ShivaRajkumar: ಅದೊಂದು ಸಿನಿಮಾವನ್ನು ಶಿವಣ್ಣ ಮಾಡೋದೇ ಬೇಡ ಎಂಬುದಾಗಿ ಅಣ್ಣಾವ್ರು ತಡೆ ಹಾಕಿದ್ರಂತೆ!

Advertisement
ರಾಜಕುಮಾರ್(Rajkumar) ಅವರು ಕನ್ನಡ ಚಿತ್ರರಂಗದ ದೇವರು ಎನ್ನುವುದನ್ನು ಅವರ ಸಿನಿಮಾ ಹಾಗೂ ಅವರ ಜೀವನವನ್ನು ನೋಡಿದರೆ ನಾವು ಯಾವುದೇ ಎರಡನೇ ಮಾತಿಲ್ಲದೆ ಹೇಳಬಹುದಾಗಿ. ಯಾಕೆಂದರೆ ಸಿನಿಮಾ ಕ್ಷೇತ್ರದಲ್ಲಿ ಯಾವುದೇ ಪಾತ್ರಗಳನ್ನು ಕೂಡ ನಿರ್ವಹಿಸಬಲ್ಲಂತಹ ಪ್ರಾವೀಣ್ಯತೆ ಅವರಲ್ಲಿತ್ತು ಹಾಗೂ ನಿಜ ಜೀವನದಲ್ಲಿ ಕೂಡ ಸಿನಿಮಾದಲ್ಲಿ ಸಾರಿದಂತಹ ಸಂದೇಶವನ್ನು ಪಾಲಿಸುವಂತಹ ಶಿಸ್ತು ಕೂಡ ಅವರಲ್ಲಿತ್ತು. ಇದಕ್ಕಾಗಿಯೇ ಪ್ರತಿಯೊಬ್ಬರೂ ಕೂಡ ತಮ್ಮ ಸಿನಿಮಾ ಜೀವನದ ಗುರುವನ್ನಾಗಿ ಅಣ್ಣಾವ್ರನ್ನು ಸ್ವೀಕರಿಸಿದ್ದರು.
ಇನ್ನು ನಿಮಗೆಲ್ಲರಿಗೂ ನೆನಪಿರಬಹುದು 1974ರಲ್ಲಿ ತೆರೆ ಕಂಡಂತಹ ಅಣ್ಣಾವ್ರು ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಸಂಪತ್ತಿಗೆ ಸವಾಲ್(Sampattige Sawal) ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ನಾಟಕವನ್ನು ಸಿನಿಮಾವಾಗಿ ತೆರೆಗೆ ತಂದಂತಹ ಈ ಪ್ರಯತ್ನ ನಿಜಕ್ಕೂ ಕೂಡ ಪ್ರೇಕ್ಷಕರ ಮನವನ್ನು ಗೆದ್ದಿತ್ತು. ಅದರಲ್ಲೂ ವಿಶೇಷವಾಗಿ ಚಿ ಉದಯ್ ಶಂಕರ್(Chi Uday Shankar) ಅವರ ಸಂಭಾಷಣೆ ಬರವಣಿಗೆ ಎನ್ನುವುದು ಅಂದಿನ ಕಾಲದಿಂದ ಇಂದಿನವರೆಗೂ ಕೂಡ ಆ ಸಿನಿಮಾ ಪ್ರತಿಯೊಬ್ಬ ಸಿನಿಮಾ ಪ್ರೇಮಿಗಳಿಗೂ ಇಷ್ಟವಾಗುವಂತೆ ಬರೆದಿದ್ದರು.
ಇನ್ನು ಹಲವಾರು ವರ್ಷಗಳ ನಂತರ ಶಿವಣ್ಣ(Shivanna) ಚಿತ್ರರಂಗಕ್ಕೆ ಕಾಲಿಟ್ಟ ನಂತರ ಚಿ ಉದಯ್ ಶಂಕರ್ ಅವರ ಬಳಿ ಮತ್ತೊಂದು ಉಪಾಯ ಮೂಡಿಬರುತ್ತದೆ ಅದೇನೆಂದರೆ ಸಂಪತ್ತಿಗೆ ಸವಾಲ್ ಸಿನಿಮಾ ವನ್ನು ಈ ಕಾಲಕ್ಕೆ ತಕ್ಕಂತೆ ಮತ್ತೊಮ್ಮೆ ಸಿನಿಮಾ ಮಾಡೋಣ ಎನ್ನುವುದಾಗಿ. ಆಗ ಅಣ್ಣಾವ್ರು ನಕ್ಕು ಸುಮ್ಮನಾಗುತ್ತಾರೆ. ಉದಯ್ ಶಂಕರ್ ಅವರು ಯಾಕೆ ಎಂದು ಕೇಳಿದಾಗ ಶಿವಣ್ಣನ ಪಾತ್ರ ನನ್ನ ಪಾತ್ರಕ್ಕೆ ಸಮನಾಗಿರಬಹುದು ಆದರೆ ಆ ಒಬ್ಬ ಕಲಾವಿದನ ಪಾತ್ರ ಯಾರು ಮಾಡುತ್ತಾರೆ ಎಂಬುದಾಗಿ ಹೇಳುತ್ತಾರೆ.
ಆಗ ಯಾರು ಎಂದು ಕೇಳಿದಾಗ ನಟಭಯಂಕರ ಆಗಿರುವ ವಜ್ರಮುನಿ(Vajramuni) ಅವರ ಪಾತ್ರ ಸಾಹುಕಾರ ಸಿದ್ದಪ್ಪನ ಪಾತ್ರವನ್ನು ಈ ಕಾಲದಲ್ಲಿ ಯಾವ ಕಲಾವಿದನು ಕೂಡ ಮಾಡಲು ಸಾಧ್ಯವಿಲ್ಲ. ಅಂತಹ ನಟನೆ ಯಾರಿಂದಲೂ ಕೂಡ ಮತ್ತೆ ಮರುಕಳಿಸಲು ಸಾಧ್ಯವಿಲ್ಲ ಹೀಗಾಗಿ ಆ ಸಿನಿಮಾವನ್ನು ಮಾಡುವುದು ಬೇಡ ಎಂಬುದಾಗಿ ಅಣ್ಣಾವ್ರು ಹೇಳಿದ್ದರಂತೆ. ಇಲ್ಲದಿದ್ದರೆ ಸಂಪತ್ತಿಗೆ ಸವಾಲ್ ಸಿನಿಮಾ ಶಿವಣ್ಣನ ನಟನೆಯಲ್ಲಿ ಕೂಡ ಮತ್ತೊಮ್ಮೆ ಮರುಕಳಿಸಬೇಕಾಗಿತ್ತಂತೆ.