Amrutha Iyengar: ಮೊದಲ ಭೇಟಿ ಸಮಯದಲ್ಲಿ ಡಾಲಿ ಪರಿಸ್ಥಿತಿ ಹೇಗಿತ್ತು ಎಂದು ತಿಳಿಸಿದ ನಟಿ ಅಮೃತಾ

Advertisement
ಸಿನಿಮಾ (Movie) ಎಂಬ ಕಲರ್ ಫುಲ್ (Colour Full) ಲೋಕದಲ್ಲಿ ಗಾಸಿಫ್ ಗಳಿಗೇನು ಕಡೆಮಿಯಿಲ್ಲ ಎನ್ನಬಹುದು. ಹೌದು ಈ ಮಾಯಾ ಲೋಕದಲ್ಲಿ ದಿನಕ್ಕೊಂದು ಗಾಸಿಫ್ (Gossip) ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಆದರೆ ಇಲ್ಲಾ ಗಾಸಿಫ್ ಗಳು ನಿಜ ಎಂದು ಕೂಡ ಹೇಳಲು ಸಾದ್ಯವಿಲ್ಲ. ಇನ್ನು ಕೆಲವು ವಿಚಾರಗಳು ಗಾಸಿಫ್ ರೂಪದಲ್ಲಿ ಹುಟ್ಟಿಕೊಂಡು ನಂತರದಲ್ಲಿ ನಿಜವಾದ ಘಟನೆ ಕೂಡ ನಡೆದಿದೆ. ಸದ್ಯ ನಮ್ಮ ಚೆಂದನವನದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಗಾಸಿಫ್ ಎಂದರೆ ನಟ ಡಾಲಿ ಧನಂಜಯ್ (Dhananjay) ಹಾಗೂ ಅಮೃತಾ ಐಯ್ಯಂಗಾರ್ (Amrutha Iyanger) ರವರ ಲವ್ವಿ ಡವ್ವಿ. ಸಾಕಷ್ಟು ದಿನಗಳಿಂದ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ನಂತರ ಕಾರ್ಯಕ್ರಮ ವೊಂದರಲ್ಲಿ ಅಮೃತಾ ಗೆ ಡಾಲಿ ಮಂಡಿಯೂರಿ ಪ್ರಪೂಸ್(Propose) ಮಾಡುದ್ದು ಇವರಿಬ್ಬರ ಪ್ರೇಮ್ ಕಹಾನಿಗೆ ಪುಷ್ಟಿ ನೀಡಿದ್ದಂತಾಗಿತ್ತು.
ಸದ್ಯ ಈ ಜೋಡಿ ಇದೀಗ ಮೂರು ಮೂರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಚೆಂದನವನದ ಕ್ಯೂಟ್ ಪೇರ್ (Cute Pair) ಆಗಿದ್ದಾರೆ. ಈ ನಡುವೆ ಅವರಿಬ್ಬರ ಹಲವು ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಇನ್ನು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ಅಮೃತಾ ಸದಾ ಡಾಲಿಯ ಅಭಿಮಾನಿ (Fan) ಎಂದಿದ್ದಾರೆ. ಅವರನ್ನು ಭೇಟಿಯಾಗುವ ಮೊದಲೂ ಕೂಡ ನಾನು ಅವರ ಅಭಿಮಾನಿಯಾಗಿದ್ದು ಈಗಲೂ ಕೂಡ ನಾನು ಅವರ ಅಭಿಮಾನಿಯೇ. ಹೌದು ಅವರ ಜೊತೆಗೆ ಹಲವು ನಟಿಯರು ಹೇಳುತ್ತಿರುತ್ತಾರೆ ಡಾಲಿ ಬಹಳ ಬೆಂಬಲಿಸುತ್ತಾರೆ ಚೆನ್ನಾಗಿ ಮಾತನಾಡುತ್ತಾರೆ ಹಾಗೂ ನಟಿಸಲು ಸ್ಪೂರ್ತಿ ತುಂಬುತ್ತಾರೆ ಎಂದೆಲ್ಲ. ಇನ್ನು ನಾನು ಮೂರನೇ ಬಾರಿ ಅವರೊಟ್ಟಿಗೆ ನಟಿಸುತ್ತಿದ್ದೇನೆ ಎಂಬುದು ನನಗೆ ಖುಷಿ ಎಂದಿದ್ದಾರೆ ನಟಿ ಅಮೃತಾ ಅಯ್ಯಂಗಾರ್.
ಇನ್ಜು ಅಮೃತಾ ಐಯ್ಯಂಗಾರ್ (Amrutha Iyengar) ಮೊದಲ ಬಾರಿ ಡಾಲಿ ಧನಂಜಯ್ ಅವರನ್ನು ಭೇಟಿಯಾದ ಸಂದರ್ಭವನ್ನ ಕೂಡ ನೆನಪಿಸಿಕೊಂಡಿದ್ದು ಡಾಲಿಯನ್ನು ತಾವು ಒಂದು ಹಳೆಯ ಬಾರಿನಲ್ಲಿ ಭೇಟಿಯಾಗಿದ್ದಾಗಿ ಹೇಳಿದ್ದಾರೆ. ಹೌದು ಅದಾಗಲೇ ಲವ್ ಮಾಕ್ಟೆಲ್ ಸೇರಿದಂತೆ ಇನ್ನೂ ಎರಡು ಚಿತ್ರಗಳಲ್ಲಿ ನಟಿಸಿದ್ದ ಅಮೃತಾ ಮೊದಲ ಬಾರಿಗೆ ಡಾಲಿ ಧನಂಜಯ ಜೊತೆಗೆ ನಟಿಸಿದ್ದು ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ. ಇನ್ನು ಆ ಸಿನಿಮಾದ ಸೆಟ್ನಲ್ಲಿಯೇ ಮೊದಲು ಅಮೃತಾ ಡಾಲಿಯವರನ್ನು ಭೇಟಿಯಾಗಿದ್ದು.
ಈ ಕುರಿತು ಮಾತನಾಡಿರುವ ಅಮೃತಾ (Amrita) ಅದೊಂದು ಬಹಳ ಹಳೆಯ ಬಾರು ಅದರ ಒಳಕ್ಕೆ ನನ್ನನ್ನು ಸೂರಿ ಅವರು ಕರೆದುಕೊಂಡು ಹೋದರು. ಇನ್ನು ಅಲ್ಲಿ ಕೊಳಚೆ ಮಧ್ಯೆ ರಕ್ತ ಮೆತ್ತಿಕೊಂಡು ಡಾಲಿ ಕೂತಿದ್ದರು. ನನಗೆ ನೋಡಿದಾಗ ಇವರೇನಾ ಧನಂಜಯ್ ಎಂದು ಬಹಳ ಆಶ್ಚರ್ಯವಾಯಿತು. ಆದರೆ ಅಂದು ಭಯಾನಕವಾಗಿ ಡಾಲಿ ಕಾಣುತ್ತಿದ್ದು ಕೈ ಕೊಡಲು ಸಹ ನನಗೆ ಭಯವಾಗಿತ್ತ ಎಂದು ಅಮೃತಾ ಐಯ್ಯಂಗಾರ್ ರವರು ನೆನಪಿಸಿಕೊಂಡಿದ್ದಾರೆ.