Karnataka Times
Trending Stories, Viral News, Gossips & Everything in Kannada

Actress Ramya: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ಸ್ಥಾನವನ್ನು ತುಂಬ ಬಲ್ಲಂತಹ ಏಕೈಕ ನಟಿ ಇವರೇ!

Advertisement

Actress Ramya ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಅಭಿ ಸಿನಿಮಾದ ಮೂಲಕ ನಾಯಕನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ನಟಿ ರಮ್ಯಾ ಅವರು ದಿವ್ಯ ಸ್ಪಂದನ(Divya Spandana) ಹೆಸರಿನಿಂದ ರಮ್ಯಾ ಆಗುವುದಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿಲ್ಲ. ಈ ಸಿನಿಮಾದ ನಂತರ ಮತ್ತೆ ಅವರ ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸೂಪರ್ ಸ್ಟಾರ್ ನಟರ ಜೊತೆಗೂ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಇದರ ನಡುವಲ್ಲಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಾಯಕ ನಟಿಯಾಗಿ ರಾಣಿಯ ಪಟ್ಟವನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿಯೇ ನಟಿ ರಮ್ಯಾ(Actress Ramya) ಅವರು ರಾಜಕೀಯ ವಲಯದ ಮುಖ ಮಾಡುವ ಮೂಲಕ ಚಿತ್ರರಂಗಕ್ಕೆ ವಿದಾಯವನ್ನು ಹೇಳಿದ್ದರು. ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಪಕ್ಷದ(Congress Party) ಪರವಾಗಿ ಕೂಡ ರಮ್ಯಾ ಅವರು ಹಲವಾರು ವರ್ಷಗಳ ಕಾಲ ಸೋಶಿಯಲ್ ಮೀಡಿಯಾ ಹೆಡ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಈಗ ಅಲ್ಲಿಂದಲೂ ಕೂಡ ವಾಪಾಸ್ ಆಗಿರುವ ನಟಿ ರಮ್ಯಾ(Ramya) ಅವರು ಈಗ ಮತ್ತೆ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಮರು ಪಾದರ್ಪಣೆ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಅವರ ವಯಸ್ಸು 40 ಆಗಿದ್ದು ಇನ್ನೂ ಹೆಚ್ಚು ವರ್ಷಗಳ ಕಾಲ ಅವರು ನಾಯಕ ನಟಿಯಾಗಿ ಚಿತ್ರರಂಗದಲ್ಲಿ ಇರಲು ಸಾಧ್ಯವಿಲ್ಲ ಹೀಗಾಗಿ ಅವರ ಸ್ಥಾನವನ್ನು ತುಂಬಬಲ್ಲಂತಹ ಮತ್ತೊಬ್ಬ ನಟಿ ಯಾರು ಎನ್ನುವುದಾಗಿ ಕನ್ನಡ ಪ್ರೇಕ್ಷಕರಲ್ಲಿ ಗೊಂದಲ ಮೂಡಿ ಬರಬಹುದು. ಅದಕ್ಕೂ ಕೂಡ ಇತ್ತೀಚಿಗೆ ಒಂದೊಳ್ಳೆ ಉತ್ತರ ಸಿಕ್ಕಿದೆ.

ಈ ಪ್ರಶ್ನೆಗೆ ಸಿಕ್ಕಿರುವಂತಹ ಉತ್ತರ ಇನ್ಯಾವುದೂ ಅಲ್ಲ ಬದಲಾಗಿ ಕನ್ನಡ ಚಿತ್ರರಂಗದ ಮತ್ತೊಬ್ಬ ನಾಯಕ ನಟಿ ಆಗಿರುವಂತಹ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram). ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಬುಲ್ ಬುಲ್ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ರಚಿತಾ ರಾಮ್ ಅವರು ರಮ್ಯಾ(Ramya) ಅವರ ಅನುಪಸ್ಥಿತಿಯಲ್ಲಿ ಚಿತ್ರರಂಗದ ಟಾಪ್ ಲೇಡಿ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ರಮ್ಯಾ ಅವರ ಅನುಪಸ್ಥಿತಿಯಲ್ಲಿ ಕೂಡ ರಚಿತಾ ರಾಮ್ ಅವರ ಸ್ಥಾನವನ್ನು ಸಮರ್ಥವಾಗಿ ತುಂಬ ಬಲ್ಲರು ಎಂಬುದಾಗಿ ಎಲ್ಲರೂ ಕೂಡ ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.