ಡಾಲಿ ಧನಂಜಯ್ (Dhananjaya) ಅಭಿನಯದ ಬಹು ನಿರೀಕ್ಷಿತ ಹೊಯ್ಸಳ ಸಿನಿಮಾ (Hoysala Movie) ಮಾರ್ಚ್ 30 ಇಂದು ಬಿಡುಗಡೆ ಗೊಂಡಿದೆ. ಚಿತ್ರಕ್ಕೆ ಅಭಿಮಾನಿಗಳ ಮೆಚ್ಚುಗೆಯ ಸುರಿಮಳೆ ದೊರೆತಿದೆ, ಡಾಲಿ ಮೊದಲ ಬಾರಿಗೆ ಖಾಕಿ ಬಟ್ಟೆ ಹಾಕಿ ಡೈಲಾಗ್ ಹೊಡೆದಿದ್ದು ಸಲಗ ಚಿತ್ರದಲ್ಲಿ, ಸಾಮ್ರಾಟ್ ಅನ್ನೋ ಪಾತ್ರದ ಮೂಲಕ ಅವರು ಚಿತ್ರದಲ್ಲಿ ಎಲ್ಲರ ಗಮನಸೆಳೆದಿದ್ದರು. ಈಗ ಗುರುದೇವ್ ಹೊಯ್ಸಳ ಸಿನಿಮಾದಲ್ಲೂ ಖಡಕ್ ಪೊಲೀಸ್ ಅಧಿಕಾರಿಯಾಗಿ ಖಡಕ್ ಡೈಲಾಗ್ ಹೊಡೆದು ಬಂದಿದ್ದಾರೆ.
ಚಿತ್ರದಲ್ಲಿ ಡಾಲಿ, ಅಮೃತಾ ಕಾಂಬೀನೇಷನ್ ಮೋಡಿ:
ಈ ಸಿನಿಮಾದಲ್ಲಿ ಡಾಲಿಗೆ ಜೋಡಿಯಾಗಿ ಅಮೃತಾ ಐಯ್ಯಂಗಾರ್ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಈಗಾಗಲೇ ಗುಸು ಗುಸು ಸುದ್ದಿ ಹರಡುತ್ತಿದೆ. ಇಬ್ಬರು ಜೊತೆ ಗೂಡಿ ಹಲವು ಸಿನಿಮಾ ಮಾಡಿದ್ದಾರೆ, ಜೊತೆಗೆ ಅಮೃತಾ ಒಮ್ಮೆ ಸಂದರ್ಶನಲ್ಲಿ ಮಿಡಲ್ ಕ್ಲಾಸ್ ಹುಡುಗ ಬೇಕು ಅಂದಿದ್ದರು, ಸೋ ಇಬ್ಬರು ಮದುವೆ ಯಾಗ್ತಾರೆ ಅನ್ನುವ ಸುದ್ದಿ ಹರಡಿತ್ತು, ಸಿನಿಮಾದಲ್ಲೂ ಇವರ ಜೋಡಿ ಮೋಡಿ ಮಾಡಿದೆ, ನಿಜ ಜೀವನದಲ್ಲೂ ಜೋಡಿ ಆಗ್ತಾರಾ ಕಾದು ನೋಡ್ಬೆಕು.
ರಮ್ಯ ಈ ಜೋಡಿಗೆ ಕಾಲೆಳೆದಿದ್ದು ಹೀಗೆ:
ಸಿನಿಮಾ ದಿಂದ ದೂರ ಉಳಿದಿರುವ ನಟಿ ರಮ್ಯ (Ramya) ಅನೇಕ ನಟ ನಟಿಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೌದು, ಡಾಲಿ ಧನಂಜಯ್ (Dhananjay) ನಟನೆಯ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್ ನಲ್ಲಿ (hoysala film shooting set) ರಮ್ಯಾ ಈ ಮೊದಲು ಕಾಣಿಸಿಕೊಂಡಿದ್ದರು ಚಿತ್ರೀಕರಣದ ವೇಳೆ ರಮ್ಯಾ ಮತ್ತು ಡಾಲಿ ಧನಂಜಯ್ ಅವರು ಜೊತೆಯಾಗಿ ಕುಳಿತು ಮಾತನಾಡಿದ ವಿಡಿಯೋ ವೈರಲ್ ಆಗಿತ್ತು, ಇದೀಗ ಚಿತ್ರ ನೋಡಿದ ರಮ್ಯ ಸಿನಿಮಾ ಸೂಪರ್ ಆಗಿದೆ ಎಂದು ತಿಳಿಸಿದ್ದಾರೆ, ಅಮೃತಾ ಆ್ಯಕ್ಟ್ ಸೂಪರ್ ಅಥವಾ ಡಾಲಿ ದ್ದ ಕೇಳಿದ್ದಕ್ಕೆ, ಇಬ್ಬರು ಚೆನ್ನಾಗಿ ಮಾಡಿದ್ದಾರೆ, ಇವರ ಕಾಂಬೀನೇಷನ್ ಆಪ್ ದ ಸ್ಕ್ರಿನ್ ಅನ್ ದಾ ಸ್ಕ್ರಿನ್ ಕೂಡ ಚೆನ್ನಾಗಿದೆ ಎಂದು ಕಾಲೆಳೆದಿದ್ದಾರೆ, ಇದಕ್ಕೆ ಡಾಲಿ ಮತ್ತು ಅಮೃತಾ ಇಬ್ಬರು ನಕ್ಕಿದ್ದಾರೆ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಖಾಕಿ ತೊಟ್ಟು ಡೈಲಾಗ್ ಹೊಡೆದ ಡಾಲಿ:
ಉತ್ತರ ಕರ್ನಾಟಕ ಸೊಗಡು ಈ ಚಿತ್ರದಲ್ಲಿ ತುಂಬಿದೆ, ಮಾಸ್ತಿ ಬರೆದ ಸಂಭಾಷಣಿ ಸಖತ್ ಆಗೇ ಇದೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದಲ್ಲಿ ಹೊಸ ಥರದ ಥ್ರಿಲ್ ಇದೆ, ಡಾಲಿ ಕೂಡ ಖಡಕ್ ಆಗೇ ಡೈಲಾಗ್ ಹೊಡೆದು ಮಿಂಚಿದ್ದಾರೆ, ಹೊಯ್ಸಳ ಚಿತ್ರವನ್ನು ಮೊದಲು ಸುದೀಪ್ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಸಿನಿಮಾಕ್ಕೆ ಹಿಟ್ ಸಿನಿಮಾ ಅನ್ನೋ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದೀಗ ಚಿತ್ರದ ಕಥೆಗೆ ಅಭಿಮಾನಿಗಳು ವಾವ್ಹ್ ಅಂದಿದ್ದಾರೆ,