Akul Balaji: ನಿರೂಪಕ ಅಕುಲ್ ಬಾಲಾಜಿ ಅವರ ಪತ್ನಿ ಸಾಮಾನ್ಯದವರೇನಲ್ಲ! ಇಲ್ಲಿದೆ ಗೊತ್ತಿರದ ಸಂಗತಿ

Advertisement
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ನಿರೂಪಕನಾಗಿ ನಟನಾಗಿ ಕಾಣಿಸಿಕೊಂಡಿರುವಂತಹ ಅಕುಲ್ ಬಾಲಾಜಿ(Akul Balaji) ಅವರು ಮೂಲತಃ ಕರ್ನಾಟಕದವರೇನಲ್ಲ. ಹೀಗಿದ್ದರೂ ಕೂಡ ಸಾಕಷ್ಟು ಕನ್ನಡಿಗರಿಗಿಂತ ಹಾಗೂ ಕನ್ನಡ ಸೆಲೆಬ್ರಿಟಿ ಗಳಿಗಿಂತ ಚೆನ್ನಾಗಿ ಕನ್ನಡವನ್ನು ಮಾತನಾಡುತ್ತಾರೆ ಹಾಗೂ ಕರ್ನಾಟಕ ಮತ್ತು ಕನ್ನಡ ಭಾಷೆಯನ್ನು ಗೌರವಿಸುವುದನ್ನು ಕಲಿತುಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ(Andhra Pradesh) ಜನಿಸಿರುವ ಅಕುಲ್ ಬಾಲಾಜಿ ಅವರು 16ನೇ ವಯಸ್ಸಿನಲ್ಲಿ ಇರಬೇಕಾದರೆ ಬೆಂಗಳೂರನ್ನು ಪ್ರವೇಶಿಸಿದ ನಂತರವಷ್ಟೇ ಅವರು ಕನ್ನಡ ಭಾಷೆಯನ್ನು ಕಲಿತುಕೊಳ್ಳುತ್ತಾರೆ.
ರಂಗಭೂಮಿಯಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡುತ್ತಿದ್ದ ಅಕುಲ್ ಬಾಲಾಜಿ(Akul Balaji) ಅವರಿಗೆ ಕನ್ನಡದ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳಲ್ಲಿ ನಟಿಸುವಂತಹ ಅವಕಾಶ ಕೂಡ ಹುಡುಕಿಕೊಂಡು ಬರುತ್ತದೆ. ಇದರ ಜೊತೆಗೆ ಅವರಿಗೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಅದೃಷ್ಟವನ್ನು ಕಲ್ಪಿಸಿ ಕೊಟ್ಟಂತಹ ಕಾರ್ಯಕ್ರಮ ಎಂದರೆ ಅದು ಕುಣಿಯೊಣು ಬಾರ ಎನ್ನುವ ಕಾರ್ಯಕ್ರಮದಲ್ಲಿ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದು. ಅಲ್ಲಿಂದ ಆಚೆಗೆ ಅವರು ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ.
ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಸಿನಿಮಾ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ಅಕುಲ್ ಬಾಲಾಜಿ(Akul Balaji) ಸಾಕಷ್ಟು ಮೋಡಿ ಮಾಡಿ ಬಂದವರು. ಇನ್ನು ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ಕೋಟ್ಯಾಧೀಶ್ವರನ ಮಗಳಾಗಿರುವ ಜ್ಯೋತಿ ಎನ್ನುವವರನ್ನು ಅವರ ಮದುವೆ ಆಗಿರುತ್ತಾರೆ. ಇನ್ನು ಈ ಜ್ಯೋತಿ ಯಾರು ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ತೆಲುಗಿನ ಸೂಪರ್ ಸ್ಟಾರ್ ಆಗಿರುವಂತಹ ಮಹೇಶ್ ಬಾಬು(Mahesh Babu) ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಎರಡನೇ ಹೆಂಡತಿ ವಿಜಯ ನಿರ್ಮಲ ಅವರ ಸೊಸೆ ಜ್ಯೋತಿ ಆಗಿದ್ದಾರೆ. ಹೀಗಾಗಿ ಕೇವಲ ಅಕುಲ್ ಬಾಲಾಜಿ(Akul Balaji) ಮಾತ್ರವಲ್ಲದೆ ಅವರ ಪತ್ನಿಯಾಗಿರುವ ಜ್ಯೋತಿ ಕೂಡ ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಿನಿಮಾ ಕುಟುಂಬದ ಹಿನ್ನೆಲೆಯನ್ನು ಹೊಂದಿರುವವರೆ ಎಂದು ಹೇಳಬಹುದು ಅವರ ತಂದೆ ಕೂಡ ಕೋಟ್ಯಾಧೀಶ್ವರರಾಗಿದ್ದಾರೆ. ಇವರಿಬ್ಬರ ಲವ್ ಮ್ಯಾರೇಜ್ ಅನ್ನು ಕೂಡ ನಾವು ಈ ಸಂದರ್ಭದಲ್ಲಿ ಮರೆಯಬಾರದು. ಏನೇ ಆಗಲಿ ಅಕುಲ್ ಬಾಲಾಜಿ ಅವರು ತಮ್ಮ ಸ್ವಂತ ಪರಿಶ್ರಮದಿಂದಲೇ ಇಂದು ಚಿತ್ರರಂಗದಲ್ಲಿ ಈ ಮಟ್ಟಿಗೆ ಹೆಸರನ್ನು ಮಾಡಿರೋದು.