Karnataka Times
Trending Stories, Viral News, Gossips & Everything in Kannada

Amrutha Iyangar: ನಟಿ ಅಮೃತಾ ಐಯ್ಯಂಗಾರ್ ಬ್ಯಾಗ್ ನಲ್ಲಿ‌ ಏನೆಲ್ಲಾ ಇರುತ್ತಂತೆ ಗೊತ್ತಾ, ಓಪನ್ ಆಗಿ ಹೇಳಿದ ನಟಿ

Advertisement

ನಟಿ ಅಮೃತಾ ಐಯ್ಯಂಗಾರ್ (Amrutha Iyangar) ಅವರು ಕನ್ನಡ ಸಿನೆಮಾರಂಗದಲ್ಲಿ ಬಹುನಿರೀಕ್ಷೆ ಹುಟ್ಟಿಸಿದ ನಟಿ ಎನ್ನಬಹುದು. ಲವ್ ಮಾಕ್ಟೆಲ್ (Love mocktail) ಸಿನೆಮಾ ವಂತೂ ಇವರ ಬದುಕಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ತಂದು ಕೊಟ್ಟಿತ್ತು. ಇವರ ಅಭಿನಯದ ಮುಂದಿನ ಸಿನೆಮಾ ಡಾಲಿ ಧನಂಜಯ್ ಅವರು ನಾಯಕನಾಗಿ ಅಭಿನಯಿಸಿದ್ದ ಹೋಯ್ಸಳ (Hoysala) ಸಿನೆಮಾ ಸದ್ಯ ಎಲ್ಲೆಡೆ ಪ್ರಚಾರದ ಗುಂಗಿನಲ್ಲಿ ಇದೆ.

ಸದ್ಯ ಇದೇ ಸಿನೆಮಾ ಪ್ರಚಾರಕ್ಕೆ ಖಾಸಗಿ ವಾಹಿನಿಯೊಂದಕ್ಕೆ ತೆರಳಿದ್ದ ನಟಿ ಅಮೃತಾ ಅವರು ತಮ್ಮ ಬ್ಯಾಗಿನಲ್ಲಿ ಏನೆಲ್ಲಾ ವಸ್ತುಗಳನ್ನು ಕ್ಯಾರಿ ಮಾಡುತ್ತಾರೆಂದು ತಿಳಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಅಚ್ಚರಿಯಾಗುವ ಹೇಳಿಕೆಯನ್ನು ನೀಡಿದ್ದಾರೆ.

ಏನೆಲ್ಲಾ ಕ್ಯಾರಿ ಮಾಡುತ್ತಾರೆ?

ನಟಿ ಅಮೃತಾ ಐಯ್ಯಂಗಾರ್ ಅವರು ತಮ್ಮ ಬ್ಯಾಗಿನ ಸಿಕ್ರೆಟ್ ಅನ್ನು ರಿವಿಲ್ ಮಾಡಿದ್ದಾರೆ. ಅವರ ಬ್ಯಾಗು ಹಳದಿ ಬಣ್ಣವಾಗಿದ್ದು ಇದು ಒಂದು ನೋಟೀಸ್ ಮಾಡುವ ಬಣ್ಣ ಹಾಗಾಗಿ ಇಷ್ಟ ಆಯಿತು ಎಂದಿದ್ದಾರೆ. ಅಡಿದಾಸ್ ಕಂಪೆನಿಯ ಬ್ಯಾಗ್ ಅದಾಗಿದ್ಧು ಅದು ಖರೀದಿ ಮಾಡಿ ಏಳು ತಿಂಗಳು ಕಳೆದಿತ್ತಂತೆ ಹಾಗೂ ತಮ್ಮ ವರ್ಕೌಟ್ ಮತ್ತು ಸಿನೆಮಾ ತರನಾದ ಸಂದರ್ಶನ ಇತರ ಕಾರ್ಯಕ್ರಮಕ್ಕೆ ಹೋಗುವಾಗ ಈ ಎಲ್ಲ ವಸ್ತುವನ್ನು ತಾವು ಕ್ಯಾರಿ ಮಾಡುದಾಗಿ ತಿಳಿಸಿದ್ದಾರೆ.

ಬ್ಯಾಗ್ ನಲ್ಲಿ ಏನಿದೆ?

ಅವರ ಬ್ಯಾಗ್ ನಲ್ಲಿ ಮೊದಲು ಸಣ್ಣ ಪೌಚ್ ತೆಗೆದು ಅಲ್ಲಿರುವ ಕಿವಿಯೊಲೆ ಸರ ಇತರ ಆಭರಣವನ್ನು ಪರಿಚಯಿಸುತ್ತಾರೆ. ಈ ಮೂಲಕ ದೊಡ್ಡ ದೊಡ್ಡ ಕಿವಿಯೋಲೆ ತೋರಿಸಿ ಇದು ಕಿವಿಯವೊಲೆ , ಬಳೆ ಅಂದುಕೊಳ್ಳಬೇಡಿ ನನ್ನ ಲುಕ್ ಬದಲಾಗಲು ಇದು ಸಿಂಪಲ್ಲಾಗಿ ಅಗತ್ಯವಾಗುತ್ತದೆ ಎಂದಿದ್ದಾರೆ. ಬಳಿಕ ತಮ್ಮ ಮೇಕಪ್ ಐಟಂ ಅನ್ನು ತೋರ್ಪಡಿಸಿದ್ದು ಅದರಲ್ಲಿ ಐಲ್ಯಾಶ್ , ಪೆನ್ಸಿಲ್, ಫೌಂಡೇಶನ್ ಇತರ ಮೇಕಪ್ ವಸ್ತುಗಳನ್ನು ತಿಳಿಸಿದ್ದಾರೆ.

ಯಾವ ವಸ್ತು ಅಗತ್ಯ

ಅವರ ಬ್ಯಾಗ್ ನಲ್ಲಿ ಅವರ ಬಾಡಿ ಸ್ಪ್ರೆ, ಬಾಚಣಿಗೆ , ಹತ್ತು ಇಪ್ಪತ್ತು ರೂಪಾಯಿಗಳು, ಚ್ವಿಗಂ, ಚಾರ್ಜರ್ ಹಾಗೂ ಪವರ್ ಬ್ಯಾಂಕ್ ಕ್ಯಾರಿ ಮಾಡುವುದು ತುಂಬಾ ಅಗತ್ಯ ಎಂದಿದ್ದಾರೆ. ಬಳಿಕ ಎರಡು ಟೀ ಶರ್ಟ್ ತೋರಿಸಿ ನಮಗೆ ಸಡನ್ ಸಂದರ್ಶನ ಎಲ್ಲ ಇರುತ್ತೆ ಆಗ ಒಂದೇ ಜೀನ್ಸ್ ಗೆ ಬೇರೆ ಶರ್ಟ್ ಹಾಕಿ ಕಿವಿಯೋಲೆ ಹಾಕಿ ಫಟಾಫಟ್ ರೆಡಿಯಾಗ್ತೇವೆ ಎಂದಿದ್ದಾರೆ. ಬಳಿಕ ತಮ್ಮ ತಲೆ ಕೂದಲು ಸುತ್ತುವ ರಬ್ಬರ್ ಹಿಡಿದುಕೊಂಡು ಇದಂತೂ ತುಂಬಾ ಅಗತ್ಯ , ಎಷ್ಟೊ ಹುಡುಗಿರ ಹತ್ತಿರ ಹಣ ಇದ್ರೂ ಇದನ್ನು ಬೇರೆ ಅವರ ಹತ್ರ ಕೇಳಬೇಕಾದ ಪರಿಸ್ಥಿತಿ ಬರುತ್ತೆ ನಾನು ಇದನ್ನು ತುಂಬಾ ಕ್ಯಾರಿ ಮಾಡ್ತೆನೆ. ನಾವು ಇದನ್ನು ಎಷ್ಟು ಖರೀದಿ ಮಾಡಿದರೂ ಮುಗಿಯೋದೆ ಇಲ್ಲ. ಈ ವಸ್ತು ಎಲ್ಲಿ ಹೋಗುತ್ತದೆ ಅನ್ನೊದೆ ಗೊತ್ತಾಗೊಲ್ಲ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಬ್ಯಾಗಿನ ವಸ್ತುಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ಈ ವೀಡಿಯೋ ಮೂಲಕ ನೀಡಿದ್ದು ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

 

Leave A Reply

Your email address will not be published.