Dhruva Sarja: ಮೇಘನಾ ರಾಜ್ ಬಗ್ಗೆ ಸಿಹಿಸುದ್ದಿ ಕೊಟ್ಟ ಧ್ರುವ ಸರ್ಜಾ

Advertisement
ಚಿರಂಜೀವಿ ಸರ್ಜಾ ಅವರು ತೀರಿಕೊಂಡಿದ್ದನ್ನು ಇಂದಿಗೂ ಕೂಡ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅವರ ಅಭಿಮಾನಿಗಳಿಗೆ ಇಷ್ಟು ಕಷ್ಟವಾಗುತ್ತಿರಬೇಕಾದರೆ ಇನ್ನೂ ಅವರ ಪತ್ನಿ ಪ್ರೀತಿಸಿ ಮದುವೆಯಾದ ಮೇಘನಾ ರಾಜ್ ಅವರಿಗೆ ಇನ್ನೆಷ್ಟು ನೋವಾಗಿರಬೇಡ. ಅದೇನೇ ಇರಲಿ ತನ್ನ ಮಗನನ್ನು ಮಾತ್ರ ಬಹಳ ಮುತುವರ್ಜಿಯಿಂದ ಪ್ರೀತಿಯಿಂದ ಪಾಲನೆ ಮಾಡುತ್ತಿದ್ದಾರೆ ಮೇಘನಾ ರಾಜ್ (Meghana Raj). ಚಿತ್ರರಂಗದಲ್ಲಿ ಸಾಕಷ್ಟು ಬೆಳೆಯಬೇಕು ಎಂದು ಅಭಿಲಾಷೆ ಹೊಂದಿದ್ದ ಮೇಘನಾ ರಾಜ್ ಪತಿಯ ಸಾವಿನ ನಂತರ ಸಿನಿಮಾ ರಂಗದಿಂದ ದೂರ ಉಳಿದರು ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ ಈ ಬಗ್ಗೆ ಧ್ರುವ ಸರ್ಜಾ ನೀಡಿರುವ ಪ್ರಕ್ರಿಯೆ ಸದ್ಯ ವೈರಲ್ ಆಗಿದೆ.
ಸ್ಯಾಂಡಲ್ ವುಡ್ ನ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ ಅವರ ಮಾರ್ಟಿನ್ ಸಿನಿಮಾ ಕೂಡ ಸದ್ಯದಲ್ಲಿಯೇ ತೆರೆಗೆ ಬರಬಹುದು. ಇತ್ತ ಅತ್ತಿಗೆ ಮೇಘನಾ ರಾಜ್ ಕೂಡ ಸಿನಿಮಾರಂಗಕ್ಕೆ ಮತ್ತೆ ನಟನಿಗೆ ಬರುತ್ತಿರುವುದು ಖುಷಿ ಕೊಟ್ಟಿದೆ ಎಂದು ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಆದ್ಮೇಲೆ ಕೂಡ ಬಹಳಷ್ಟು ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ ನನ್ನ ಅತ್ತಿಗೆ ಕೂಡ ಈಗ ಕೆಲಸ ಮಾಡುತ್ತಾರೆ ಅನ್ನೋದು ನಮಗೆ ಹೆಮ್ಮೆಯ ವಿಚಾರ ಎಂಬುದಾಗಿ ಧ್ರುವ ಸರ್ಜಾ ಹೇಳಿದ್ದು, ಅತ್ತಿಗೆಯ ಕಂಬ್ಯಾಕ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಧ್ರುವ ಸರ್ಜಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೇಘನಾ ರಾಜ್ ಅವರ ಪತಿ ಧ್ರುವ ಸರ್ಜಾ (Dhruva Sarja) ಅವರ ಸಹೋದರ ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಎರಡು ವರ್ಷಗಳೆ ಕಳೆದಿವೆ ಚಿರು ಅವರ ಆಕಸ್ಮಿಕ ಮರಣ ಸರ್ಜಾ ಕುಟುಂಬವನ್ನು ತತ್ತರಿಸುವಂತೆ ಮಾಡಿತು ಆದ್ರೆ ರಾಯನ್ ಹುಟ್ಟಿದ ನಂತರ ಆತನಲ್ಲಿಯೇ ಚಿರುವನ್ನು ಸರ್ಜಾ ಫ್ಯಾಮಿಲಿ ಕಂಡಿತು. ಜೊತೆಗೆ ಚಿರು ಅವರ ಅಭಿಮಾನಿ ಬಳಗ ಕೂಡ ರಾಯನ ನೋಡಿ ಸಂತಸಪಟ್ಟಿದೆ. ಇತ್ತೀಚೆಗೆ ಪ್ರೊಡಕ್ಷನ್ ನಲ್ಲಿಯೂ ಕೂಡ ತೊಡಗಿಕೊಂಡಿರುವ ಮೇಘನಾ ರಾಜ್ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾ ಇರೋದು ಖುಷಿಯ ವಿಚಾರ ಎಂದು ಅಭಿಮಾನಿಗಳು ಕೂಡ ಅಭಿಪ್ರಾಯ ಕೊಟ್ಟಿದ್ದಾರೆ.
ಇತ್ತೀಚಿಗಷ್ಟೇ ದ್ರುವ ಸರ್ಜಾ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆಗೆ ಸಂತಸದಿಂದ ಆಚರಿಸಿಕೊಂಡಿದ್ದಾರೆ ಬಹಳ ದೂರದ ಊರುಗಳಿಂದ ಅಭಿಮಾನಿಗಳು ಬೇಟಿಗೆ ಬರೋದು ಖುಷಿಯ ವಿಚಾರ ನನ್ನ ಹುಟ್ಟುಹಬ್ಬ ಆಚರಿಸುವುದು ನನಗೆ ಆಶೀರ್ವಾದ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ತಮಗೆ 2ನೇ ಮಗು ಆಗುತ್ತಿರುವ ಬಗ್ಗೆಯೂ ಕೂಡ ಧ್ರುವ ಸರ್ಜಾ ತಿಳಿಸಿದ್ದು ಮನೆಯಲ್ಲಿ ಒಬ್ಬ ಮಗ ಒಬ್ಬ ಮಗಳು ಇದ್ದಾಳೆ ಈಗ ಮತ್ತೊಂದು ಮಗು ಬರುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ ಎಂದಿದ್ದಾರೆ. ಅಂತೂ ಚಿರಂಜೀವಿ ಸರ್ಜಾ ಅವರ ಸಾವಿನ ನೋವಿನಿಂದ ಚೇತರಿಸಿಕೊಂಡು ಸರ್ಜಾ ಫ್ಯಾಮಿಲಿಯಲ್ಲಿ ಮಕ್ಕಳ ನಗು ತುಂಬಿದೆ.