Karnataka Times
Trending Stories, Viral News, Gossips & Everything in Kannada

Upendra: ಟ್ರೋಲ್ ಮಾಡಿದವರಿಗೆ ಬೆವರಿಳಿಸಿದ ಉಪೇಂದ್ರ

ಕೇಂದ್ರ ಚುನಾವಣಾ ಆಯೋಗ, (Central Election Commission) ರಾಜ್ಯದಲ್ಲಿ ಮೇ 10 ಮತದಾನ ಮತ್ತು ಮೇ 13 ರಂದು ಮತ ಎಣಿಕೆ ಎಂದು ಪ್ರಕಟಣೆ ಹೊರಡಿಸಿದೆ. ಈಗಾಗಲೇ ಚುನಾವಣಾ ತಯಾರಿಯಲ್ಲಿ ಇರುವವರು ತಮ್ಮ ಸಿದ್ಧತೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ತಮ್ಮ ತಮ್ಮ ಸೀಟು ಭದ್ರ ಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ನಟ ಉಪೇಂದ್ರ (Upendra) ಅವರ ಒಂದು ಟ್ವೀಟ್ ಗೆ ಜನ ಮುಗಿಬಿದ್ದು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಜನರ ಕಮೆಂಟ್ ನೋಡಿ ಸುಸ್ತಾದ ಉಪೇಂದ್ರ ಅವರು ತಮ್ಮ ಮಾತನ್ನು ಸಮರ್ಥನೆ ಮಾಡಿಕೊಳ್ಳಲು ಮತ್ತೆ ಮತ್ತೆ ಟ್ವೀಟ್ ಮಾಡಿದ್ದಾರೆ.

Advertisement

Upendra ಅವರ ಪ್ರಜಾಕೀಯ:

Advertisement

ನಟ ಉಪೇಂದ್ರ (Upendra) ಅವರು ಪ್ರಜಾಕೀಯ ಪಕ್ಷದ ಮುಂದಾಳತ್ವದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದು, ಈಗ ಚುನಾವಣೆಯ ತಯಾರಿಯಲ್ಲಿದ್ದಾರೆ. ಇನ್ನು ಚುನಾವಣಾ ದಿನಾಂಕ (Election Date) ಘೋಷಣೆಯಾಗುತ್ತಿದ್ದ ಹಾಗೆ ಟ್ವೀಟ್ (Tweet) ಒಂದನ್ನು ಮಾಡಿದ್ದರು. ’ಮತ ಎಣಿಕೆಗೆ ಎರಡು ದಿನ ಬೇಕಾ? ನನಗಂತೂ ಗೊತ್ತಿಲ್ಲ, ಗೊತ್ತಿರೋರು ಹೇಳ್ರಪ್ಪಾ’ ಅಂತ ಟ್ವೀಟ್ ಪೋಸ್ಟ್ ಮಾಡಿದ್ದರು. ಆದರೆ ಇದಕ್ಕೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ ಗಳೇ ಬಂದಿವೆ. ಜನ ಉಪೇಂದ್ರ ಅವರ ಈ ಪ್ರಶ್ನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸಿನಿಮಾವಲ್ಲ, ಹಾಡಿನಲ್ಲಿಯೇ ಮದುವೆಯಾಗಿ ಮಗು ಆಗೋದಕ್ಕೆ. ಮತದಾನ ಆದ ಬಳಿಕ ಅದನ್ನು ಮತಗಟ್ಟೆಯಿಂದ ಮತ ಎಣಿಕೆ ಸ್ಥಳಕ್ಕೆ ಕೊಂಡೋಯ್ಯಬೇಕು. ಸುರಕ್ಷಿತತೆ ಕಾಪಾಡಿಕೊಳ್ಳಬೇಕು. ನೀವು ಸಿನಿಮಾ ಶೂಟಿಂಗ್ ಆದ ಕೂಡಲೆ ರಿಲೀಸ್ ಮಡುವುದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

Advertisement

Advertisement

ಇದಕ್ಕೆ ಉಪೇಂದ್ರ (Upendra) ಅವರು ಮರು ಟ್ವೀಟ್ (Tweet) ಮಾಡಿದ್ದರು. ನಮ್ಮದು ಡಿಜಿಟಲ್ ವೋಟಿಂಗ್ (Digital Voting) ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾಗುತ್ತದೆಯೇ ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದಿದ್ದೆ ಅಷ್ಟೇ. ಅಬ್ಬಬ್ಬಾ ಎಂತಹ ಕಾಮೆಂಟ್ ಗಳು? ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ (Comment) ಮಾಡಿ. ಅತಿ ಬುದ್ಧಿವಂತರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ -ಬಾಲಕರು ಎಂದು ಟ್ವೀಟ್ (Tweet) ಮಾಡಿದ್ದಾರೆ. ಇದಕ್ಕೂ ನೆಗೆಟಿವ್ ಕಮೆಂಟ್ (Negative Comment) ಗಳ ಸುರಿಮಳೆಯೇ ಬಂದಿದೆ. ಅದರಲ್ಲು ಹಿಂ- ಬಾಲಕರು ಎಂದಿರುವುದಕ್ಕೆ ರಿಯಲ್ ಸ್ಟಾರ್ ಉಪ್ಪಿ (Real Star Upendra) ಯನ್ನು ಸಾಕಷ್ಟು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ಅನಕ್ಷರಸ್ಥರೂ Online ವ್ಯವಹಾರ ಮಾಡ್ತಾರೆ:

ಇದರ ಜೊತೆಗೆ ಇನ್ನೊಂದು ಪೋಸ್ಟ್ (Post) ಕೂಡ ಟ್ವೀಟ್ (Tweet) ಮಾಡಿದ್ದರು ನಮ್ಮದು ಡಿಜಿಟಲ್ ಯುಗ ಸಣ್ಣ ವ್ಯಾಪಾರಿಗಳೂ ಕೂಡ ದೊಡ್ಡ ವ್ಯವಹಾರವನ್ನು ಆನ್ ಲೈನ್ (Online) ಮೂಲಕ ಮಾಡುತ್ತಾರೆ. ಸೇಫ್ ಆಗಿ ವ್ಯವಹಾರ ಮಾಡುತ್ತಾರೆ. ಅಂತದ್ರಲ್ಲಿ ಡಿಜಿಟಲ್ ಮತದಾನದ (Digital Voting) ಎಣಿಕೆಗೆ ಬೇಗ ಆಗಲ್ವಾ ಅಂತ ಪರುಪ್ರಶ್ನೆ ಹಾಕಿದ್ದಾರೆ. ಇದಕ್ಕೂ ಉಪೇಂದ್ರ (Upendra) ಅವರಿಗೆ ಸಾಕಷ್ಟು ಜನ ಉತ್ತರ ನೀಡಿದ್ದಾರೆ.

Leave A Reply

Your email address will not be published.