Geetha ShivaRajkumar: ಶಿವಣ್ಣ ಹಾಗೂ ಗೀತಕ್ಕ ನಡುವಿನ ಅಸಲಿ ವಯಸ್ಸಿನ ಅಂತರ ಎಷ್ಟು ಗೊತ್ತಾ?

Advertisement
ಅಣ್ಣಾವ್ರ ಮನೆಯಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಮೊದಲು ಕಾಲಿಟ್ಟಂತಹ ಮತ್ತೊಂದು ಪ್ರತಿಭೆ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿ ಶಿವಣ್ಣ(Karunda Chakravarthy Shivanna). ಆನಂದ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ 35 ವರ್ಷಗಳಿಗೂ ಅಧಿಕಕಾಲ ಕಳೆದಿದ್ದರು ಕೂಡ ಇನ್ನೂ ಕೂಡ ಕನ್ನಡ ಚಿತ್ರರಂಗದಲ್ಲಿ ರಾಜನಾಗಿಯೇ ಮರೆಯುತ್ತಿದ್ದಾರೆ. ವಯಸ್ಸು 60 ಆಗಿದ್ದರೂ ಕೂಡ ಎಂದಿಗೂ ಕೂಡ ಯುವ ನಟರು ನಾಚುವಂತೆ ನಟನೆ ಮಾಡುತ್ತಾರೆ.
ಇನ್ನು ಶಿವಣ್ಣ(Shivanna) ಅವರ ದಾಂಪತ್ಯ ಜೀವನವನ್ನು ಗಮನಿಸುವುದಾದರೆ ಗೀತಕ್ಕ(Geetha Shivarajkumar) ಅವರನ್ನು 1986 ರಲ್ಲಿ ಮದುವೆಯಾಗುತ್ತಾರೆ. ಗೀತಕ್ಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಬಂಗಾರಪ್ಪ ಅವರ ಮಗಳಾಗಿರುತ್ತಾರೆ. ಶಿವಣ್ಣ ಗೀತಕ್ಕ ಅವರನ್ನು ಮದುವೆಯಾದ ವರ್ಷವೇ ಕನ್ನಡ ಚಿತ್ರರಂಗಕ್ಕೆ ಆನಂದ್ ಸಿನಿಮಾದ ಮೂಲಕ ಕಾಲಿಡುತ್ತಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ 125ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕೆಲವೇ ಕೆಲವು ಸ್ಟಾರ್ ನಟರಲ್ಲಿ ಶಿವಣ್ಣ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.
ಇತ್ತೀಚಿಗಷ್ಟೇ ವೇದ ಸಿನಿಮಾದ ಮೂಲಕ ಗೀತಾ ಶಿವರಾಜ್ ಕುಮಾರ್(Shivarajkumar) ಅವರು ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಕೂಡ ಅವರ ಅತ್ತೆ ಪಾರ್ವತಮ್ಮ ರಾಜಕುಮಾರ್ ಅವರಂತೆ ಪಾದರ್ಪಣೆ ಮಾಡಿದ್ದಾರೆ. ಇನ್ನು ಶಿವಣ್ಣ ಹಾಗೂ ಗೀತಕ್ಕ(Geethakka) ದಂಪತಿಗಳಿಗೆ ನಿವೇದಿತ ಹಾಗೂ ನಿರುಪಮ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇನ್ನು ಭರ್ಜರಿ 35 ವರ್ಷಗಳಿಗಿಂತಲೂ ಅಧಿಕಕಾಲ ಯಾವುದೇ ಸುದ್ದಿ ಇಲ್ಲದೆ ಸುಖವಾಗಿ ಎಲ್ಲರೂ ಮೆಚ್ಚುವ ಹಾಗೆ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬಂದಿರುವ ಶಿವಣ್ಣ ಹಾಗೂ ಗೀತಕ್ಕ ದಂಪತಿಗಳ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವುದನ್ನು ತಿಳಿಯೋಣ ಬನ್ನಿ. ಶಿವಣ್ಣ ಹಾಗೂ ಗೀತಕ್ಕ ದಂಪತಿಗಳ ನಡುವಿನ ವಯಸ್ಸಿನ ಅಂತರ ಮೂಲಗಳ ಪ್ರಕಾರ 10 ವರ್ಷ ಇದೆ ಎಂಬುದಾಗಿ ತಿಳಿದುಬಂದಿದೆ. ಅಂದರೆ ಶಿವಣ್ಣನ(Shivanna) ವಯಸ್ಸು 60 ಆಗಿದ್ದರೆ ಗೀತಕ್ಕ ಅವರ ವಯಸ್ಸು 50 ವರ್ಷ ಆಗಿದೆ ಎಂಬುದಾಗಿದೆ. ಕನ್ನಡ ಚಿತ್ರರಂಗದ ಶಿವ ಪಾರ್ವತಿಯರಂತೆ ಕಾಣಿಸಿಕೊಳ್ಳುವ ಶಿವಣ್ಣ ಹಾಗೂ ಗೀತಕ್ಕ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.