ಇತ್ತೀಚಿಗಷ್ಟೇ ನಟಿ ರಮ್ಯಾ ಅವರು ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮಕ್ಕೆ ಮೊದಲನೇ ಅತಿಥಿಯಾಗಿ ಹೋಗುವ ಮೂಲಕ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಉದ್ಘಾಟನೆಯನ್ನು ಮಾಡಿದರು. ಸಾಕಷ್ಟು ಸಮಯಗಳ ನಂತರ ರಾಜಕೀಯ ರಂಗವನ್ನು ಬಿಟ್ಟು ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಿರುವಂತಹ ನಟಿ ರಮ್ಯಾ(Actress Ramya) ಅವರ ಈ ಎಪಿಸೋಡ್ ಅನ್ನು ನೋಡಲು ಪ್ರತಿಯೊಬ್ಬರು ಕೂಡ ಕಾತರರಾಗಿದ್ದರು. ಮಾರ್ಚ್ 25 ಹಾಗೂ 26ರಂದು ಈ ಎಪಿಸೋಡ್ ಈಗಾಗಲೇ ಪ್ರಸಾರವಾಗಿರುವುದನ್ನು ನೀವು ಕೂಡ ನಿಮ್ಮ ಟಿವಿಯಲ್ಲಿ ನೋಡಿರುತ್ತೀರಿ.
ಆದರೆ ಈ ಕಾರ್ಯಕ್ರಮ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದು ಎಲ್ಲರೂ ಕೂಡ ರಮ್ಯಾ (Ramya) ಅವರ ಇಂಗ್ಲಿಷ್ ಪ್ರೀತಿಯನ್ನು ಖಂಡಿಸಿದ್ದಾರೆ. ಕಾರ್ಯಕ್ರಮದ ತುಂಬೆಲ್ಲ ರಮ್ಯಾ ಅವರು ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನೇ ಬಳಸಿದ್ದು ಎಲ್ಲರಿಗೂ ಕೂಡ ಕೋಪವನ್ನು ತರಿಸಿದೆ. ಇದಕ್ಕೂ ಮುಂಚೆ ಯೂಟ್ಯೂಬರ್ ಆಗಿರುವಂತಹ ಡಾಕ್ಟರ್ ಬ್ರೋ (Dr Bro)ಅನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆಸಿ ಎಂದಾಗ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಗಿರುವ ರಾಘವೇಂದ್ರ ಹುಣಸೂರು ಅವರು ನಿಮ್ಮ ಅಜ್ಜಿಗೆ ಅವರು ಗೊತ್ತಾ ಎಂಬುದಾಗಿ ಕೇಳುವ ಮೂಲಕ ಟೀಕೆಗೆ ಒಳಗಾಗಿದ್ದರು.
ಈಗ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ರಮ್ಯಾ ಅವರು ಕನ್ನಡ ನಟಿಯಾಗಿದ್ದರೂ ಕೂಡ ಸಂಪೂರ್ಣವಾಗಿ ಇಂಗ್ಲೀಷ್ ಅನ್ನೇ ಉಪಯೋಗಿಸಿರುವುದನ್ನು ನೋಡಿರುವ ನೆಟ್ಟಿಗರು ಅದರಲ್ಲಿ ವಿಶೇಷವಾಗಿ ಟ್ರೋಲಿಗರು ರಮ್ಯಾ ಅವರು ಇಂಗ್ಲಿಷ್ ನಲ್ಲಿ ಮಾತನಾಡಿರುವುದು ನಮ್ಮ ಅಜ್ಜಿಗೆ ಅರ್ಥ ಆಗ್ಲಿಲ್ವಂತೆ ಎನ್ನುವುದಾಗಿ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ನಟಿ ರಮ್ಯಾ ಅವರು ಕೂಡ ತಮಾಷೆಯಾಗಿ ಉತ್ತರವನ್ನು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಬಂದಿದ್ದವರಲ್ಲಿ ಬೇರೆ ಭಾಷೆಗಾರೆ ಹೆಚ್ಚಿದ ಕಾರಣದಿಂದಾಗಿ ಎಲ್ಲರಿಗೂ ಅರ್ಥ ಆಗಲಿ ಎನ್ನುವ ನಿಟ್ಟಿನಲ್ಲಿ ನಾನು ಇಂಗ್ಲಿಷ್ ಪದಗಳನ್ನು ಹೆಚ್ಚಾಗಿ ಬಳಸಿದ್ದೆ. ಮುಂದಿನ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಖಂಡಿತವಾಗಿ ನನ್ನ ಎಲ್ಲ ಮುದ್ದಿನ ಅಜ್ಜಿಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಮಾತನಾಡುತ್ತೇನೆ ಎಂಬುದಾಗಿ ಹೇಳುವ ಮೂಲಕ ಮತ್ತೆ ಟ್ರೋಲಿಗರಲಿ ದೊಡ್ಡ ಸುದ್ದಿಯಾಗಿದ್ದಾರೆ. ರಮ್ಯಾ(Ramya) ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.