ಹೀರೋ ವಿಲನ್ ಆಗಿ, ವಿಲನ್ ಹೀರೋ ಆಗೋದು ಇತ್ತೀಚಿನ ಸಿನೆಮಾಗಳಲ್ಲಿ ಕಾಮನ್ ಆಗಿ ಬಿಟ್ಟಿದೆ. ಅದೇ ರೀತಿ ನಟರಾಕ್ಷಸ ಡಾಲಿ ಧನಂಜಯ್ (Dhananjaya) ಅವರು ಈ ಖಳನಾಯಕನಾಗಲೂ ಹಾಗೂ ಹೀರೋ ಆಗಲು ಎರಡಕ್ಕು ಸೈ ಎನಿಸಿದ್ದಾರೆ. ಈ ಮೂಲಕ ಬಹುನಿರೀಕ್ಷಿತ ಹೊಯ್ಸಳ (Hoysala Movie) ಸಿನೆಮಾ ರಿಲೀಸ್ ಆಗಿದ್ದು ಈ ಬಗ್ಗೆ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ವಿನಿಯೋಗಿಸಿದ್ದಾರೆ.
ನಟ ಡಾಲಿ ಆ್ಯಕ್ಟ್ ಗೆ ಸಿನಿಪ್ರೀಯರು ಫಿಧಾ:
ನಟ ಡಾಲಿ ಅಭಿನಯದಲ್ಲಿ ನಟ ರಾಕ್ಷಸ ಎಂಬ ಬಿರುದು ಪಡೆದಿದ್ದಾರೆ, ಪುಷ್ಪ ಸಿನೆಮಾದ ವಿಲನ್ ಕ್ಯಾರೆಕ್ಟರ್ ಅಂತೂ ಸೂಪರ್ ಆಗಿತ್ತು ಬಳಿಕ ದುನಿಯಾ ವಿಜಯ್ ಅಭಿನಯದ ಸಿನೆಮಾಕ್ಕೆ ಪೊಲೀಸ್ ಆಗಿ ಅಭಿನಯಿಸಿದ್ದರು. ಬಳಿಕ ಇದೀಗ ಈ ಸಿನೆಮಾದಲ್ಲಿ ಖಡಕ್ ಪೊಲೀಸ್ (Police Officer) ಗೆಟಪ್ ನಲ್ಲಿ ಮಿಂಚಿದ್ದನ್ನು ಕಂಡ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ.
ಏನಂದ್ರು ಪ್ರೇಕ್ಷಕ ಅಭಿಮಾನಿಗಳು:
ಒಂದು ಸಿನೆಮಾ ಯಶಸ್ಸು ಅಥವಾ ವಿಫಲವಾಗಲು ಪ್ರೇಕ್ಷಕರು ಕಾರಣರಾಗುತ್ತಾರೆ. ವಿಭಿನ್ನ ಕಥಾ ಹಂದರವಿದ್ದು ಪ್ರೇಕ್ಷಕರ ಗಮನ ಅತ್ತಿತ್ತ ಸುಳಿಯದಂತೆ ಸೆರೆ ಹಿಡಿದರೆ ಆಗ ಒಂದು ಸಿನೆಮಾ ಬಹುತೇಕ ಯಶಸ್ಸು ಆಗಿದೆ ಎಂದೆ ಲೆಕ್ಕ. ಸಿನೆಮಾ ಬರೀ ಹೀರೋ ಒಬ್ಬರಿಂದ ಹಿಟ್ ಆಗೊಲ್ಲ ಬದಲಾಗಿ ಕಥೆ , ನಿರ್ದೇಶನ, ಸಂಗೀತ , ಅಭಿನಯ ಎಲ್ಲದರ ಸಂಗಮ ಇಲ್ಲಿ ಸೇರುತ್ತದೆ. ಅದೇ ರೀತಿ ಡಾಲಿ ಧನಂಜಯ್ ಅಭಿನಯದ ಈ ಹೊಸ ಸಿನೆಮಾ ಎಲ್ಲೆಡೆ ರಿಲೀಸ್ ಆಗಿದ್ದು ಸದ್ಯ ಎಲ್ಲೆಡೆ ಅದರದ್ದೆ ಮಾತು ಕತೆ ಆರಂಭ ಆಗಿದೆ.
ಅದ್ಭುತ ಫೈಟಿಂಗ್:
ಡಾಲಿ ಸಿನೆಮಾ ನೋಡಿದ ಜನರು ಸೂಪರ್ ಆಗಿದೆ ಅಂದಿದ್ದಾರೆ, ಡಾಲಿ ಧನಂಜಯ್ ಅವರ ಪೊಲೀಸ್ ಅಭಿನಯವಂತೂ ಅದ್ಭುತ, ಫೈಟಿಂಗ್ ಚೆನ್ನಾಗಿ ಮೂಡಿಬಂದಿದೆ. ಕಥೆಯನ್ನು ಬೆಸೆದ ರೀತಿ ಇಷ್ಟವಾಗಿದೆ. ವಿಲನ್ ಅಂತೂ ಅಲ್ಟಿಮೇಟ್ ಆಗಿದೆ ಎಂದಿದ್ದಾರೆ, ಪೊಲೀಸ್ ಹೇಗೆ ಇರಬೇಕು ಎಂದು ತಿಳಿಸಿದ್ದಾರೆ ಸಿನೆಮಾ ಆರಂಭದಿಂದಲೂ ಕೊನೆವರೆಗೂ ಸೂಪರ್ ಎಂದು ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಿನೆಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿಯಾಗಿ ಮಿಂಚಿದರೆ ಅಚ್ಯುತ್ ಕುಮಾರ್, ಅನಿರುದ್ಧ್ ಭಟ್, ನವೀನ್ ಶಂಕರ್, ಮಯೂರಿ ಇನ್ನು ಅನೇಕ ಕಲಾವಿದರು ಬೆಳ್ಳಿಪರದೆ ಮೇಲೆ ಮಿಂಚಿದ್ದು ನೂರು ದಿನ ಪಕ್ಕ ಕಲೆಕ್ಷನ್ ಪಡೆದು ಗಲ್ಲಪೆಟ್ಟಿಗೆಯ ಧೂಳೆಬಿಸುತ್ತಾ ಎಂದು ಕಾದು ನೋಡಬೇಕು.