Karnataka Times
Trending Stories, Viral News, Gossips & Everything in Kannada

Samantha: ತನಗಿರುವ ಅಪರೂಪದ ಕಾಯಿಲೆ ಬಗ್ಗೆ ಕೊನೆಗೂ ಸಮಂತಾ ಹೇಳಿದ್ದೇನು?

Advertisement

ದಕ್ಷಿಣ ಭಾರತ ಸಿನೆಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಕೇವಲ ತಮಿಳು, ತೆಲುಗು ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಾಲಿವುಡ್ (Bollywood) ನಲ್ಲಿಯೂ ಕೂಡ ಅಭಿನಯಿಸಿದ್ದಾರೆ. ನಿರಂತರವಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಮಂತ ಅವರು ಇತ್ತೀಚೆಗೆ ಮಯೋಸಿಟಿಸ್ ಎನ್ನುವ ಅಪರೂಪದ ಕಾಯಿಲೆಯನ್ನು ಜೊತೆಗೆ ಹೋರಾಟ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ತಮ್ಮ ಖಾಯಿಲೆಗೆ ಚಿಕಿತ್ಸೆ ಪಡೆದಿದ್ದಾರೆ ನಟಿ ಸಮಂತ. ಅವರ ಯಶೋಧ ಸಿನಿಮಾ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಸಿನಿಮಾ ಎನಿಸಿದೆ. ಆದ್ರೆ ಆ ಸಮಯದಲ್ಲಿಯೂ ಅವರಿಗೆ ಆರೋಗ್ಯದ ಸಮಸ್ಯೆ ಇತ್ತು. ಹಾಗಾಗಿ ಸಿನಿಮಾ ಮುಗಿಸಿದ ನಂತರ ಅವರು ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೂ ಸಮಂತ ಅವರ ಸಿನಿಮಾದಲ್ಲಿನ ಎಫರ್ಟ್(Effort)  ಅವರನ್ನ ಗೆಲ್ಲಿಸಿದೆ. ಯಶೋಧ ಸಿನಿಮಾ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ.

ಇನ್ನು ಮುಂಬರುವ ಏಪ್ರಿಲ್ 14ರಂದು ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಕೂಡ ರಿಲೀಸ್ ಆಗಲಿದೆ. ಈಗ ಸ್ವಲ್ಪ ಸ್ವಲ್ಪ ಚೇತರಿಸಿಕೊಂಡಿರುವ ನಟಿ ಸಮಂತಾ ಶಾಕುಂತಲಂ ಸಿನಿಮಾದ ಸಮಯದಲ್ಲಿಯೂ ತನ್ನ ಆರೋಗ್ಯ ಕೆಟ್ಟಿತು ಎಂಬುದರ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಶಾಕುಂತಲಂ ಸಿನಿಮಾ ಮಾಡುವಾಗಲೂ ತಮ್ಮ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಈ ಸಿನಿಮಾ ಮಾಡುತ್ತೇನೆ ಎನ್ನುವ ವಿಶ್ವಾಸ ಇರಲಿಲ್ಲ ಎಂದು ಹೇಳಿದ್ದಾರೆ.

ಗುಣಶೇಖರ್ ಶಾಕುಂತಲಂ ಚಿತ್ರದ ಕಥೆಯನ್ನು ಹೇಳಿದಾಗ ಈ ಪಾತ್ರ ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವ ದಿಗಿಲು ಇತ್ತು. ಆದರೆ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ (Family Man 2) ಮಾಡುವಾಗ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ಶಾಕುಂತಲ ಸಿನಿಮಾ ಶೂಟಿಂಗ್ ಸಮಯದಲ್ಲಿಯೂ ನಾನು ಮಯೋಸಿಟಿಸ್ ನಿಂದ ಕಷ್ಟಪಡುತ್ತಿದ್ದೆ. ಈ ಸಿನಿಮಾಕ್ಕೆ ವಿಶೇಷ ಆಹಾರಕ್ರಮ ತಾಲೀಮು ದಿನಚರಿಯನ್ನ ಅನುಸರಿಸಬೇಕಿತ್ತು ಆದರೆ ಈ ಎಲ್ಲಾ ಸವಾಲುಗಳ ಹೊರತಾಗಿಯೂ ಸಿನಿಮಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಒಬ್ಬ ನಟಿ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಇಷ್ಟೊಂದು ಸಮಸ್ಯೆ ಎದುರಿಸಿದ್ದರು ಕೂಡ ವೃತ್ತಿ ಜೀವನದ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡಿರುವುದಕ್ಕೆ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಸಮಂತ ಅವರು ಇನ್ನಷ್ಟು ಸಿನಿಮಾಗಳಲ್ಲಿ ನಟಿಸಲಿ ಎಂಬುದು ಅವರ ಅಭಿಮಾನಿಗಳ ಆಶಯ.

Leave A Reply

Your email address will not be published.