Karnataka Times
Trending Stories, Viral News, Gossips & Everything in Kannada

Actress Ramya: ಅಮೃತಧಾರೆ ಸಿನೆಮಾ ವೇಳೆ ನಡೆದಿತ್ತು ಆ ಘಟನೆ, ಸತ್ಯ ಬಿಚ್ಚಿಟ್ಟ ನಟಿ ಮೋಹಕ ತಾರೆ ರಮ್ಯಾ

Advertisement

ಕನ್ನಡದಲ್ಲಿ ಮೊದಲ ಬಾರಿಗೆ ಅಮಿತಾಬಚ್ಚನ್ (Amitabh Bachchan) ಅವರು ನಟಿಸಿದ್ದ ಸಿನೆಮಾ ಎಂದರೆ ಅದು ಅಮೃತಧಾರೆ (Amrithadhare) ಪ್ರೀತಿಯ ಮಡದಿಯ ಮನದಾಸೆ ಈಡೇರಿಸಲು ಕಟ್ಟಿದ ಮನೆಯನ್ನೇ ಮಾರುವ ಕಥಾ ಹಂದರ ಇರುವ ಈ ಕತೆಗೆ ನಟ ಧ್ಯಾನ್ (Dhyan) ಹಾಗೂ ರಮ್ಯಾ (Ramya) ಅವರ ಕಾಂಬಿನೇಶನ್ ಅಂತೂ ಸೂಪರ್ ಎನ್ನಬಹುದು.

2005ರಲ್ಲಿ ತೆರೆಕಂಡ ಈ ಸಿನೆಮಾ ಬಹಳ ಯಶಸ್ಸನ್ನು ಪಡೆದಿದ್ದು ಬಳಿಕ ಇದೀಗ ಮತ್ತೆ ಇದೇ ಸಿನೆಮಾ ವಿಚಾರವೊಂದು ಹೈಲೈಟ್ ಆಗಿದೆ. ಇತ್ತೀಚೆಗಷ್ಟೇ ವೀಕೆಂಡ್ ವಿತ್ ರಮೇಶ್ ಶೋ (Weekend With Ramesh) ಆರಂಭವಾಗಿದ್ದು ಮೊದಲ ಸಾಧಕಿಯಾಗಿ ನಟಿ ರಮ್ಯಾ ಅವರು ಬಂದಿದ್ದು ಸಿನೆಮಾ, ವೈಯಕ್ತಿಕ ಹಾಗೂ ರಾಜಕೀಯ ಬದುಕು ಎಲ್ಲದನ್ನು ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ ಈ ವೇಳೆ ಅಮೃತಧಾರೆ ಸಿನೆಮಾದಲ್ಲಿ ಕಳೆದ ಮೆಲುಕನ್ನು ನೆನೆದಿದ್ದಾರೆ

ಏನಂದ್ರು ಮೋಹಕ ತಾರೆ?

ಅಮೃತಧಾರೆ ಸಿನೆಮಾ ಬಗ್ಗೆ ಮಾತನಾಡಿ ಅವರು ನನಗೆ ಈ ಕತೆ ತುಂಬಾ ಇಷ್ಟವಾಗಿತ್ತು ನಟ ಧ್ಯಾನ್ ಅವರಿಂದಾಗಿ ಅಮಿತಾಬ್ ಸರ್ ಅವರು ಸಿನೆಮಾದಲ್ಲಿ ನಟಿಸಲು ಒಪ್ಪಿಕೊಂಡರು. ಅವರ ಮೊದಲ ಕನ್ನಡ ಸಿನೆಮಾದಲ್ಲಿ ನಾನು ಕೂಡ ಇದ್ದೆನು ಎಂಬುದೇ ಖುಷಿ. ತೆರೆ ಮೇಲೆ ಅಮಿತಾ ಬಚ್ಚನ್ ಅಂದ್ರೆ ನಾಯಕಿಗೆ ಹೇಗೆ ಕ್ರಶ್ ಇರುತ್ತೊ ಹಾಗೆ ನಾನು ನಿಜ ಜೀವನದಲ್ಲೂ ಅವರ ದೊಡ್ಡ ಫ್ಯಾನ್. ಅದೇ ರೀತಿ ನಾವು ಹುಡುಗ ಹುಡುಗ ಹಾಡಿನ ಶೂಟಿಂಗ್ ವೇಳೆ ಲಡಾಖ್ ಗೆ ಹೋಗಬೇಕಿತ್ತು ಅಲ್ಲಿ ಶೂಟಿಂಗ್ ವೇಳೆ ತಾಪಮಾನದ ವೈಪರೀತ್ಯದಿಂದಾಗಿ ನಂಗೆ ಪ್ರಜ್ಞೆ ತಪ್ಪಿತ್ತು ಆಗ ನಮ್ಮ ದೇಶದ ಯೋಧರು ನಂಗೆ ಸಹಾಯ ಮಾಡಿದ್ದರು ಅದನಂತೂ ಈ ಜೀವಮಾನದಲ್ಲಿ ಮರೆಯಲಾಗದು. ಥ್ಯಾಂಕ್ ಯು ನಾಗತಿಹಳ್ಳಿ ಚಂದ್ರಶೇಖರ್ ಸರ್ (Nagathihali Chandrashekar) ಹಾಗೂ ಇಡೀ ಅಮೃತಧಾರೆ ಸಿನೆಮಾ ತಂಡಕ್ಕೆ ಧನ್ಯವಾದ ಎಂದಿದ್ದಾರೆ.

ವೀಕೆಂಡ್ ವಿತ್ ರಮೇಶ್ ಮೊದಲ ಎಪಿಸೋಡ್ ಅಂತೂ ಭರ್ಜರಿ ಹಿಟ್ ಆಗಿದ್ದು ಇದರಲ್ಲಿ ರಮ್ಯಾ ಅಂದರೆ ದಿವ್ಯಾ ಅವರ ಕಂಪ್ಲೀಟ್ ಜೀವನದ ಗಾಥೆಯನ್ನು ಕಾಣಬಹುದು. ಅವರೊಂದಿಗೆ ಕೆಲಸಮಾಡಿದ ಸಿನೆಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು, ರಾಜಕೀಯ ರಂಗದಲ್ಲಿ ಜೊತೆಗಿದ್ದವರು ಹಾಗೂ ಅವರನ್ನೇ ಸ್ಫೂರ್ತಿಯಾಗಿ ಹಿಂಬಾಲಿಸುವ ನಟಿ ಅಮೃತಾ ಐಯ್ಯಂಗಾರ್ (Amrutha Iyangar) ಹಾಗೂ ದಿಯಾ ಸಿನೆಮಾ ನಟಿ ಖುಷಿ (Kushi) ಸೇರಿದಂತೆ ಅನೇಕರು ಅವರ ಬಗ್ಗೆ ಮನದಾಳದ ಮಾತನಾಡಿದ್ದಾರೆ‌.

Leave A Reply

Your email address will not be published.