Karnataka Times
Trending Stories, Viral News, Gossips & Everything in Kannada

Yash: ರಾಕಿ ಭಾಯ್ ಅಭಿಮಾನಿಗಳಿಗೆ ಏಪ್ರಿಲ್ ತಿಂಗಳಲ್ಲಿ ಹೊರ ಬೀಳಲಿದೆ ಗುಡ್ ನ್ಯೂಸ್!

ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ (Yash) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಕೆಜಿಎಫ್ (KGF) ಸರಣಿ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಅಂದುಕೊಳ್ಳುವುದಕ್ಕಿಂತ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಆದರೆ ಈ ಸಿನಿಮಾ ತೆರೆ ಕಂಡು ಒಂದು ವರ್ಷ ಆಗುತ್ತಾ ಬಂದರೂ ಕೂಡ ಈವರೆಗೂ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಹೌದು, ತಾನೊಬ್ಬ ಸ್ಟಾರ್ ನಟ ಆಗಿ ಗಾಂಧಿನಗರ (Gandhi Nagar) ದ ಗಲ್ಲಿ ಗಲ್ಲಿಯಲ್ಲೂ ಕಟ್ ಔಟ್ (Cut Out) ನಿಲ್ಲಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯಶ್ ಅವರ ಆ ಕನಸು ನನಸು ಆಗಿವೆ. ಇಂದು ಎಲ್ಲಾ ನಟರಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆದು ನಿಂತಿದ್ದಾರೆ. ತನ್ನ ಶ್ರಮಕ್ಕೆ ಸಿಕ್ಕ ಫಲವಾಗಿ ಇಂದು ಬೇಡಿಕೆಯ ನಟನಾಗಿ ಬೆಳೆದಿದ್ದಾರೆ.

Advertisement

ಏಪ್ರಿಲ್ ನಲ್ಲಿ Yash ಕಡೆಯಿಂದ ಸಿಹಿ ಸುದ್ದಿ:

Advertisement

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಯಿದೆ. ಯಶ್ ಅವರ 19 ನೇ ಸಿನಿಮಾಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕೃತ ಮಾಹಿತಿಯನ್ನು ರಿವೀಲ್ ಮಾಡಿಲ್ಲ. ಆದರೆ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೊರಬಿದ್ದಿದ್ದು ಇಷ್ಟು ಕಾಯುತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಮುಂದಿನ ತಿಂಗಳು ಏಪ್ರಿಲ್ (April) ಗೆ ತನ್ನ ಮುಂದಿನ ಸಿನಿಮಾದ ಬಗ್ಗೆ ಮಹತ್ತರ ಸುದ್ದಿಯನ್ನು ಅಭಿಮಾನಿಗಳ ಮುಂದೆ ಇಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಮತ್ತೆ ಅಬ್ಬರಿಸಲು ರಾಕಿ ಭಾಯ್ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Advertisement

Pepsi Brand Ambassador ಆಗಿ ಯಶ್:

Advertisement

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅನೇಕ ಬ್ರ್ಯಾಂಡ್​ಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ರಾಕಿ ಭಾಯ್ ಶೇರ್ ಮಾಡಿಕೊಂಡಿರುವ ವಿಡಿಯೋ. ರಾಕಿ ಭಾಯ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಅವರ ಡೈಲಾಗ್ ಎಲ್ಲರ ಗಮನ ಸೆಳೆದಿದೆ. ರಾಕಿ ಭಾಯ್ ಪಾನೀಯ ಸಂಸ್ಥೆ ಪೆಪ್ಸಿ (Pepsi) ಗೆ ರಾಯಭಾರಿ ಆಗಿದ್ದಾರೆ. ಯಶ್ ಅವರನ್ನು ಪೆಪ್ಸಿ ಬ್ರ್ಯಾಂಡ್ (Pepsi Brand) ಅಂಬಾಸಿಡರ್ (Ambassador) ಆಗಿ ಆಯ್ಕೆ ಮಾಡಿಕೊಂಡಿದ್ದು, ಕೆಜಿಎಫ್ 2 (KGF 2) ಸಿನಿಮಾದ ರೀತಿಯಲ್ಲಿ ಯಶ್ ಅವರು ಖಡಕ್ ಡೈಲಾಗ್ ಹೊಡೆದಿದ್ದಾರೆ. ಈ ವಿಡಿಯೋದಲ್ಲಿ ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್​ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದಿದ್ದಾರೆ ಯಶ್. ರಾಕಿ ಭಾಯ್ ಅವರ ಖಡಕ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Leave A Reply

Your email address will not be published.