Manju Pavagada: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಖ್ಯಾತಿಯ ಮಂಜು ಪಾವಗಡ! ಧಿಡೀರ್ ಏನಾಯ್ತು ನೋಡಿ
ಕನ್ನಡ ಕಿರುತೆರೆಯ ಕಾರ್ಯಕ್ರಮಗಳು ಸಾಕಷ್ಟು ಕಲಾವಿದರಿಗೆ ಹಾಗೂ ಪ್ರತಿಭೆಗಳಿಗೆ ಬದುಕು ಕಟ್ಟಿಕೊಳ್ಳುವಂತಹ ಅವಕಾಶಗಳನ್ನು ನೀಡಿವೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇಬೇಕು. ಅವುಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರ ಕಾಣುವಂತಹ ಅತ್ಯಂತ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ (Biggboss Kannada) ಕೂಡ ಒಂದಾಗಿದೆ. ಇನ್ನು ಈ ಕಾರ್ಯಕ್ರಮದ ಮೂಲಕ ಈಗಾಗಲೇ ಹಲವಾರು ಜನ ಪ್ರಸಿದ್ದಿಗೆ ಬಂದಿದ್ದಾರೆ ಕೂಡ.
ಹೌದು ಈಗಾಗಲೇ ಈ ಕಾರ್ಯಕ್ರಮವನ್ನು ಗೆದ್ದವರು ಹಾಗೂ ಭಾಗವಹಿಸಿದವರಲ್ಲಿ ಸಾಕಷ್ಟು ಜನ ಬದುಕನ್ನು ಕಟ್ಟಿಕೊಂಡರೆ ಇನ್ನು ಕೆಲವು ಜನ ಹೇಳಲು ಹೆಸರಿಲ್ಲದಂತೆ ಕಾಣೆಯಾಗಿ ಹೋಗಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ಬಿಗ್ ಬಾಸ್ ಕನ್ನಡ ಸೀಸನ್ 8 (BBK S8) ರಲ್ಲಿ ವಿಜೇತರಾಗಿ ಕಾಣಿಸಿಕೊಂಡಂತಹ ಮಂಜು ಪಾವಗಡ (Manju Pavagada) ಅವರ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಮಂಜು ಪಾವಗಡ ಅತ್ಯಂತ ಕಡುಬಡತನದ ಕುಟುಂಬದಿಂದ ಬಂದವರು ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೂಡ ಕೆಲಸ ಮಾಡುತ್ತಿದ್ದವರು.
ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಅವರ ಹಾಗೂ ದಿವ್ಯ ಸುರೇಶ್ (Divya Suresh) ರವರ ನಡುವೆ ನಡೆದಂತಹ ಲವ್ವಿ ಡವ್ವಿ ಕುರಿತಂತೆ ನೀವೆಲ್ಲರೂ ನೋಡಿದ್ದೀರಿ. ಇದನ್ನು ನೋಡಿದ ನಂತರ ಇದೇನಪ್ಪ ಎರಡನೇ ಮದುವೆ ಎನ್ನುವುದಾಗಿ ನೀವೆಲ್ಲರೂ ಆಶ್ಚರ್ಯ ಪಡಬಹುದು ಅದಕ್ಕೂ ಕೂಡ ಒಂದು ಕಾರಣವಿದೆ. ಹೌದು ಮಿತ್ರರೇ, ಎರಡನೇ ಮದುವೆ ನಿಜ ಜೀವನದಲ್ಲಿ ಆಗುತ್ತಿಲ್ಲ ಬದಲಾಗಿ ಧಾರವಾಹಿಯಲ್ಲಿ ಆಗಿರುವುದು. ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಂತಹ ಹೊಸ ಧಾರವಾಹಿಯಲ್ಲಿ ಇದೇ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಲು ಮಂಜು ಪಾವಗಡ ಅವರ ನಾಯಕತ್ವದ ಧಾರವಾಹಿ ತಂಡ ಹೊರಟಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಂತರಪಟ (Antarapata Serial) ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿರುವ ಮಂಜು ಪಾವಗಡ (Manju Pavagada) ಅವರು ಈ ಧಾರವಾಹಿಯಲ್ಲಿ ಎರಡನೇ ಮದುವೆ ಆಗುವ ಮೂಲಕ ಹೆಣ್ಣು ಮಗುವಿನ ಮಲ-ತಂದೆಯಾಗಿ ಆಕೆಯ ಭವಿಷ್ಯವನ್ನು ರೂಪಿಸುವ ಕಥೆಯನ್ನು ಹೊಂದಿದೆ. ಈಗಾಗಲೇ ಕಾಮಿಡಿ ಕಿಲಾಡಿಗಳು ಸೇರಿದಂತೆ ಹಲವಾರು ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಮಂಜು ಪಾವಗಡ ಧಾರವಾಹಿಯ ಮೂಲಕ ಸೆಕೆಂಡ್ ಇನ್ನಿಂಗ್ಸ್ ಅನ್ನು ಪ್ರಾರಂಭಿಸುತ್ತಿದ್ದು ಅವರಿಗೆ ಶುಭವಾಗಲಿ ಎಂದು ಹಾರೈಸೋಣ.
🙄🙄🙄 ಕಚಡಾ ಗಳ ನಿಮಗೆ ಮಾಡೋಕೆ ಬೇರೆ ಏನು ಕೆಲಸ ಇಲ್ವಾ ಬರಿಯೋಕೆ ಒಳ್ಳೆ ನ್ಯೂಸ್ ಇಲ್ಲ ಅಂದ್ರೆ nim ಮನೆ ಕೆಲಸ ಆದ್ರೂ ಮಾಡಿಕೊಡಿ ಹೆಲ್ಪ್ ಆಗುತ್ತೆ nim ಮನೆಯವರಿಗೆ 🤦♂️🤦♂️