ಬಿಗ್ ಬಾಸ್ (Big Boss) ಸ್ಪರ್ಧೆಯಾಗಿದ್ದ ನಿವೇದಿತಾ ಗೌಡ (Niveditha Gowda) ಇದೀಗ ಸಖತ್ ಬ್ಯುಸಿ ಆಗಿದ್ದಾರೆ. ಯುಟ್ಯುಬ್ ಛಾನೆಲ್(You Tube) ಆರಂಭ ಮಾಡುವ ಮೂಲಕ ತಮ್ಮ ದಿನ ನಿತ್ಯದ ಆಕ್ಟಿವಿಟಿ (Activity) ವಿಚರಾಗಳನ್ನು ಯುಟ್ಯುಬ್ ನಲ್ಲಿ ಹಂಚಿಕೊಳ್ಳುತ್ತಾರೆ, ಇದೀಗ ಟಿವಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿರುವ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲೂ (Social Media) ಸಖತ್ ಆ್ಯಕ್ಟಿವ್ ಆಗಿ ವಿಡಿಯೋ ಆಪ್ ಲೋಡ್ (Uplode) ಮಾಡ್ತಾ ಇರ್ತಾರೆ.
ನಿವೇದಿತಾ ಗೆ ಡಾಕ್ಟರ್ ವಾರ್ನ್ ಮಾಡಿದ್ದೇನು:
ಹೆಚ್ಚಾಗಿ ಜಂಕ್ ಪುಡ್ ತಿನ್ನುವ ನಿವೇದಿತಾ ಗೆ ಊಟ ಮಾಡುವುದು, ತಿಂಡಿ ತಿನ್ನುವ ಅಭ್ಯಾಸ ಇಲ್ಲವಂತೆ, ನನಗೆ ಯಾರದ್ರು ಊಟ ತಂದು ಬಾಯಿಗೆ ಇಟ್ರೆ ತಿನ್ತೇನೆ ಇಲ್ಲಂದ್ರೆ ತಿನ್ನೋದೆ ಇಲ್ಲ, ತುಂಬಾ ಜಂಕ್ ಪುಡ್ (Junk Food) ಇಷ್ಟ ಪಡ್ತೇನೆ, ಎಷ್ಟೊ ಸಲ ಹಾಸ್ಪಿಟಲ್ ಆಡ್ಮಿಟ್(Hospital Admit) ಆಗಿದ್ದೇನೆ, ಡಾಕ್ಟರ್ ನಂಗೆ ಬಯ್ತಾರೆ, ಊಟ ಮಾಡ್ಬೇಕು, ಇಲ್ಲಂದ್ರೆ ನಿಮ್ಮ ಹೊಟ್ಟೆಯೊಳಗೆ ಟ್ಯುಬ್ ಹಾಕ್ತೇನೆ ಅಂದಿದ್ದಾರಂತೆ, ಆದ್ರು ನನಗೆ ಊಟ ಇಷ್ಟ ಇಲ್ಲ ಅಂದಿದ್ದಾರೆ
ಐಸ್‌ಕ್ರೀಂ ಅಂದ್ರೆ ಇಷ್ಟ :
ನಿವೇದಿತಾ ಗೌಡ ಅವರಿಗೆ ಐಸ್‌ಕ್ರೀಂ ಅಂದ್ರೆ ತುಂಬ ಇಷ್ಟವಂತೆ. ಸಂಜೆ ಹೊತ್ತಲ್ಲಿ ಹಸಿವಾದಗ ತಿನ್ನೋದೆ ಐಸಿಕ್ರಿಂ(Icecream) , ತುಂಬಾ ತಿನ್ತೇನೆ, ಅವರ ಮನೆಯ ಫ್ರಿಡ್ಜ್‌ನಲ್ಲಿ ಐಸ್‌ಕ್ರೀಂಗೆ ಸದಾ ಜಾಗ ಇದ್ದೇ ಇರುತ್ತದೆಯಂತೆ. ಡಯೇಟ್ (Diet) ಮಾಡಬೇಕು ಅಂತ ಅನ್ಕೋಳೋದು ಅಷ್ಟೆ ದಿನ ಮುಂದಕ್ಕೆ ಹಾಕ್ತ ಇರ್ತೆನೆ, ಆದರೆ ಡೈಯೆಟ್ ಮಾಡೋಕೆ ನನಗೆ ಒಬ್ಬರು ಪ್ರೆಂಡ್ ಬೇಕು ಅಂತ ಹೇಳಿದ್ದಾರೆ
ನಿವೇದಿತಾ ಟ್ರೋಲ್ ಪೇಜ್ ಹೆಚ್ಚಳ:
ಬಿಗ್ ಬಾಸ್ ಎಂಟ್ರಿಯಾದ ಬಳಿಕ ನಿವೇದಿತಾ ಗೌಡ ಸ್ಟಾರ್ ಆಗಿ ಬಿಟ್ಟಿದ್ದಾರೆ. ನಿವೇದಿತಾ ಸಖತ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ವಿಡಿಯೋಗಳು ಹೆಚ್ಚಾಗಿ ಕಾಣ ಸಿಗುತ್ತವೆ, ಯಾವುದೇ ಟ್ರೋಲ್ ಪೇಜ್ ನೋಡಿದರೂ ಅಲ್ಲಿ ನಿವೇದಿತಾ ಬಗ್ಗೆಯೇ ಮಾತು ಕಥೆ ಇರುತ್ತದೆ, ಇದರ ಜೊತೆಗೆ ನಿವೇದಿತಾ ಗೌಡ ಅವರ ವೈಯಕ್ತಿಕ ಫೇಸ್ ಬುಕ್, ಯುಟ್ಯುಬ್, ಖಾತೆಯಲ್ಲಿಯೂ ಹೆಚ್ಚು ಜನ ಫಾಲೋವರ್ಸ್ (Followers) ಜಾಸ್ತಿಯಾಗಿದ್ದಾರೆ , ಒಟ್ಟಾರೆ ನಿವೇದಿತಾ ಅಭಿಮಾನಿಗಳು ಹೆಚ್ಚಾಗಿದ್ದಾರೆ
ರಿಯಾಲಿಟಿ ಶೋ ಮೂಲಕ ಮತ್ತಷ್ಟು ಖ್ಯಾತಿ:
ರ‍್ಯಾಪರ್ ಚಂದನ್ ಶೆಟ್ಟಿ ಅವರ ಜೊತೆ ಸಪ್ತಪದಿ ತುಳಿದು ಸಾಂಸಾರಿಕ ಜೀವನದಲ್ಲಿ ಈಗ ಖುಷಿಯಾಗಿ ಇದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ನಿವೀ ಪ್ರೇಕ್ಷಕರನ್ನು ರಂಜಿಸಿದ್ದಾರೆ ಬಿಗ್ ಬಾಸ್ ಸೀಸನ್ 5 ನಲ್ಲಿ ಸ್ಪರ್ದಿಸುವ ಮೂಲಕ ನಿವಿ ಕನ್ನಡಿಗರ ಮನ ಗೆದ್ದಿದ್ದರು. ನಂತರ ಗಿಚ್ಚಿ ಗಿಲಿ ಗಿಲಿ ಸೀಸನ್ 1 ರಲ್ಲಿ ರನ್ನರ್ ಅಪ್ ಆಗಿದ್ದರು. ಇದೀಗ ಮತ್ತೆ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ಸ್ಪರ್ದಿಸುವ ಮೂಲಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ, ಇವರ ಅಭಿಮಾನಿಗಳು ಮತ್ತಷ್ಟು ಹೆಚ್ಚಾಗಿದ್ದಾರೆ