Karnataka Times
Trending Stories, Viral News, Gossips & Everything in Kannada

Prashanth Neel: ಕೆಜಿಎಫ್ ಸಂದರ್ಭದಲ್ಲಿ ಯಶ್ ಅವರ ಜೊತೆಗೆ ಪ್ರಶಾಂತ್ ನೀಲ್ ಮಾತು ಬಿಟ್ಟಿದ್ದೇಕೆ! ಅಸಲಿ ಸತ್ಯ ಇಲ್ಲಿದೆ

Rocking Star Yash ಇಂದು ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಎನ್ನುವ ಸಿನಿಮಾ ಸಿನಿಮಾ ಜಾಗತಿಕವಾಗಿ ಯಾವ ಮಟ್ಟದಲ್ಲಿ ಸದ್ದು ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಅದರ ಹಿಂದಿನ ಪರಿಶ್ರಮ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಒಂದು ಸಿನಿಮಾ ಎಂದರೆ ನಾಯಕನಟ ಕೇವಲ ನಟನೆಯನ್ನು ಮಾಡಿ ತನ್ನ ಸಂಭವನೆಯನ್ನು ತೆಗೆದುಕೊಂಡು ತನ್ನ ಮನೆಗೆ ಹೋಗುತ್ತಾನೆ ಆದರೆ ಇಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star Yash) ನಾಯಕ ನಟನಿಗಿಂತ ಹೆಚ್ಚಾಗಿ ಇರುವಂತಹ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

Advertisement

ಹೌದು ಇದು ಕೇವಲ ಗಾಳಿ ಸುದ್ದಿಯಲ್ಲ ಬದಲಾಗಿ ಸ್ವತಃ ಚಿತ್ರದ ನಿರ್ದೇಶಕರಾಗಿರುವಂತಹ ಪ್ರಶಾಂತ್ ನೀಲ್(Prashanth Neel) ರವರೆ ಹೇಳಿರುವ ಮಾತಿದು. ಇನ್ನು ಕೆಜಿಎಫ್ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗುತ್ತಿದ್ದ ಸಂದರ್ಭದಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಪ್ರಶಾಂತ್ ನೀಲ್ ಕೋಪದಿಂದ ಮಾತು ಬಿಟ್ಟಿದ್ದರು ಎನ್ನುವ ಸುದ್ದಿ ಕೂಡ ಈಗ ತಿಳಿದು ಬಂದಿದೆ. ಅಷ್ಟರಮಟ್ಟಿಗೆ ಸಿನಿಮಾ ಸಿನಿಮಾಗೆ ಸಂಬಂಧಪಟ್ಟಂತಹ ವ್ಯಕ್ತಿಗಳ ಜೀವನದಲ್ಲಿ ಪರಿಣಾಮ ಬೀರಿತ್ತು ಎಂದರು ತಪ್ಪಾಗಲಾರದು. ಅಷ್ಟಕ್ಕೂ ಯಾವ ಕಾರಣಕ್ಕಾಗಿ ಮಾತು ಬಿಟ್ಟಿದ್ದರು ಎನ್ನುವುದನ್ನು ತಿಳಿಯೋಣ ಬನ್ನಿ.

Advertisement

ಬಿಡುಗಡೆಗೆ ಇನ್ನು ಕೇವಲ ಆರು ತಿಂಗಳು ಇತ್ತು ಎನ್ನುವ ಸಂದರ್ಭದಲ್ಲಿ ಸಿನಿಮಾದ ಎಡಿಟಿಂಗ್ ನೋಡಿದ ನಂತರ ರಾಕಿಂಗ್ ಸ್ಟಾರ್ ಯಶ್(Yash) ರವರು ಪಕ್ಕನೆ ಇದನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡೋಣ ಎಂಬುದಾಗಿ ಹೇಳುತ್ತಾರೆ. ಆಗ ಇದನ್ನು ಕೇಳಿ ಒಂದೇ ಕ್ಷಣ ಈ ರೀತಿ ಯೋಜನೆಯನ್ನು ಬದಲಾಯಿಸಿರುವ ಕುರಿತಂತೆ ಪ್ರಶಾಂತ್ ನೀಲ್(Prashanth Neel) ಹಾಗೂ ಯಶ್ ಅವರ ನಡುವೆ ಭಿನ್ನಾಭಿಪ್ರಾಯಗಳಿಂದ ಸಾಕಷ್ಟು ವ್ಯತ್ಯಾಸಗಳು ಕೂಡ ಕಂಡು ಬಂದಿದ್ದವಂತೆ. ಆದರೂ ಕೂಡ ಹಠ ಬಿಡದ ರಾಕಿಂಗ್ ಸ್ಟಾರ್ ಯಶ್ ರವರು ಈ ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಬಿಡುಗಡೆ ಮಾಡಲೇಬೇಕು ಎನ್ನುವುದಾಗಿ ಸಾಕಷ್ಟು ಓಡಾಡಿದ್ದರಂತೆ.

Advertisement

ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ಯಾನ್ ಇಂಡಿಯಾ ಎನ್ನುವ ಮಹಾ ಜಗತ್ತಿಗೆ ರಾಕಿಂಗ್ ಸ್ಟಾರ್ ಯಶ್ ರವರ ಮಾರ್ಗದರ್ಶನದಿಂದಲೇ ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿ ಯಶಸ್ಸನ್ನು ಕಂಡಿತು ಎಂದು ಹೇಳಬಹುದಾಗಿದೆ. ಇದನ್ನು ಕೆಜಿಎಫ್ ಚಿತ್ರದ ನಿರ್ದೇಶಕರಿಂದ ಹಿಡಿದು ನಿರ್ಮಾಪಕರವರೆಗೆ ಎಲ್ಲರೂ ಕೂಡ ಒಪ್ಪುತ್ತಾರೆ. ಕೆಜಿಎಫ್ ಸರಣಿ ಚಿತ್ರಗಳಿಂದ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಇಂಪ್ಯಾಕ್ಟ್ ಅನ್ನು ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್(Yash) ಅವರ ಮುಂದಿನ ಸಿನಿಮಾದ ಕುರಿತಂತೆ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕಾತರದಿಂದ ಕಾಯುತ್ತಿದ್ದಾರೆ.

Leave A Reply

Your email address will not be published.