Actress Ramya: ನಟಿ ರಮ್ಯಾಳ ನಿಜವಾದ ವಯಸ್ಸೇಷ್ಟು? ಇಲ್ಲಿದೆ ರಮ್ಯಾ ಬಗ್ಗೆ ಗೊತ್ತಿರದ ಅನೇಕ ಸಂಗತಿ.

Advertisement
ಕನ್ನಡ ಚಿತ್ರರಂಗವನ್ನು ಸಾಕಷ್ಟು ವರ್ಷಗಳಿಂದ ಆಳುತ್ತಿರುವಂತಹ ನಟಿ ರಮ್ಯಾ(Actress Ramya) ಅವರ ಕುರಿತಂತೆ ಕೆಲವೊಂದು ಗೊತ್ತಿರದೆ ಇರುವಂತಹ ವಿಚಾರಗಳನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ನಟಿ ರಮ್ಯಾ ಅವರ ತಂದೆ ತಾಯಿಯವರು ಇಬ್ಬರೂ ಕೂಡ ಮಂಡ್ಯ ಮೂಲದವರಾಗಿದ್ದರು ಕೂಡ ರಮ್ಯಾ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ತಾಯಿ ರಂಜಿತ ಹಾಗೂ ತಂದೆ ಆರ್ ಟಿ ನಾರಾಯಣ್(RT Narayan). ಇವರ ತಂದೆ ಸಾಕು ತಂದೆ ಆಗಿದ್ದು ಇವರು 2013ರಲ್ಲಿ ಹೃದಯ’ ಘಾತದಿಂದಾಗಿ ಮರಣ ಹೊಂದುತ್ತಾರೆ. ಇನ್ನು ಶಿಕ್ಷಣವನ್ನು ನಟಿ ರಮ್ಯಾ ಅವರು ಊಟಿ ಹಾಗೂ ಚೆನ್ನೈನಲ್ಲಿ ಮುಗಿಸಿ ನಂತರ ಬೆಂಗಳೂರಿನಲ್ಲಿ ಕೂಡ ಉನ್ನತ ಶಿಕ್ಷಣವನ್ನು ಪೂರೈಸಿದ್ದಾರೆ.
ಶಿಕ್ಷಣ ಪೂರೈಸಿದ ನಂತರ ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಗಳಿಸಿದ ನಂತರ ಮೊದಲಿಗೆ ಅವರು ಕಾಣಿಸಿಕೊಂಡಿದ್ದು ಪುನೀತ್ ರಾಜಕುಮಾರ್(Puneeth Rajkumar) ನಟನೆಯ ಅಭಿ ಸಿನಿಮಾದ ಮೂಲಕ. ದಿವ್ಯ ಸ್ಪಂದನ(Divyaspandana) ಆಗಿದ್ದ ರಮ್ಯಾ ಅವರಿಗೆ ರಮ್ಯಾ ಎನ್ನುವ ಹೆಸರನ್ನು ನೀಡಿದ್ದು ಪಾರ್ವತಮ್ಮ ರಾಜಕುಮಾರ್(Parvathamma Rajkumar). ಇದಾದ ನಂತರ ಸಾಕಷ್ಟು ಕನ್ನಡದ ಸ್ಟಾರ್ ನಟರಾಜ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರಮ್ಯ ತೆಲುಗು ಹಾಗೂ ತಮಿಳಿನಲ್ಲಿ ಕೂಡ ನಟಿಸಿ ಬಂದಿದ್ದಾರೆ.
ರಮ್ಯಾ(Ramya) ನಟಿಸಿರುವಂತಹ ಹಲವಾರು ಸಿನಿಮಾಗಳಿಗಾಗಿ ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. 2013ರ ಬೈ ಎಲೆಕ್ಷನ್ ನಲ್ಲಿ ಗೆದ್ದು ಪಾರ್ಲಿಮೆಂಟ್ ಸದಸ್ಯರಾಗುವ ಇವರು ನಂತರ ಬರುವಂತಹ ಚುನಾವಣೆಯಲ್ಲಿ ಸೋತು ರಾಜಕೀಯ ಕ್ಷೇತ್ರದಿಂದ ಕೂಡ ಸ್ವಲ್ಪ ಮಟ್ಟಿಗೆ ದೂರ ಉಳಿದುಕೊಳ್ಳುತ್ತಾರೆ. ಸದ್ಯಕ್ಕೆ ಇವರು 41 ವಯಸ್ಸು ನಡೆಯುತ್ತಿದ್ದು 5.5 ಎತ್ತರ ಹಾಗೂ 58 ಕೆಜಿ ತೂಕವನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಸದ್ಯಕ್ಕೆ ಸಾಕಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದಂತಹ ನಟಿ ರಮ್ಯಾ ಅವರು ಈಗ ಮತ್ತೆ ಉತ್ತರಕಾಂಡ(Uttarakanda) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ನಾಯಕ ನಟಿಯಾಗಿ ಮರುಪಾಧರ್ಪಣೆ ಮಾಡುತ್ತಿದ್ದಾರೆ. ಇವುಗಳೇ ರಮ್ಯ ಅವರ ಕುರಿತಂತೆ ಇರುವಂತಹ ಸಂಪೂರ್ಣ ಮಾಹಿತಿಯ ವಿವರಗಳು. ನಟಿ ರಮ್ಯಾ ಅವರ ನಟನೆಯ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.