Karnataka Times
Trending Stories, Viral News, Gossips & Everything in Kannada

Vasishta Simha: ಹರಿಪ್ರಿಯಾ ಜೊತೆ ಲವ್ ಆಗಲು ನಿಜವಾದ ಕಾರಣ ಕೊಟ್ಟ ವಸಿಷ್ಠ ಸಿಂಹ, ಎಲ್ಲವೂ ಬಹಿರಂಗ

Advertisement

Hariprriya Vasishta ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಕಾಣಿಸಿಕೊಂಡಿರುವಂತಹ ನಟ ವಸಿಷ್ಠ ಸಿಂಹ(Vasishta Simha) ಹಾಗೂ ನಟಿ ಹರಿಪ್ರಿಯ(Haripriya )ಇಬ್ಬರು ಕೂಡ ಹೇಳ ಹೆಸರಿಲ್ಲದಂತೆ ಡಿಸೆಂಬರ್ ತಿಂಗಳಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ. ಎಲ್ಲರೂ ನೋಡ ನೋಡುತ್ತಿದ್ದಂತೆ ಜನವರಿ 26ರಂದು ಸರಳವಾಗಿ ಮದುವೆಯನ್ನು ಕೂಡ ಮಾಡಿಕೊಂಡು ಬಿಡುತ್ತಾರೆ. ಈ ವಿಚಾರ ಸ್ಯಾಂಡಲ್ವುಡ್ ನಲ್ಲಿ ಸಖತ್ ಸುದ್ದಿ ಕೂಡ ಆಗಿತ್ತು.

ಇವರಿಬ್ಬರೂ ಯಾವಾಗ ಲವ್ ನಲ್ಲಿ ಬಿದ್ದರು ಯಾವಾಗ ಮದುವೆ ನಿರ್ಧಾರ ಮಾಡಿಕೊಂಡರು ಎನ್ನುವ ಗೊಂದಲ ಹಾಗೂ ಕುತೂಹಲ ಇಂದಿಗೂ ಕೂಡ ಅವರ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿಮಾ ಪ್ರೇಮಿಗಳಲ್ಲಿ ಇದೆ. ಇದರ ಕುರಿತಂತೆ ನಾವೇನು ಹೆಚ್ಚು ಹುಡುಕೋದು ಬೇಡ ಸ್ವತಃ ಜೋಡಿಗಳಿಬ್ಬರು ಮದುವೆ ಆಗುವುದಕ್ಕೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಬನ್ನಿ ಈ ವಿಚಾರವಾಗಿ ಸಂಪೂರ್ಣ ವಿವರವಾಗಿ ತಿಳಿಯೋಣ.

ಇವರ ಹೇಳುವ ಪ್ರಕಾರ ಲಾಕ್ಡೌನ್(Lockdown) ಸಂದರ್ಭದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹಾಗೂ ಹೆಚ್ಚಿನ ವಿಷಯಗಳನ್ನು ತಿಳಿಯಲು ಇವರಿಬ್ಬರಿಗೂ ಸಮಯ ಸಿಕ್ಕಿತಂತೆ. ವಸಿಷ್ಠ ಅವರ ಹಾಡುಗಾರಿಕೆ ಹರಿಪ್ರಿಯಾ(Haripriya) ಅವರಿಗೆ ಇಷ್ಟವಾದರೆ ಹರಿಪ್ರಿಯ ಅವರ ಚಿತ್ರಕಲೆ ಮತ್ತು ನೃತ್ಯ ವಸಿಷ್ಟ(Vasishta) ಅವರಿಗೆ ಇಷ್ಟ ಆಗುತ್ತದೆ. ಕೇವಲ ಎಷ್ಟು ಮಾತ್ರವಲ್ಲದೆ ಇವರಿಬ್ಬರ ಲವ್ ಸ್ಟೋರಿ ಪ್ರಾರಂಭ ಆಗಿದ್ದು ಮೊದಲಿಗೆ ವಸಿಷ್ಟ ಅವರು ನಾಯಿ ಮರಿಗಳನ್ನು ಹರಿಪ್ರಿಯಾ ಅವರಿಗೆ ಉಡುಗೊರೆ ನೀಡುವ ಮೂಲಕ.

ಎಲ್ಲಕ್ಕಿಂತ ಪ್ರಮುಖವಾಗಿ ವಶಿಷ್ಠ ಅವರ ಮಾನಸಿಕ ಒತ್ತಡದ ಸಂದರ್ಭದಲ್ಲಿ ಹರಿಪ್ರಿಯಾ(Haripriya) ಅವರೇ ವಶಿಷ್ಠ ಅವರ ಪ್ರಮುಖ ಬೆಂಬಲವಾಗಿ ನಿಂತಿದ್ದು. ಹೀಗಾಗಿ ಪ್ರತಿಯೊಂದು ವಿಧದಲ್ಲಿ ಬೆಂಬಲವಾಗಿ ನಿಂತಿದ್ದ ಹರಿಪ್ರಿಯ ಅವರನ್ನೇ ಮದುವೆ ಆಗಬೇಕು ಎನ್ನುವ ನಿರ್ಧಾರವನ್ನು ಮಾಡಿ ಈ ಜೋಡಿ ಸೈಲೆಂಟ್ ಆಗಿಯೇ ಈಗಾಗಲೇ ಮದುವೆಯಾಗಿ ಎಲ್ಲರೂ ಮೆಚ್ಚುವಂತಹ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಈ ಅಪರೂಪದ ಲವ್ ಸ್ಟೋರಿ ಬಗ್ಗೆ ನಿಮಗೇನು ಅನ್ನಿಸಿತು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.