ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಮೇಘನಾ ರಾಜ್ ಅವರು ಅತ್ಯಂತ ಕಡಿಮೆ ವಯಸ್ಸಿನಲ್ಲಿ ತಮ್ಮ ಪತಿ ಚಿರು ಸರ್ಜಾ(Chiru Sarja) ಅವರನ್ನು ಕಳೆದುಕೊಳ್ಳುತ್ತಾರೆ. ಇದು ಕೇವಲ ಅವರಷ್ಟೇ ಅಲ್ಲ ಯಾರದ್ದೇ ಜೀವನದಲ್ಲಿ ಆಗಿದ್ದರೂ ಕೂಡ ದೊಡ್ಡ ಮಟ್ಟದ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿತ್ತು. ಅದೇ ರೀತಿ ನಟಿ ಮೇಘನಾ ರಾಜ್(Meghana Raj) ಅವರ ಜೀವನ ಕೂಡ ಸಂಪೂರ್ಣವಾಗಿ ಸೋತು ಹೋದಂತೆ ಕಾಣುತ್ತಿತ್ತು. ಆದರೆ ನಟಿ ಮೇಘನ ರಾಜ್ ಅವರು ಅಷ್ಟೊಂದು ಸುಲಭಕ್ಕೆ ಸೋಲನ್ನು ಒಪ್ಪಿಕೊಳ್ಳುವಂತಹ ಹೆಣ್ಣಾಗಿರಲಿಲ್ಲ.
ಇದೇ ಸಂದರ್ಭದಲ್ಲಿ ನಟಿ ಮೇಘನ ರಾಜ್ ಅವರಿಗೆ ರಾಯನ್ ರಾಜ್ ಸರ್ಜಾ(Rayan Raj Sarja) ಎನ್ನುವ ಗಂಡು ಮಗ ಕೂಡ ಜನಿಸುತ್ತಾನೆ. ಕೇವಲ ಒಬ್ಬ ಪೋಷಕಗಳಾಗಿ ಮಗುವನ್ನು ಸಾಕುವುದು ಅಷ್ಟೊಂದು ಸುಲಭದ ಮಾತಲ್ಲ ಆದರೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ನಟಿ ಮೇಘನಾ ರಾಜ್(Meghana Raj) ಅವರು ತಮ್ಮ ಮಗನಿಗಾಗಿ ಉತ್ತಮ ಜೀವನವನ್ನು ಹಾಗೂ ಭವಿಷ್ಯವನ್ನು ರೂಪಿಸಲೇಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಅದಕ್ಕಾಗಿ ಚಿತ್ರರಂಗದಿಂದ ಹಾಗೂ ಸಿನಿಮಾ ಪ್ರಪಂಚದಿಂದ ದೂರವಾಗಿದ್ದು ನಟಿ ಮೇಘನಾ ರಾಜ್ ಮತ್ತೆ ಈಗ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸಿದ್ದು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಕೇವಲ ಸಿನಿಮಾ ಪ್ರಪಂಚದಲ್ಲಿ ಮಾತ್ರವಲ್ಲದ ಯೂಟ್ಯೂಬ್ ಲೋಕಕ್ಕೆ ಕೂಡ ನಟಿ ಮೇಘನಾ ರಾಜ್(Actress Meghana Raj) ಅವರು ಕಾಲಿಟ್ಟಿದ್ದು ತಮ್ಮದೇ ಹೆಸರಿನಲ್ಲಿ ಒಂದು youtube ಚಾನೆಲ್ ಅನ್ನು ಕೂಡ ಈಗಾಗಲೇ ಪ್ರಾರಂಭಿಸಿದ್ದಾರೆ. ಇನ್ನು ಈ ಯುಟ್ಯೂಬ್ ಚಾನೆಲ್ ನಲ್ಲಿ ತಮ್ಮ ದಿನ ನಿತ್ಯದ ಜೀವನದ ಕುರಿತಂತೆ ನಟಿ ಮೇಘನಾ ರಾಜ್ ಅವರು ಹಂಚಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಂದು ಎನ್ನುವ ಒಬ್ಬ ಸ್ನೇಹಿತೆಯನ್ನು ಪರಿಚಯಿಸಿದ್ದು ಅವರು ಯಾರು ಎನ್ನುವ ಕುರಿತಂತೆ ಪ್ರೇಕ್ಷಕರಲ್ಲಿ ಕುತೂಹಲ ಕೂಡ ಪ್ರಾರಂಭವಾಗಿದ್ದು ಇದಕ್ಕೆ ನಟಿ ಮೇಘನಾ ರಾಜ್ ಅವರೇ ಸ್ಪಷ್ಟೀಕರಣ ಕೂಡ ನೀಡಿದ್ದಾರೆ.
ಹೌದು ಗೆಳೆಯರೇ ಮೇಘನಾ ರಾಜ್(Meghana Raj) ಅವರು ಬಿಂದು ಅವರ ಜೊತೆಗೆ ಚಿಕ್ಕವಯಸ್ಸಿದ್ದಾಗಲೇ ಅಂದರೆ ಇಬ್ಬರು ಕೂಡ ಒಂದು ಹಾಗೂ ಎರಡು ವರ್ಷದ ಆಸು ಪಾಸಿನಲ್ಲಿ ಇರುವಾಗಲೇ ಸ್ನೇಹಿತರಾಗಿದ್ದವರು. ಇಂದಿಗೂ ಕೂಡ ಅದೇ ಸ್ನೇಹವನ್ನು ಮುಂದುವರಿಸಿಕೊಂಡು ಬಂದಿರುವ ಇವರಿಬ್ಬರೂ ಇತ್ತೀಚಿಗಷ್ಟೇ ರೆಸ್ಟೋರೆಂಟ್ ಒಂದರಲ್ಲಿ ಲಂಚ್ ಮಾಡಿರುವಂತಹ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು ಆ ವಿಡಿಯೋವನ್ನು ಕೂಡ ನೀವು ನೋಡುವ ಮೂಲಕ ಅವರಿಬ್ಬರ ಸ್ನೇಹದ ಆಳವನ್ನು ತಿಳಿದುಕೊಳ್ಳಬಹುದಾಗಿದೆ.