ಸ್ಯಾಂಡಲ್‌ವುಡ್ (Sandalwood) ನಟಿ ರಚಿತಾ ರಾಮ್ (Rachitha Ram) ಕ್ಯೂಟ್ ನಟಿ, ಡಿಂಪಲ್ ಕ್ವೀನ್, ಬುಲ್ ಬುಲ್ (Bull Bull ) ಹೀಗೆ ನಾನಾ ಹೆಸರುಗಳಿಂದ ಗುರುತಿಸಿಕೊಂಡ ನಟಿ, ಬುಲ್ ಬುಲ್ ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಟಿ , ಈ ಸಿನಿಮಾ ಮೂಲಕನೇ ಸಖತ್ ಫೇಮಸ್ಸ್ ಆದರು, ತಮ್ಮ ಮೊದಲ ಚಿತ್ರದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಜೊತೆ ಕಾರ್ಯ ನಿರ್ವಹಿಸಿದ್ದಾರೆ, ಗುಳಿ ಕೆನ್ನೆ ಹುಡುಗಿ ರಚ್ಚು ಬೆಳ್ಳಿ ಪರದೆ ಮೇಲೆ ನಟಿಯಾಗಿ ಮಾತ್ರವಲ್ಲದೆ, ಕಿರುತೆರೆಯಲ್ಲಿಯೂ ಕಾಮಿಡಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿಯೂ ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ.
ರಚಿತಾ ಮದುವೆ ಯಾವಾಗ?
ನಟಿ ಧನ್ವೀರ್ (Dhanveer) ಅವರು ರಚಿತಾ ರಾಮ್ (Rachita Ram) ಅವರ ಜೊತೆಗೆ ತೆಗೆಸಿ ಕೊಂಡಿರುವ ಪೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿ ಸುದ್ದಿಯಾಲ್ಲಿತ್ತು, ನಿಖಿಲ್ ಕುಮಾರಸ್ವಾಮಿ ಮತ್ತು ರಚ್ಚು ಜೋಡಿಯು ಸುದ್ದಿ ಯಾಲ್ಲಿತ್ತು, ತಾನು ಮದುವೆಯಾಗುವುದು ಗೌಡರ ಹುಡುಗನನ್ನೇ ಎಂದು ಡಿಂಪಲ್ ಕ್ವೀನ್ ಒಮ್ಮೆ ಹೇಳಿಕೊಂಡಿದ್ದರು. ಸದ್ಯಕ್ಕೀಗ ಮದುವೆ ವಿಚಾರ ಮಾತ್ರ ಇನ್ನು ಹೊರಬಿದ್ದಿಲ್ಲ ಎನ್ನಬಹುದು.
ರಚಿತಾ ರಾಮ್ ಪೋಷಕರೇ ಹುಡುಗ ನೋಡಿದ್ದಾರಾ?
ತಮ್ಮ ಮಗಳಿಗಾಗಿ ರಚಿತಾ ರಾಮ್ ಪೋಷಕರು ಹುಡುಗನನ್ನು ಹುಡುಕುವ ಕೆಲಸದಲ್ಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು, ವಿದೇಶದ ಬಿಸಿನೆಸ್ ಮ್ಯಾನ್ ಅನ್ನು ರಚಿತಾ ರಾಮ್ ಪೋಷಕರು ನೋಡಿ ಓಕೆ ಮಾಡಿದ್ದಾರೆ, ನಟಿ ರಚಿತಾ ಮಾತ್ರ ಇದಕ್ಕೆ ಒಪ್ಪಿಕೊಂಡಿದ್ದರಾ? ಇಲ್ಲವಾ ಈ ವಿಚಾರದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ
ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ
ಅತ್ಯಂತ ಬಹು ಬೇಡಿಕೆಯ ನಟಿ ಇವರಾಗಿದ್ದಾರೆ, ಏನೇ ಕಾರ್ಯಕ್ರಮವಾದರೂ , ಯಾವುದೇ ಸಿನಿಮಾಗಳಾಗಲಿ ಅವರ ಹೆಸರು ಮೊದಲು ಕೇಳಿ ಬರುತ್ತದೆ. ಅತೀ ಹೆಚ್ಚು ಸಂಭಾವಣೆ ಪಡೆಯುವ ನಟಿ ಇವರಾಗಿದ್ದಾರೆ, ರಚ್ಚು ಸಾಮಾಜಿಕ ಜಾಲತಾಣದಲ್ಲಿಯೂ ಸದಾ ಆ್ಯಕ್ಟಿವ್ ಇದ್ದು ಮೋಸ್ಟ್ ಮೆಮೋರೆಬಲ್ ಕ್ಷಣಗಳನ್ನು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಾರ್ಟಿ ಸಾಂಗ್ನಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ, ಕಿರುತೆರೆಯಲ್ಲಿ ಜಡ್ಜ್ ಆಗಿಯು ಎಲ್ಲರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ.
ರಿಯಾಲಿಟಿ ಶೋ ನಲ್ಲಿ ರಚ್ಚು ಜಡ್ಜ್
ಬುಲ್‌ಬುಲ್ ಚಿತ್ರ ಮೂಲಕ ಫೇಮಸ್ಸಾದ ನಟಿ ಈಗಿನ ರಿಯಾಲಿ ಟಿ ಶೋಗಳ ಬಗ್ಗೆ ತುಂಬಾ ಆಕರ್ಷಿತರಾಗಿದ್ದಾರೆ, ನಾನು ಯಾವುದಾದರೂ ಒಂದು ರಿಯಾಲಿಟಿ ಶೋ ನಿರೂಪಕಿ ಯಾಗಬೇಕು ಎಂದು ಅವರು ಹೇಳಿದ್ದರು. 2016ರಲ್ಲಿ ಉದಯ ಟಿವಿಯ ಕಿಕ್ ನೃತ್ಯ ಕಾರ್ಯಕ್ರಮದಲ್ಲಿ ಜಡ್ಜ್ ಆಗೀ ಭಾಗವಹಿಸದರು , ಕಾಮಿಡಿ ಟಾಕೀಸ್ , ಮಜಾಭಾರತ- 2, ಸೂಪರ್ ಕ್ವೀನ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ರಚ್ಚು ಕಾಣಿಸಿಕೊಂಡಿದ್ದಾರೆ.