Weekend With Ramesh: ಈ ಬಾರಿಯ ವೀಕೆಂಡ್ ವಿತ್ ರಮೇಶ್ ನಲ್ಲಿದೆ ಮತ್ತೊಂದು ಟ್ವಿಸ್ಟ್, ಇಲ್ಲಿದೆ ಯಾರು ಊಹಿಸದ್ದು.

Advertisement
Weekend With Ramesh ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಕನ್ನಡದ ಕಿರುತೆರೆಯ ಪ್ರೇಕ್ಷಕರು ಸಾಕಷ್ಟು ವರ್ಷಗಳಿಂದ ಕುಟುಂಬ ಸಮೇತ ಕುಳಿತುಕೊಂಡು ನೋಡಿ ಮೆಚ್ಚಿ ಹೊಗಳಿರುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ರಮೇಶ್ ಅರವಿಂದ್(Ramesh Aravind) ರವರ ಸಾರಥ್ಯದಲ್ಲಿ 4 ಸೀಸನ್ಗಳನ್ನು ಕೂಡ ಮುಗಿಸಿ ಈಗಾಗಲೇ 5ನೇ ಸೀಸನ್ಗೆ ಕಾಲಿಟ್ಟಿದೆ. ಪ್ರತಿಯೊಂದು ಸೀಸನ್ ಗಳು ಕೂಡ ನೋಡುಗರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿವೆ.
ಜೀ ಕನ್ನಡ ವಾಹಿನಿಯ ಹೆಡ್ ಆಗಿರುವಂತಹ ರಾಘವೇಂದ್ರ ಹುಣಸೂರು(Raghavendra Hunsur) ಅವರ ಮಾರ್ಗದರ್ಶನದಲ್ಲಿ ಈಗಾಗಲೇ ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ವಾರಾಂತ್ಯದಲ್ಲಿ ಮನೋರಂಜನೆಯ ಜೊತೆಗೆ ಕರ್ನಾಟಕದ ಸಾಧಕರ ಜೀವನ ಚರಿತ್ರೆಯ ಕುರಿತಂತೆ ಪಾಠವನ್ನು ಹೇಳುವ ಕೆಲಸವನ್ನು ಕೂಡ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದರ ಕುರಿತಂತೆ ಟೀಕಾ ಟಿಪ್ಪಣಿಗಳು ಕೂಡ ಕೇಳಿ ಬರುತ್ತಿವೆ ಅದನ್ನು ಬಿಟ್ಟು ನೋಡುವುದಾದರೆ ಇದೊಂದು ಖಂಡಿತವಾಗಿ ಸ್ಪೂರ್ತಿದಾಯಕ ಶೋ ಆಗಿದೆ.
ಹೌದು ಮಿತ್ರರೇ ವೀಕೆಂಡ್ ವಿತ್ ರಮೇಶ್(Weekend With Ramesh ) ಕಾರ್ಯಕ್ರಮ ನಿಜಕ್ಕೂ ಕೂಡ ಪ್ರತಿಯೊಬ್ಬರೂ ನೋಡಲೇ ಬೇಕಾಗಿರುವಂತಹ ಕಾರ್ಯಕ್ರಮವಾಗಿದ್ದು ಇದರ ಕುರಿತಂತೆ ಈಗ ಹೊಸ ಅಪ್ಡೇಟ್ಗಳು ಕೂಡ ಸಿಗುತ್ತಿವೆ. ಹೌದು ಟಿವಿಯಲ್ಲಿ ಬರುತ್ತಿದ್ದಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗ ಪುಸ್ತಕದಲ್ಲಿ ಕೂಡ ಬರಲು ಸಿದ್ಧವಾಗಿದೆಯಂತೆ.
ಕಾರ್ಯಕ್ರಮ ಪ್ರಾರಂಭ ಆಗುವ ಮುನ್ನ ಸುದ್ದಿಗೋಷ್ಠಿಯನ್ನು ಇಟ್ಟುಕೊಂಡಿರುವ ಸಂದರ್ಭದಲ್ಲಿ ಈ ಕುರಿತಂತೆ ಜೀ ಕನ್ನಡ(Zee Kannada) ವಾಹಿನಿಯ ಮುಖ್ಯಸ್ಥರಾಗಿರುವ ರಾಘವೇಂದ್ರ ಹುಣಸೂರು ಅವರು ಮಾಧ್ಯಮ ಮಿತ್ರರಿಗೆ ಇದರ ಕುರಿತಂತೆ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವೇಂದ್ರ ಹುಣಸೂರು ಅವರು ಪ್ರತಿಯೊಂದು ಎಪಿಸೋಡ್ ಹಾಗೂ ಪ್ರತಿಯೊಬ್ಬ ಸಾಧಕರ ಜೀವನ ಚರಿತ್ರೆಯನ್ನು ಅದಕ್ಕೆ ಸಂಬಂಧಪಟ್ಟಂತಹ ಫೋಟೋಗಳನ್ನು ಹಾಗೂ ವಿವರಗಳನ್ನು ಸೇರಿಸಿ ಅದರ ಕುರಿತಂತೆ ಪುಸ್ತಕವನ್ನು ಮಾಡಲು ಎಲ್ಲಾ ತಯಾರಿಗಳು ನಡೆಯುತ್ತಿವೆ ಎಂಬುದಾಗಿ ಹೇಳಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತಂತೆ ಪುಸ್ತಕವನ್ನು ಕೂಡ ನಾವು ಓದಬಹುದಾಗಿದೆ.