Hoysala Movie: ಹೊಯ್ಸಳ ಚಿತ್ರಕ್ಕೆ ಅಮೃತಾಗೆ ಡಾಲಿ ಧನಂಜಯ್ ಕೊಡುತ್ತಿರುವ ಸಂಭಾವನೆ ವೈರಲ್

Advertisement
ಅಮೃತಾ ಅಯ್ಯಂಗಾರ್ (Amrutha Iyengar) ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆ ಯುಳ್ಳ ನಟಿ, ಮೈಸೂರಿನವರಾದ ಇವರು ಮಹಾಜನ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ, ಸಿನಿಮಾ ರಂಗಕ್ಕೆ ಕಾಲಿಟ್ಟು ಸಖತ್ ಪೇಮ್ ಕ್ರಿಯೇಟ್ ಮಾಡಿಕೊಂಡಿದ್ದಾರೆ, ಲವ್ ಮಾಕ್ಟೇಲ್ (Love Mocktail) ಸಿನಿಮಾ ಮೂಲಕ ಸಖತ್ ಫೇಮಸ್ಸ್ ಆದರು, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನಟಿ ಅಮೃತಾ ಅಯ್ಯಂಗಾರ್ ಖ್ಯಾತಿ ಹೆಚ್ಚಾಗಿ ಬೇರೆ ಸಿನಿಮಾದಲ್ಲಿ ಹೆಚ್ಚು ಆಯ್ಕೆಗಳು ಕೂಡ ದೊರೆತವು.
ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಜೋಡಿ
ಗಡಿ ಭಾಗದ ಸಮಸ್ಯೆಯನ್ನೇ ಇಟ್ಟುಕೊಂಡು ಕಮರ್ಷಿಯಲ್ ಕಥೆಯೊಂದಿಗೆ ಈ ಸಿನಿಮಾ ಮಾ. 30 ರಂದು ಬಿಡುಗಡೆ ಆಗುತ್ತಿದೆ. ಟ್ರೇಲರ್ ಮೂಲಕವೇ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ಚಿತ್ರ ಸದ್ಯ ಪ್ರಚಾರವನ್ನೂ ಅಷ್ಟೇ ಜೋರಾಗಿಯೇ ಮಾಡುತ್ತಿದೆ, ಪಾಪ್‌ಕಾರ್ನ್ ಮಂಕಿ ಟೈಗರ್ , ಬಡವ ರಾಸ್ಕಲ್ ನಂತರ ಮತ್ತೊಮ್ಮೆ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಮತ್ತೆ ಹೊಯ್ಸಳ(Hoysala) ಚಿತ್ರ ಮಾಡಿ ತೆರೆಗೆ ಬರಲು ರೆಡಿಯಾಗಿದ್ದಾರೆ
ಡಾಲಿ ,ಅಮೃತಾ ಕೇಮಿಸ್ಟ್ರಿ ಗೆ ಏನಂದ್ರು
ನಟಿ ಅಮೃತಾ ಅಯ್ಯಂಗಾರ್ ಮತ್ತು ಧನಂಜಯ ಅವರದ್ದು ಸಕ್ಸಸ್‌ಫುಲ್ ಜೋಡಿ ಎಂದರೆ ತಪ್ಪಾಗಲಾರದು, ಇವರು ಜೊತೆಗೂಡಿ ಸಿನಿಮಾ ಮಾಡ್ತಾನೇ ಇದ್ದಾರೆ. ಇದರಿಂದ ಇವರ ಮಧ್ಯೆ ಲವ್ ಆರಂಭವಾಗಿದೆ, ಮದುವೆ ಆಗ್ತಾರೆ ಅನ್ನು ವ ಸುದ್ದಿ ವೈರಲ್ ಆಗುತ್ತಲೇ ಇದೆ, ಆದರೆ ಮೊನ್ನೆಯಷ್ಟೆ ನಮ್ಮ ಮಧ್ಯೆ ಏನು ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಅಮೃತಾ ಆಯ್ಯಂಗಾರ್ ಪಡೆದ ಸಂಭಾವನೆ
ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಗುರುದೇವ್ ಹೊಯ್ಸಳ ಚಿತ್ರವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದಾರೆ, ಈ ಚಿತ್ರದಲ್ಲಿ ಈ ಜೋಡಿ ಮತ್ತೆ ಒಂದಾಗಿದೆ. ಇಬ್ಬರು ಸಖತ್ ಆಗೇ ಕಾಣಿಸಿಕೊಂಡಿದ್ದಾರೆ, ಗೃಹಿಣಿ ಪಾತ್ರದಲ್ಲಿ ಅಮೃತಾ ಕಾಣಿಸಿಕೊಂಡರೆ, ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿ ತಮ್ಮ ಎನರ್ಜಿ ಲೆವೆಲ್ ತೋರಿಸಿದ್ದಾರೆ, ಸದ್ಯ ಹೊಯ್ಸಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ಚೆಂದುಳ್ಳಿ ಚೆಲುವೆ ಅಮೃತಾಗೆ ಈ ಚಿತ್ರದಲ್ಲಿ 9 ಲಕ್ಷ ಸಂಭಾವನೆ ದೊರೆಯಲಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ತಿಳಿದು ಬಂದಿದೆ.
ವಿದೇಶದಲ್ಲೂ ಗುರುದೇವ್ ಹೊಯ್ಸಳ ಬಿಡುಗಡೆ
ಖಡಕ್ ಆಗೇ ಎಂಟ್ರಿ ನೀಡಿರುವ ಡಾಲಿ, ಕ್ಯುಟ್ ಆಗೀ ಕಾಣಿಸಿಕೊಳ್ಳುವ ಅಮೃತಾ, ಹಾಗೇ ಗುರುದೇವ್ ಹೊಯ್ಸಳ ಚಿತ್ರದಲ್ಲಿ ಪ್ರತಾಪ್ ನಾರಾಯಣ್ ಮತ್ತು ಅವಿನಾಶ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಈಗಾಗಲೇ ಟ್ರೈಲರ್ ಮೂಲಕ ಸದ್ದು ಮಾಡಲಿರುವ ಚಿತ್ರದ ರಿಲೀಸ್ ಗೆ ಮೋಸ್ಟ್ ವೈಟಿಂಗ್ ನಲ್ಲಿ ಇದ್ದಾರೆ,
ಮಾ.30ರಂದು ತೆರೆಗೆ ಬರಲಿರುವ ಗುರುದೇವ್ ಹೊಯ್ಸಳ ಸಿನಿಮಾವು ಕರ್ನಾಟಕ ಮಾತ್ರವಲ್ಲದೆ, ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ ತೆರೆಕಾಣಲಿದೆ.