Karnataka Times
Trending Stories, Viral News, Gossips & Everything in Kannada

Dr Vishnuvardhan: ಅಂದು ಸಿನಿ ಜೀವನದ ಮಧ್ಯೆಯೇ ಕಾರ್ ಡ್ರೈವರ್ ಆಗಲು ನಿರ್ಧರಿಸಿದ್ದೇಕೆ ವಿಷ್ಣುವರ್ಧನ್? ಸತ್ಯ ಹೊರಕ್ಕೆ

Advertisement

Dr Vishnuvardhan ಪುಟ್ಟಣ್ಣ ಕಣಗಾಲ್(Puttanna Kanagal) ಅವರ ನಾಗರಹಾವು ಸಿನಿಮಾದ ಮೂಲಕ ರಾಮಾಚಾರಿ ಯಾಗಿ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಪರಿಚಿತರಾಗಿ ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡವರು ನಮ್ಮೆಲ್ಲರ ನೆಚ್ಚಿನ ಸಂಪತ್ ಕುಮಾರ್ ಅಲಿಯಾಸ್ ವಿಷ್ಣು ದಾದಾ(Vishnu Dada). ಸಂಪತ್ ಕುಮಾರ್ ಅವರು ವಿಷ್ಣುವರ್ಧನ್ ಆದಂತಹ ಆ ಪಯಣ ನಿಜಕ್ಕೂ ಕೂಡ ಪ್ರತಿಯೊಬ್ಬ ಯುವ ಕಲಾವಿದನಿಗೂ ಕೂಡ ಸ್ಪೂರ್ತಿಯ ಹಾದಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಅವರು ಎದುರಿಸಿದಂತಹ ಅವಮಾನಗಳನ್ನೇ ಸನ್ಮಾನಗಳ ಹಾದಿಯಾಗಿ ಪರಿವರ್ತಿಸದ ರೀತಿ ಕೂಡ ನಿಜಕ್ಕೂ ವಿಸ್ಮಯ.

ಇನ್ನು ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರ ಹಾದಿ ಕೂಡ ಅಷ್ಟೊಂದು ಸುಲಭ ವಾಗಿರಲಿಲ್ಲ ಇದನ್ನು ಸ್ವತಃ ಅವರ ಅಳಿಯ ಆಗಿರುವಂತಹ ಅನಿರುದ್ಧ್ ಅವರೇ ಹೇಳಿಕೊಂಡಿದ್ದಾರೆ. ಚಿತ್ರರಂಗದ ಆರಂಭದಲ್ಲಿ ಕೂಡ ನನಗೂ ಕೂಡ ಸಾಕಷ್ಟು ಅವಕಾಶಗಳು ಸಿಗುತ್ತಿರಲಿಲ್ಲ ಆ ಸಂದರ್ಭದಲ್ಲಿ ಕೂಡ ವಿಷ್ಣುವರ್ಧನ್(Vishnuvardhan) ಅಪ್ಪಾಜಿ ನನ್ನ ಬೆಂಬಲವಾಗಿ ನಿಂತು ಸಾಕಷ್ಟು ಮಾತುಗಳನ್ನು ಆಡುತ್ತಿದ್ದರು ಎಂಬುದಾಗಿ ಅನಿರುದ್ಧ್(Aniruddh) ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ರವರ ಜೀವನದ ಒಂದು ರೋಚಕ ಕಹಾನಿಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಹೌದು ಮಿತ್ರರೇ, ಭಾರತಿ ವಿಷ್ಣುವರ್ಧನ್(Bharathi Vishnuvardhan) ರವರು ಆಗಲೇ ಸೂಪರ್ ಸ್ಟಾರ್ ಆಗಿದ್ದ ಸಂದರ್ಭದಲ್ಲಿ ವಿಷ್ಣುವರ್ಧನ್ ರವರು ಆಗಿನ್ನು ಉದಯೋನ್ಮುಖ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮದುವೆಯಾದ ನಂತರ ವಿಷ್ಣುವರ್ಧನ್(Vishnuvardhan) ರವರಿಗೆ ಎರಡು ವರ್ಷಗಳ ಕಾಲ ಯಾವುದೇ ಸಿನಿಮಾಗಳ ಅವಕಾಶವೂ ಕೂಡ ಹುಡುಕಿಕೊಂಡು ಬಂದಿರಲಿಲ್ಲವಂತೆ. ಆ ಸಂದರ್ಭದಲ್ಲಿ ಇಬ್ಬರು ಕೂಡ ಚೆನ್ನೈನಲ್ಲಿ ಇದ್ದರು. ಕೆಲಸ ಇಲ್ಲದೆ ಇದ್ದಾಗ ವಿಷ್ಣುವರ್ಧನ್ ರವರು ಕಾರ್ ಡ್ರೈವರ್ ಆಗಿ ಕೆಲಸ ಮಾಡೋಕೆ ಕೂಡ ಸಿದ್ದರಾಗಿ ನಿಂತಿದ್ದರಂತೆ. ಅಷ್ಟರ ಮಟ್ಟಿಗೆ ಕೆಲಸ ಇಲ್ಲದೆ ವಿಷ್ಣುವರ್ಧನ್ ರವರು ಬೇಸತ್ತಿದ್ದರು.

ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ರವರನ್ನು ಹುಡುಕಿಕೊಂಡು ಬಂದ ಹೊಂಬಿಸಲು ಸಿನಿಮಾ(Hombisilu Film) ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗುತ್ತದೆ. ಇದಾದ ನಂತರ ಮತ್ತೆ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರು ಹಿಂದಿರುಗಿ ನೋಡಲೇ ಇಲ್ಲ. ಈ ರೀತಿಯ ಕಥೆಗಳಿಂದಲೇ ವಿಷ್ಣುವರ್ಧನ್ ರವರು ಇಂದಿಗೂ ಕೂಡ ಯುವ ಜನತೆಗೆ ಸ್ಪೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಸ್ವತಹ ವಿಷ್ಣುವರ್ಧನ್ ಅವರ ಮಗಳಾಗಿರುವ ಕೀರ್ತಿ ಅವರ ಪತಿಯಾಗಿರುವ ನಟ ಅನಿರುದ್ಧ(Actor Aniruddh) ಕೂಡ ತಮ್ಮ ಮಾವನನ್ನು ಪ್ರತಿಯೊಂದು ಕೆಲಸಗಳಲ್ಲಿ ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಾರೆ. ವಿಷ್ಣುವರ್ಧನ್ ಅವರ ಜೀವನದ ಈ ರೋಚಕ ಕಹಾನಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.