ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ನಟ (Simple Star Rakshit Shetty) ಕೆಲವೇ ಸಿನಿಮಾ ಮೂಲಕ ಇವರು ಪ್ರಸಿದ್ಧಿ ಯನ್ನು ಪಡೆದವರು, ಕಿರಿಕ್ ಪಾರ್ಟಿ (kirik Party) ಸಿನಿಮಾ ಮೂಲಕ ಪೇಮ್ ಕ್ರಿಯೇಟ್ ಮಾಡಿಕೊಂಡ ರಕ್ಷಿತ್ ಇದೀಗ ಶ್ರೀ ನಿಧಿ ಶೆಟ್ಟಿ ಪೋಟೋಗೆ ಕಾಮೆಂಟ್ ಮಾಡುವ ಮೂಲಕ ಮತ್ತೆ ಸುದ್ದಿಯಾಲ್ಲಿದ್ದಾರೆ, ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ನಡೆದಿತ್ತು, ನಂತರ ಅವರ ನಡುವೆ ವೈಮನಸ್ಸು ಉಂಟಾಯಿತು. ಆದರೆ ಎಲ್ಲಾ ಕಹಿ ಘಟನೆಗಳನ್ನು ಮರೆತಿರುವ ರಕ್ಷಿತ್ ಹೊಸ ಚಿತ್ರಗಳಿಗೆ ಮುನ್ನುಡಿ ಬರೆದಿದ್ದಾರೆ ಎನ್ನಬಹುದು.
ಏನಂತಾ ಕಾಮೆಂಟ್ ಮಾಡಿದ್ರು:
ಶ್ರೀನಿಧಿ ಶೆಟ್ಟಿ (Srinidhi Shetty) ಕೆಜಿಎಫ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ, ಇವರಿಗೆ ಹೆಚ್ಚಿನ ಸಂಖ್ಯೆಯ ಫ್ಯಾನ್ ಫಾಲೋವಿಂಗ್ ಇದ್ದು ಮತ್ತಷ್ಟು ಪೇಮಸ್ಸ್ ಆಗಿದ್ದಾರೆ, ಹೌದು ರಕ್ಷಿತ್ ಹಾಗೂ ಶ್ರೀನಿಧಿ ಇಬ್ಬರೂ ಸಹ ಶೆಟ್ರೆ ಆಗಿದ್ದಾರೆ, ವಿಶೇಷವೆಂದರೆ ಇಬ್ಬರ ನಡುವೆ ಸೋಷಿಯಲ್ ಮೀಡಿಯಾ ಸಂಭಾಷಣೆಯ ಮಾತು ವೈರಲ್ ಆಗಿದೆ.
ಓಹ್ ಗೊತ್ತಾಯಿತು ಶೆಟ್ರೆ:
ಶ್ರೀನಿಧಿ ಶೆಟ್ಟಿ ಟ್ವಿಟ್ಟರ್ ನಲ್ಲಿ ತಮ್ಮ ಫೋಟೋ ಹಾಕಿ ಹಾಗೆ ಸುಮ್ಮನೆ ಎಂದು ಬರೆದುಕೊಂಡಿದ್ದಾರೆ, ಇನ್ನು ಶ್ರೀನಿಧಿ ಶೆಟ್ಟಿ ಅವರ ಫೋಟೋಗೆ ರಕ್ಷಿತ್ ಕಮೆಂಟ್ ಮಾಡಿದ್ದಾರೆ, ಈ ಪೋಟೋ ಗೆ ರಕ್ಷಿತ್ ಅವರು ಓಹ್ ಗೊತ್ತಾಯಿತು ಶೆಟ್ರೆ ಎಂದು ತುಳುವಿನಲ್ಲಿಯೇ ಕಮೆಂಟ್ ಮಾಡಿದ್ದಾರೆ. ಅದಕ್ಕೆ ರಕ್ಷಿತ್ ಶೆಟ್ಟಿ ಅವರ ಕಮೆಂಟ್ ನೋಡಿ ಅದಾಗಲೇ ಶ್ರೀನಿಧಿ ಶೆಟ್ಟಿ ಅವರೂ ಸಹ ಮತ್ತೊಮ್ಮೆ ರಿಪ್ಲೈ ಮಾಡಿದ್ದು ಓಹ್ ಗೊತ್ತಾಯಿತಾ ಶೆಟ್ರೆ. ಹೇಳ್ಬೇಡಿ ಎಂದು ಮತ್ತೊಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಇವರಿಬ್ಬರು ಶೆಟ್ರೆ ಯಾಗಿರುವುದರಿಂದ ಇವರ ನಡುವೆ ಪ್ರೀತಿ ಇದೆಯಾ ಎನ್ನುವ ಗಾಸಿಪ್ ವಿಚಾರ ಹರಿದಾಡುತ್ತಿದೆ
ರಕ್ಷಿತ್ ಸಿನಿಮಾದಲ್ಲಿ ಬ್ಯುಸಿ:
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಗಿದ ಬಳಿಕ ರಕ್ಷಿತ್ ರಿಚರ್ಡ್ ಆಂಟನಿ, ಪುಣ್ಯಕೋಟಿ 1, ಪುಣ್ಯಕೋಟಿ 2 ಮತ್ತು ಮಿಡ್‌ನೈಟ್ ಟು ಮೋಕ್ಷ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಒಳ್ಳೊಳ್ಳೆ ಕಂಟೆಂಟ್ ಚಿತ್ರ ಮಾಡುವ ರಕ್ಷಿತ್ ಶೆಟ್ಟಿ ಚಾರ್ಲಿ 777 ಚಿತ್ರದ ಮೂಲಕ ಸೂಪರ್ ಹಿಟ್ ಪಡೆದಿದ್ದರು, ಈ ನಡುವೆ, ಕನ್ನಡದ ಜತೆಗೆ ಪರಭಾಷೆಯ ಚಿತ್ರದಲ್ಲಿಯು ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ದಳಪತಿ ವಿಜಯ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ತಿಳಿಸಲಾಗಿತ್ತು, ಆದರೆ ಹರಿದಾಡಿದ ವದಂತಿಗಳಿಗೆ ರಕ್ಷಿತ್ ಉತ್ತರ ನೀಡಿದ್ದರು.