Karnataka Times
Trending Stories, Viral News, Gossips & Everything in Kannada

Rocking Star Yash: ಸದ್ದಿಲ್ಲದೆ ಕೋಟಿ ಹಣ ದಾನ ಮಾಡಿದ ಯಶ್, ಯಾವ ಕೆಲಸಕ್ಕೆ ಗೊತ್ತಾ? ರಾಧಿಕಾಗೂ ತಿಳಿದಿಲ್ಲ

ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಮಾಡಿರುವಂತಹ ಕೋಟಿ ಕೋಟಿ ದಾನವನ್ನು ನೋಡಿ ಅವರ ಪತ್ನಿ ಆಗಿರುವಂತಹ ರಾಧಿಕಾ ಪಂಡಿತ್(Radhika pandit) ರವರೆ ಕಣ್ಣೀರು ಹಾಕಿದ್ದಾರಂತೆ. ಅಷ್ಟಕ್ಕೂ ರಾಕಿಂಗ್ ಸ್ಟಾರ್ ಯಶ್ ರವರು ಆ ಕೋಟಿ ಕೋಟಿ ಹಣವನ್ನು ದಾನ ಮಾಡಿದ್ದು ಯಾರಿಗೆ ಅಥವಾ ಯಾವ ಕಾರಣಕ್ಕಾಗಿ ಮತ್ತು ರಾಧಿಕಾ ಪಂಡಿತ್ ಕಣ್ಣೀರು ಹಾಕಿದಾದರೂ ಯಾಕೆ ಎನ್ನುವುದನ್ನು ತಿಳಿಯೋಣ ಬನ್ನಿ.

Advertisement

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ರವರು ತಮ್ಮ ಯಶೋಮಾರ್ಗ(Yashomarga) ಸಂಸ್ಥೆಯ ಮೂಲಕ ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ಜನರು ಎದುರಿಸುತ್ತಿರುವಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಪ್ರತಿ ವರ್ಷ ಅವರು ಕೋಟಿ ಕೋಟಿ ಹಣವನ್ನು ದಾನ ಮಾಡಲೇಬೇಕಾಗುತ್ತದೆ ಅದು ಕೂಡ ಯಾವುದೇ ಪ್ರಚಾರವಿಲ್ಲದೆ ಅವರು ಮಾಡುತ್ತಿರುವಂತಹ ಕೆಲಸ. ಆದರೆ ಈಗ ಅವರು ನಾಲ್ಕು ವರ್ಷಗಳ ಹಿಂದೆ ಮಾಡಿರುವ ಒಂದು ಕೆಲಸ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.

Advertisement

ಹೌದು ಮಿತ್ರರೇ ನಟ ರಾಕಿಂಗ್ ಸ್ಟಾರ್ ಯಶ್ ರವರು ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಡೇನಿಯಲ್ ಬಾಲಾಜಿ(Daniel Balaji) ಅವರಿಗೆ ಕರೆ ಮಾಡಿ ತಮ್ಮ ಮುಂದಿನ ಸಿನಿಮಾಗೆ ಅವರ ಕಾಲ್ ಶೀಟ್ ಅನ್ನು ಕೇಳಿದರು. ಆಗ ಡೆನಿಯಲ್ ಬಾಲಾಜಿ ಅವರು ತಾವೊಂದು ತಮಿಳುನಾಡಿನಲ್ಲಿ ದೇವಸ್ಥಾನವನ್ನು ಕಟ್ಟಿಸುತ್ತಿದ್ದು ಅದು ಮುಗಿದ ನಂತರವೇ ಬರಲು ಸಾಧ್ಯ ಎಂಬುದಾಗಿ ಹೇಳಿದರು. ಅದಾದ ಕೂಡಲೇ ಯಶ್ ಅವರಿಗೆ ಶುಭಾಶಯವನ್ನು ಕೋರಿ ಕೂಡಲೇ ಕಾಲ್ ಕಟ್ ಮಾಡಿ ಅವರ ಖಾತೆಗೆ ಹಣವನ್ನು ವರ್ಗಾಯಿಸುತ್ತಾರೆ. ಆಗ ಆಶ್ಚರ್ಯ ಚಕಿತರಾಗಿ ಇದೇನು ಸಿನಿಮಾದ ಅಡ್ವಾನ್ಸ್ ಹಣವನ್ನು ಈಗಲೇ ಕಳಿಸಿದ್ದೀರಾ ಸರ್ ಎಂಬುದಾಗಿ ಅವರು ಕೇಳುತ್ತಾರೆ.

Advertisement

ಆಗ ಯಶ್ ನಗುತ್ತಾ ಇಲ್ಲ ಇದು ನಿಮ್ಮ ಸಿನಿಮಾದ ಅಡ್ವಾನ್ಸ್ ಹಣವನ್ನು ಬದಲಾಗಿ ನೀವು ಕಟ್ಟುತ್ತಿರುವಂತಹ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ನಮ್ಮದೊಂದು ಚಿಕ್ಕ ಕೊಡುಗೆ ನಿಮಗೆ ಒಳ್ಳೆಯದಾಗಲಿ ಎಂಬುದಾಗಿ ಯಶ್(Yash) ಅವರು ಹೇಳುತ್ತಾರೆ. ಇದರ ಕುರಿತಂತೆ ರಾಧಿಕಾ ಪಂಡಿತ್ ಅವರು ಭಾವುಕರಾಗಿ ದೇವರು ನಮಗೆ ಸಾಕಷ್ಟು ಯಶಸ್ಸನ್ನು ನೀಡಿದ್ದಾನೆ ಇದು ನಾವು ದೇವರಿಗೆ ವಾಪಸ್ ನೀಡುವಂತಹ ಚಿಕ್ಕ ಕಾಣಿಕೆ ಅಷ್ಟೇ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಯಶ್ ರವರು ಯಾವ ಮಟ್ಟಕ್ಕೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನಾವು ತಿಳಿಯಬಹುದಾಗಿದೆ.

Leave A Reply

Your email address will not be published.