Karnataka Times
Trending Stories, Viral News, Gossips & Everything in Kannada

Abhishek Ambareesh: ಸೆಕೆಂಡ್ ಹ್ಯಾಂಡ್ ಲ್ಯಾಂಬೋರ್ಗಿನಿ ಕಾರು ತಗೊಂತಿದ್ದಾರಂತೆ ಅಭಿಷೇಕ್ ಅಂಬರೀಶ್, ಯಾರದ್ದು ಗೊತ್ತಾ!

Advertisement

Abhishek Ambareesh ಅಮರ್ ಸಿನಿಮಾದ(Amar Film) ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟಂತಹ ಅಭಿಷೇಕ್ ಅಂಬರೀಶ್(Abhishek Ambareesh) ಅವರು ತಮ್ಮ ಮೊದಲ ಸಿನಿಮಾದಲ್ಲಿಯೇ ದೊಡ್ಡಮಟ್ಟದಲ್ಲಿ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆಗೆ ಒಳಗಾಗುತ್ತಾರೆ. ಅವರ ತಂದೆ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಅವರ ಲೆಗೆಸ್ಸಿ ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದು ಹೀಗಾಗಿ ಅದನ್ನು ಮುಂದುವರೆಸಿಕೊಂಡು ಹೋಗಬೇಕಾದಂತಹ ಜವಾಬ್ದಾರಿ ಕೂಡ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮೇಲಿದೆ.

ಇನ್ನು ಈಗಾಗಲೇ ಎರಡನೇ ಸಿನಿಮಾ ಬ್ಯಾಡ ಮ್ಯಾನರ್ಸ್(Bad Manners) ಬಿಡುಗಡೆಗು ಕೂಡ ಸಿದ್ಧವಾಗಿರುವ ಅಭಿಷೇಕ್ ಅಂಬರೀಶ್ ಅವರು ಯುಟ್ಯೂಬ್ ಚಾನೆಲ್ ಗಳು ಸೇರಿದಂತೆ ಹಲವಾರು ಸುದ್ದಿಮಾಧ್ಯಮಗಳ ಚಾನೆಲ್ ಗಳಲ್ಲಿ ಕೂಡ ಸಂದರ್ಶನವನ್ನು ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡಿರುವ ಅಭಿಷೇಕ್ ತಮ್ಮ ಕಾರುಗಳ ಕುರಿತಂತೆ ಇರುವಂತಹ ಕ್ರೇಜ್ ಬಗ್ಗೆ ಕೂಡ ಹಂಚಿಕೊಂಡಿದ್ದಾರೆ.

ಯಾರಿಗೂ ಗೊತ್ತಿಲ್ಲದ ಒಂದು ವಿಚಾರವನ್ನು ಹೇಳಿರುವ ಅಭಿಷೇಕ್ ಅಂಬರೀಶ್ ” ಎಲ್ಲರೂ ಸೈಕಲ್ ಕಲಿತ ನಂತರ ಬೈಕ್ ಕಲಿತು ನಂತರ ಕಾರನ್ನು ಕಲಿಯುತ್ತಾರೆ ಆದರೆ ಆ ಸಮಯದಲ್ಲಿ ನನ್ನ ತಂದೆ ಅಂಬರೀಷ್(Ambareesh) ಅವರು ಮಂತ್ರಿ ಆಗಿದ್ದ ಕಾರಣದಿಂದಾಗಿ ನನ್ನ ಸುರಕ್ಷತೆಗಾಗಿ ಸೈಕಲ್ ಕಲಿತ ನಂತರ ನೇರವಾಗಿ ಚಿಕ್ಕ ವಯಸ್ಸಿನಲ್ಲಿ ಕಾರ್ ಅನ್ನೆ ಕಲಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಇನ್ನು ನಿಮ್ಮ ನೆಚ್ಚಿನ ಕಾರು ಯಾವುದು ಎಂಬುದಾಗಿ ಸಂದರ್ಶಕರು ಕೇಳಿದ ಪ್ರಶ್ನೆಗೆ ಅಭಿಷೇಕ್ ಅಂಬರೀಶ್ ನೀಡಿದ ಉತ್ತರ ಕೂಡ ಮಜವಾಗಿತ್ತು.

ಹೌದು ನನಗೆ ಎಲ್ಲಾ ಕಾರುಗಳು ಇಷ್ಟ ಅದರಲ್ಲಿ ವಿಶೇಷವಾಗಿ ರಾಜರಾಜೇಶ್ವರಿ ನಗರದಲ್ಲಿರುವ ಲ್ಯಾಂಬೋರ್ಗಿನಿ ಉರುಸ್( Lamborghini Urus) ಅನ್ನು ಸೆಕೆಂಡ್ ಹ್ಯಾಂಡ್ ಆಗಿ ಖರೀದಿಸಬೇಕು ಎನ್ನುವ ಆಸೆ ಇದೆ ಎಂಬುದಾಗಿ ಹೇಳುವ ಮೂಲಕ ದರ್ಶನ್(Darshan) ರವರ ಕಾರನ್ನು ಖರೀದಿಸುತ್ತಿದ್ದೇನೆ ಎನ್ನುವುದಾಗಿ ಪರೋಕ್ಷವಾಗಿ ಅಭಿಷೇಕ್ ಅಂಬರೀಶ್ ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಅಥವಾ ತಮಾಷೆಯಾಗಿ ಹೇಳಿದ್ದಾರಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

Leave A Reply

Your email address will not be published.