Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಎಂದಾಗ ಸಾಕಷ್ಟು ಜನರಿಗೆ ಸಾಕಷ್ಟು ರೀತಿಯ ಅಭಿಪ್ರಾಯಗಳು ಮೂಡಿ ಬರಬಹುದು ಆದರೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅವರು ಏನು ಎನ್ನುವುದು ನಿಜವಾಗಿಯೂ ತಿಳಿದಿದೆ. ಅಂಥವರಲ್ಲಿ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಕೂಡ ಒಬ್ಬರಾಗಿದ್ದು ಚಿಕ್ಕವಯಸ್ಸಿನಿಂದಲೂ ಕೂಡ ಅಣ್ಣನ ರೀತಿಯಲ್ಲಿ ದರ್ಶನ್ ರವರನ್ನು ಹತ್ತಿರದಿಂದ ನೋಡಿದವರಾಗಿದ್ದಾರೆ. ಹೀಗಾಗಿ ಅವರು ದರ್ಶನ್ ಅವರ ಪರವಾಗಿ ನೀಡಿರುವಂತಹ ಹೇಳಿಕೆಯನ್ನು ಕೇಳಿದರೆ ಖಂಡಿತವಾಗಿ ನಿಮ್ಮ ದೃಷ್ಟಿಕೋನ ಕೂಡ ಬದಲಾಗಬಹುದು.
ದರ್ಶನ್(Darshan Thoogudeepa) ಅವರ ಬಗ್ಗೆ ಮಾತನಾಡುತ್ತಾ ಅವರ ಕುರಿತಂತೆ ತಾವು ಕಂಡ ರೀತಿಯಲ್ಲಿ ಸಂದರ್ಶನದಲ್ಲಿ ಅಭಿಷೇಕ್ ಅಂಬರೀಶ್ ರವರು ವಿವರಿಸಿದ್ದಾರೆ. ನಾವಿಬ್ಬರೂ ನಮ್ಮ ಗ್ರೂಪ್ ಜೊತೆ ಸೇರಿದಾಗ ಯಾವುದೇ ಸೀರಿಯಸ್ ವಿಚಾರಗಳ ಕುರಿತಂತೆ ಮಾತನಾಡುವುದಿಲ್ಲ ಕೇವಲ ಹರಟೆ ಹಾಗೂ ಎಂಜಾಯ್ ಮಾತ್ರ ಆ ಸಂದರ್ಭದಲ್ಲಿ ನಾವು ಮಾಡುವಂತಹ ಕೆಲಸಗಳು ಎಂಬುದಾಗಿ ಹೇಳಿದ್ದಾರೆ.
ನಾವು ಸಿಕ್ಕಾಗಲಿಲ್ಲ ಅಣ್ಣ ಅವರ ಹಾಗೂ ಅಪ್ಪಾಜಿಯವರ(Ambareesh) ನಡುವೆ ನಡೆದಿರುವಂತಹ ಕೆಲವೊಂದು ಸ್ವಾರಸ್ಯಗರ ವಿಚಾರಗಳ ಕುರಿತಂತೆ ಆ ಸಂದರ್ಭದಲ್ಲಿ ಹೇಳುತ್ತಾರೆ. ಅದರಲ್ಲಿ ವಿಶೇಷವಾಗಿ ನನ್ನ ಕುರಿತಂತೆ ಅವರು ಪ್ರತಿ ಬಾರಿ ನೀಡುವಂತಹ ಒಂದು ಸಲಹೆ ಎಂದರೆ ಯಾವತ್ತೂ ಕೂಡ ವರ್ಕೌಟ್ ಬಿಡಬೇಡಿ ಎಂಬುದಾಗಿ. ಇನ್ನು ಸಂದರ್ಶಕರು ಡಿ ಬಾಸ್ ಅನ್ನೋ ಹತ್ತಿರದಿಂದ ನೋಡಿರುವ ನೀವು ಅವರನ್ನು ವಿವರಿಸುವುದಾದರೆ ಹೇಗೆ ವಿವರಿಸುತ್ತೀರಿ ಎಂಬುದಾಗಿ ಕೇಳಿದಾಗ ಅಭಿಷೇಕ್ ಅಂಬರೀಶ್(Abhishek Ambareesh) ನೀಡಿದ ಉತ್ತರ ಇನ್ನಷ್ಟು ಮೆಚ್ಚುಗೆಗೆ ಒಳಗಾಗಿದೆ.
ದರ್ಶನ್(Darshan) ರವರನ್ನು ವಿವರಿಸುತ್ತಾ ಅವರ ಸ್ವಾಭಾವಿಕತೆ ಮತ್ತು ಕಿರಿಯರಿಗೆ ಪ್ರೀತಿ ತೋರುವ ರೀತಿ ಹಿರಿಯರಿಗೆ ಗೌರವ ತೋರುವಂತಹ ನೀತಿ ಪ್ರತಿಯೊಬ್ಬರನ್ನು ಕೂಡ ಅವರ ಕಡೆಗೆ ಆಕರ್ಷಿಸುತ್ತೆ. ಅಷ್ಟೊಂದು ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಪ್ರತಿಯೊಬ್ಬರ ಜೊತೆಗೆ ಸರಳವಾಗಿ ನಡೆದುಕೊಳ್ಳುವಂತಹ ಅವರ ನಡವಳಿಕೆ ನಮ್ಮಂತಹ ಯುವ ಕಲಾವಿದರಿಗೆ ಸ್ಪೂರ್ತಿ ಎಂಬುದಾಗಿ ಅಭಿಷೇಕ ಅಂಬರೀಶ್(Abhishek Ambareesh) ಹೇಳಿದ್ದಾರೆ.