Karnataka Times
Trending Stories, Viral News, Gossips & Everything in Kannada

Julie Lakshmi: ನಟಿ ಜೂಲಿ ಲಕ್ಷ್ಮಿ ಅವರಿಗೆ ಬೆನ್ನಿಗೆ ಬಾಸುಂಡೆ ಬರುವಂತೆ ಹೊಡೆದಿದ್ದರು ಕನ್ನಡ ಚಿತ್ರರಂಗದ ಆ ಖ್ಯಾತ ನಟ.

Advertisement

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಟಿಯರಲ್ಲಿ ಸೌಂದರ್ಯದಷ್ಟೇ ಅವರ ನಟನೆ ಕೂಡ ಜನರ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ಇತ್ತು. ಅಂತಹ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವುದು ನಮ್ಮೆಲ್ಲರ ನೆಚ್ಚಿನ ನಟಿ ಲಕ್ಷ್ಮಿಯವರು. ಅಂದಿನ ಸಮಯದಲ್ಲಿ ಅವರನ್ನು ಜೂಲಿ ಲಕ್ಷ್ಮಿ(Julie Lakshmi) ಎನ್ನುವುದಾಗಿಯೇ ಕರೆಯುತ್ತಿದ್ದರು. ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಬಹುಭಾಷಾ ನಟಿಯಾಗಿ ಲಕ್ಷ್ಮಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇಂದಿಗೂ ಕೂಡ ನಟಿ ಲಕ್ಷ್ಮಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ನಟಿ ಲಕ್ಷ್ಮಿ(Actress Lakshmi) ಅವರು ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟನ ಕೈಯಿಂದ ಬೆನ್ನಿಗೆ ಬಾಸುಂಡೆ ಬರುವಂತೆ ಹೊ’ ಡೆತವನ್ನು ತಿಂದಿದ್ದರು ಎನ್ನುವ ಸುದ್ದಿ ಈಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಇದರ ಹಿಂದಿನ ನಿಜವಾದ ಅಸಲಿಯತ್ತೇನು ಹಾಗೂ ಆ ನಟ ಯಾರು ಎಂಬ ಕುರಿತಂತೆ ನಿಮ್ಮಲ್ಲಿ ಇರುವಂತಹ ಗೊಂದಲವನ್ನು ಪರಿಹರಿಸುತ್ತೇವೆ ಬನ್ನಿ ಸಂಪೂರ್ಣ ವಿವರವಾಗಿ ತಿಳಿಯೋಣ. ಹೌದು ಮಿತ್ರರೇ, ಆ ನಟ ಬೇರೆ ಯಾರು ಅಲ್ಲ ಈಗಾಗಲೇ ನಮ್ಮನ್ನೆಲ್ಲ ಆಗಲಿರುವ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಅಶ್ವತ್(Ashwath).

ಇದು ನಿಜವಾದ ಕಥೆ ಅಲ್ಲ ಬದಲಾಗಿ ಸಿನಿಮಾದ ಚಿತ್ರೀಕರಣದ ದೃಶ್ಯದಲ್ಲಿ ನಡೆದಿರುವಂತಹ ಒಂದು ಘಟನೆ. ಅದು ಗಾಳಿ ಮಾತು ಸಿನಿಮಾ ಹಾಗೂ ಅದರ ನಿರ್ದೇಶಕ ಆಗಿದ್ದಿದ್ದು ಇತ್ತೀಚಿಗಷ್ಟೇ ನಮ್ಮನ್ನೆಲ್ಲಾ ಅಗಲಿರುವ ನಿರ್ದೇಶಕ ದೊರೆ ಭಗವಾನ್(Dore Bhagawan). ಈ ಸಿನಿಮಾದ ದೃಶ್ಯದಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸುವಂತಹ ಅಶ್ವತ್ ರವರು ಮಗಳ ಪಾತ್ರವನ್ನು ನಿರ್ವಹಿಸುತ್ತಿದ್ದ ಲಕ್ಷ್ಮಿ(Lakshmi) ಅವರಿಗೆ ಕೊಡೆಯಿಂದ ಹೊ’ ಡೆಯುವ ಸನ್ನಿವೇಶ ಇತ್ತು.

ಪಾತ್ರದಲ್ಲಿ ಅಶ್ವತ್(Ashwath) ಅವರು ಯಾವ ರೀತಿಯಲ್ಲಿ ಪರಕಾಯ ಪ್ರವೇಶ ಮಾಡಿದ್ದರು ಎಂದರೆ ನಿಜವಾಗಿಯೂ ಕೂಡ ಈ ದೃಶ್ಯದಲ್ಲಿ ಲಕ್ಷ್ಮಿ ಅವರಿಗೆ ಹೊಡೆದೆ ಬಿಟ್ಟಿದ್ದರು. ಅವರ ಹೊ’ ಡೆತಕ್ಕೆ ಲಕ್ಷ್ಮಿ ಅವರ ಮೈಯಲ್ಲಿ ಬಾಸುಂಡೆಗಳು ಎದ್ದಿದ್ದವು. ಟೇಕ್ ಆದ ನಂತರ ಲಕ್ಷ್ಮಿ(Lakshmi) ಅವರ ಬಳಿ ಬಂದು ಅಶ್ವತ್ ಅವರು ಈ ವಿಚಾರಕ್ಕಾಗಿ ಕ್ಷಮೆಯನ್ನು ಕೂಡ ಕೇಳಿದರಂತೆ. ಇಂದಿಗೂ ಕೂಡ ಅಶ್ವತ್ಥ್ ಅವರ ವ್ಯಕ್ತಿತ್ವವನ್ನು ಲಕ್ಷ್ಮಿ ಅವರು ಹೊಗಳಿ ಮಾತನಾಡುತ್ತಾರೆ ಎಂದರೆ ಅವರ ವ್ಯಕ್ತಿತ್ವ ಎಂತಹ ಮೇರು ವ್ಯಕ್ತಿತ್ವ ಆಗಿರಬೇಕು ಎಂಬುದನ್ನು ನೀವೇ ಅಂದಾಜಿಸಿ.

Leave A Reply

Your email address will not be published.