Sanvi Sudeep: ಅದ್ಭುತವಾಗಿ ಇಂಗ್ಲಿಷ್ ಹಾಡು ಹಾಡಿದ ಸುದೀಪ್ ಮಗಳು ಸಾನ್ವಿ, ಒಂದೇ ದಿನ ಕೋಟಿ ವೀಕ್ಷಣೆ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ರವರು ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಬೇಡಿಕೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ನಟರನ್ನು ಭಾರತೀಯ ಚಿತ್ರರಂಗ ನಾಯಕ ನಟರನ್ನಾಗಿ ನೋಡಲು ಅಥವಾ ಕೇವಲ ವಿಲನ್ ಪಾತ್ರದಲ್ಲಿ ನೋಡಲು ಬಯಸುತ್ತದೆ. ಆದರೆ ಕಿಚ್ಚ ಸುದೀಪ್ ಅವರಂತಹ ಪ್ರತಿಭಾನ್ವಿತ ಕಲಾವಿದನನ್ನು ಪ್ರಮುಖ ಎನಿಸುವಂತಹ ಯಾವುದೇ ಪಾತ್ರಗಳಲ್ಲಿ ನಟಿಸಿದರು ಕೂಡ ಹೀರೋಗಿಂತ ಹೆಚ್ಚಿನ ಜನಪ್ರಿಯತೆಯನ್ನು ಜನರು ಆ ಪಾತ್ರಕ್ಕೆ ನೀಡುತ್ತಾರೆ. ಒಂದು ಸಿನಿಮಾದಲ್ಲಿ ಕಿಚ್ಚ ಸುದೀಪ್ ರವರು ಇದ್ದಾರೆ ಎಂದರೆ ಸಾಕು, ಥಿಯೇಟರ್ ಗೆ ಜನರು ಸಾವಿರಾರು ಸಂಖ್ಯೆಯಲ್ಲಿ ನುಗ್ಗುತ್ತಾರೆ.
ಈಗ ಅದೇ ಸರ್ವತೋಮುಖ ಪ್ರತಿಭಾನ್ವಿತ ಕಿಚ್ಚ ಸುದೀಪ್ ರವರ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಅವರ ಸಹೋದರನ ಪುತ್ರ ಸಂಚಿತ್ ಸಂಜೀವ್ (Sanchith Sanjeev) ಅವರು ಕಿಚ್ಚ ಸುದೀಪ್ ರವರ ಲೆಗಸ್ಸಿಯನ್ನು ಮುಂದುವರಿಸುವಂತಹ ಜವಾಬ್ದಾರಿಯನ್ನು ಜಿಮ್ಮಿ ಸಿನಿಮಾದ (Jimmy Film) ಮೂಲಕ ಸಿದ್ದರಾಗಿದ್ದಾರೆ ಎಂದು ಹೇಳಬಹುದಾಗಿದೆ.
ಈ ಸಿನಿಮಾದ ಮೂಲಕ ಕೇವಲ ಸಂಚಿತ್ ಸಂಜೀವ್ ಮಾತ್ರ ಲಾಂಚ್ ಆಗುತ್ತಿಲ್ಲ ಬದಲಾಗಿ ಕಿಚ್ಚ ಸುದೀಪ್ ರವರ ಸ್ವಂತ ಮಗಳಾಗಿರುವ ಸಾನ್ವಿ ಸುದೀಪ್ (Sanvi Sudeep) ಕೂಡ ಲಾಂಚ್ ಆಗಿದ್ದಾರೆ. ಲಾಂಚ್ ಆಗುತ್ತಿದ್ದಾರೆ ಎಂದ ಮಾತ್ರಕ್ಕೆ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿಲ್ಲ ಬದಲಾಗಿ ಸಿನಿಮಾದಲ್ಲಿ ಅವರು ಸಿಂಗರ್ ಆಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಅವರು ಹಾಡಿರುವಂತಹ ಹಾಡು, ಜಿಮ್ಮಿ ಚಿತ್ರದ ಥೀಮ್ ಸಾಂಗ್ ಆಗಿದ್ದು ಯಾವುದೇ ಹಾಲಿವುಡ್ ಹಾಡಿಗೂ ಕೂಡ ಕಡಿಮೆ ಇಲ್ಲದಂತಿದೆ.
ಕಿಚ್ಚ ಸುದೀಪ್ ರವರ ಮಗಳು (Sanvi Sudeep) ಹಾಡಿರುವಂತಹ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಕೂಡ ಸಿನಿಮಾದ ಟೀಸರ್ ಪಡೆದುಕೊಂಡಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಸಾನ್ವಿ ಸುದೀಪ್ ರವರ ವಾಯ್ಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ಹಂಚಿಕೊಳ್ಳಬಹುದಾಗಿದೆ.