದಿರಬಹುದು.

Advertisement

ಅದ್ದೂರಿಯಾಗಿ ಮದುವೆಯಾಗಬೇಕಾಗಿದ್ದ ಅವರು ಲಾಕ್ ಡೌನ್ ಇದ್ದ ಸಂದರ್ಭದಲ್ಲಿ ಮದುವೆ ಆಗಿದ್ದ ಕಾರಣದಿಂದಾಗಿ ರೇವತಿಯವರನ್ನು(Revathi Nikhil) ಸರಳವಾಗಿಯೇ ಕುಟುಂಬಸ್ಥರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಆಗುತ್ತಾರೆ. ಇವರಿಬ್ಬರೂ ಅರೇಂಜ್ ಮ್ಯಾರೇಜ್ (Arrange Marriage) ಆಗಿದ್ದರೂ ಕೂಡ ಯಾವುದೇ ಲವ್ ಮ್ಯಾರೇಜ್ ಆಗಿರುವ ಜೋಡಿಗಳಿಗೆ ಕಡಿಮೆ ಇಲ್ಲದಂತೆ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಈಗಾಗಲೇ ಇವರಿಬ್ಬರ ದಾಂಪತ್ಯ ಜೀವನದ ಪ್ರತಿಫಲವಾಗಿ ಒಬ್ಬ ಗಂಡು ಮಗನನ್ನು ಕೂಡ ಪಡೆದುಕೊಂಡಿದ್ದಾರೆ.

Advertisement

ಇನ್ನು ಲೇಟೆಸ್ಟ್ ಆಗಿ ಕೇಳಿ ಬರುತ್ತಿರುವ ಸುದ್ದಿ ಏನೆಂದರೆ ಕನ್ನಡ ಚಿತ್ರರಂಗಕ್ಕೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಕುಟುಂಬದಿಂದಲೂ ಕೂಡ ಮತ್ತೊಬ್ಬರು ಪಾದಾರ್ಪಣೆ ಮಾಡುತ್ತಿದ್ದಾರಂತೆ. ಹೌದು ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ (Revathi Nikhil Kumaraswamy) ಅವರ ಸಹೋದರಿಯ ಆಗಿರುವ ಸುಷ್ಮಾ ಅವರು ಅತಿ ಶೀಘ್ರದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದರ್ಪಣೆ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ.

Leave A Reply

Your email address will not be published.