Karnataka Times
Trending Stories, Viral News, Gossips & Everything in Kannada

Actor Balraj: ಅಣ್ಣಾವ್ರ ಕೈಯ್ಯಲ್ಲಿ ಸಖತ್ ಏಟು ತಿಂತಿದ್ರಂತೆ ಕನ್ನಡದ ಖ್ಯಾತ ನಟ ಬಾಲರಾಜ್! ಕಾರಣ ಇಲ್ಲಿದೆ

Advertisement

Balraj ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರರಂಗ ಎನ್ನುವಷ್ಟರ ಮಟ್ಟಿಗೆ ರಾಜಕುಮಾರ್(Rajkumar) ಅವರು ಕನ್ನಡ ಚಿತ್ರರಂಗವನ್ನು ಜಾಗತಿಕವಾಗಿ ಗುರುತಿಸುವಲ್ಲಿ ಸಾಕಷ್ಟು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಅವರ ಮಾರ್ಗದರ್ಶನದಲ್ಲಿ ಕನ್ನಡ ಚಿತ್ರರಂಗ ಬೆಳೆದ ರೀತಿ ಇಂದಿಗೂ ಕೂಡ ಪ್ರತಿಯೊಬ್ಬ ಕನ್ನಡ ಕಲಾವಿದನನ್ನು ಅವರ ಅಭಿಮಾನಿ ಎಂದು ಹೇಳುವುದಕ್ಕೆ ಎದೆಯಲ್ಲಿ ಗರ್ವ ಮೂಡುವಂತೆ ಮಾಡುತ್ತದೆ.

ಕೇವಲ ಸಿನಿಮಾ ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಹಾಲಿನಷ್ಟೆ ಬಿಳುಪು ನಮ್ಮ ಅಣ್ಣಾವ್ರ ವ್ಯಕ್ತಿತ್ವ. ಇನ್ನು ಅವರ ಕುಟುಂಬಸ್ಥರಾಗಿರುವ ಹಾಗೂ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ದೊಡ್ಡ ಮಟ್ಟದಲ್ಲಿ ಪರಖ್ಯಾತಿಯನ್ನು ಹೊಂದಿರುವಂತಹ ಬಾಲರಾಜ್(Balraj) ಅವರು ಅಣ್ಣಾವ್ರ ಜೊತೆಗೆ ಕಳೆದಿರುವಂತಹ ದಿನಗಳನ್ನು ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಮೆಲುಕು ಹಾಕಿದ್ದಾರೆ. ಬಾಲರಾಜ್ ಅವರನ್ನು ನೀವು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ನಟನೆ ಮಾಡಿರುವುದನ್ನು ಗಮನಿಸಬಹುದು.

ಅಣ್ಣಾವ್ರ(Annavru) ಸಹೋದರಿಯ ಪುತ್ರನಾಗಿರುವ ಬಾಲ್ರಾಜ್ ಕನ್ನಡ ಚಿತ್ರರಂಗದಲ್ಲಿ ಕೂಡ ಗಮನಾರ್ಹ ಪಾತ್ರಗಳನ್ನು ನಿರ್ವಹಿಸುವ ಮೂಲಕ ಎಲ್ಲರ ಮನಸ್ಸನ್ನು ರಂಜಿಸಿದ್ದಾರೆ. ಇನ್ನು ಚಿಕ್ಕ ವಯಸ್ಸಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಲ್ಲರ ನೆಚ್ಚಿನ ಚಿಕ್ಕ ಅಪ್ಪು ಎನ್ನುವ ಮಗುವಾಗಿದ್ದ ಸಂದರ್ಭದಲ್ಲಿ ಅಪ್ಪು ಅವರನ್ನು ಎತ್ತಿ ಮುದ್ದಾಡಿ ಬೆಳೆಸಿದ್ದರು. ಒಂದು ಸಂದರ್ಭದಲ್ಲಿ ಅಪ್ಪು(Appu) ಅವರ ಕಾರಣದಿಂದಾಗಿಯೇ ಬಾಲ್ರಾಜ್(Balraj) ಅವರು ಅಣ್ಣಾವರ ಕೈಯಿಂದ ಏಟು ತಿಂದಿದ್ದರು ಎನ್ನುವ ಸ್ವಾರಸ್ಯಕರ ಸುದ್ದಿ ಕೂಡ ಹೊರ ಬಂದಿದೆ.

ಹೌದು ಮಿತ್ರರೇ, ಅಪ್ಪು(Appu) ಅವರು ಚಿಕ್ಕ ಮಗುವಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಮುದ್ದು ಮುದ್ದಾಗಿದ್ದರು. ಆ ಸಂದರ್ಭದಲ್ಲಿ ಅಪ್ಪು ಅವರ ಗಲ್ಲಕ್ಕೆ ಮುತ್ತು ನೀಡಲು ಕರೆದು ಗಲ್ಲಕ್ಕೆ ಬಾಲರಾಜ್ ಅವರು ಕಚ್ಚಿದ್ದರು. ಇದರಿಂದಾಗಿ ಅಪ್ಪು ಅವರು ಅಳಲು ಪ್ರಾರಂಭಿಸಿ ಬಾಲರಾಜ್ ನನಗೆ ಕಚ್ಚಿದ್ದಾನೆ ಎಂಬುದಾಗಿ ಅಳುತ್ತಲೇ ಹೇಳುತ್ತಾರೆ. ಆಗ ಯಾವನೋ ಅವನು ಬಡವ ರಾಸ್ಕಲ್ ಎನ್ನುವುದಾಗಿ ಹೇಳುತ್ತಾ ಅಣ್ಣಾವ್ರು ಬಂದು ಬಾಲ್ರಾಜ್ ಅವರಿಗೆ ಏಟನ್ನು ನೀಡಿದ್ದನು ಈಗಲೂ ಕೂಡ ಬಾಲರಾಜ್(Balraj) ನೆನಪಿಸಿಕೊಳ್ಳುತ್ತಾರೆ. ಆಗಾಗ ಅಣ್ಣಾವ್ರು ತಮ್ಮನ್ನು ಮುದ್ದು ಮಾಡುತ್ತಿದ್ದದ್ದನ್ನು ಕೂಡ ಈ ಸಂದರ್ಭದಲ್ಲಿ ಬಾಲರಾಜ್ ಅವರು ನೆನಪಿಸಿಕೊಳ್ಳುತ್ತಾರೆ.

Leave A Reply

Your email address will not be published.