Karnataka Times
Trending Stories, Viral News, Gossips & Everything in Kannada

Sai Pallavi: ತನ್ನ ಮೇಕಪ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ನಟಿ ಸಾಯಿ ಪಲ್ಲವಿ

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ(Sai Pallavi) ನ್ಯಾಚುರಲ್ ಬ್ಯೂಟಿ(Natural Beauty) ಎಂದೇ ಕರೆಸಿಕೊಳ್ಳುತ್ತಾರೆ. ಅವರು ಸಿನಿಮಾದಲ್ಲಿ ಮಾತ್ರವಲ್ಲ ವ್ಯಕ್ತಿತ್ವದಲ್ಲಿಯೂ ಬಹಳ ಸಿಂಪಲ್. ಸಿನಿಮಾದಲ್ಲಿ ಬೇರೆ ನಟಿಯರಂತೆ ಸಾಯಿ ಪಲ್ಲವಿ ಮೇಕಪ್(Makeup) ಮಾಡುವುದಿಲ್ಲ.ಸಾಮಾನ್ಯವಾಗಿ ಸಿನಿಮಾ ಅಂದಮೇಲೆ ತಾರೆಯರು ಮೇಕಪ್ ಮಾಡಿಕೊಳ್ಳುವುದು ಸಹಜ ಅದರಲ್ಲೂ ಸಾಯಿ ಪಲ್ಲವಿ ಅವರ ಮುಖದ ತುಂಬಾ ಮೊಡವೆಗಳು ಇವೆ.

Advertisement

ಪ್ರೇಮಮ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಮುಖದ ತುಂಬಾ ಮೊಡವೆ ಇದ್ದರೂ ಯಾವುದೇ ಮೇಕಪ್ ಇಲ್ಲದೆ ಅಭಿನಯಿಸಿದ್ದರು. ಇದನ್ನು ಜನರು ಇಷ್ಟಪಟ್ಟಿದ್ದರು. ಅದಾದ ನಂತರ ಸಾಯಿ ಪಲ್ಲವಿ ನಟಿಸುವ ಎಲ್ಲಾ ಸಿನಿಮಾದಲ್ಲಿಯೂ ವಿಥೌಟ್ ಮೇಕಪ್ ಕಾಣಿಸಿಕೊಳ್ಳುತ್ತಾರೆ.

Advertisement

ನನ್ನ ಮೇಕಪ್ ನಾನೇ ಮಾಡಿಕೊಳ್ಳುತ್ತೇನೆ:

Advertisement

ಇತ್ತೀಚಿಗೆ ಅನುಪಮಾ ಚೋಪ್ರಾ(Anupama Chopra) ಅವರ ಸಂದರ್ಶನದಲ್ಲಿ ಮೇಕಪ್ ಬಗ್ಗೆ ಸಾಯಿ ಪಲ್ಲವಿ ಮಾತನಾಡಿದ್ದಾರೆ. “ಪ್ರೇಮ ಸಿನಿಮಾದ ಮೂಲಕ ಫೋಟೋ ಶೂಟ್(Photoshoot) ಮಾಡಿಸುವಾಗ ಮೇಕಪ್(Makeup) ಹಾಕಿಕೊಂಡಿದ್ದೆ. ಆದರೆ ಸಿನಿಮಾದಲ್ಲಿ ನಾನು ಮೇಕಪ್ ಇಲ್ಲದೆ ಇದ್ದರೇನೇ ನಿರ್ದೇಶಕರು ಕೂಡ ಇಷ್ಟಪಡುತ್ತಾರೆ. ಮೇಕಪ್ ಮಾಡಬೇಕಾ, ಕಣ್ಣಿಗೆ ಲೆನ್ಸ್ ಹಾಕಬೇಕಾ ಎನ್ನುವ ಎಲ್ಲಾ ಟ್ರಯಲ್ ಗಳು ನಡೆದಿದ್ದವು ಆದರೆ ನಿರ್ದೇಶಕರು ಕೊನೆಗೆ ಇದೆಲ್ಲಾ ಬೇಡ ಇದ್ದ ಹಾಗೆ ಇದ್ದುಬಿಡಿ ಎಂದು ಹೇಳಿದರು. ನಾನು ಸಿನಿಮಾ ಅರ್ಥ ಮಾಡಿಕೊಂಡ ಹಾಗೆ ಸಿನಿಮಾದಲ್ಲಿ ಪಾರ್ಟಿಕ್ಯುಲರ್ ಆಗಿ ಹೀಗೆ ಇರಬೇಕು ಎಂದೇನು ಇಲ್ಲ ನಮಗೆ ನೀಡುವ ಪಾತ್ರದಲ್ಲಿಯೇ ಡಿಫರೆಂಟ್ ಶೇಡ್ ಜನರಿಗೆ ಕಾಣಿಸುತ್ತೆ.

Advertisement

ಸಿನಿಮಾಗಳಲ್ಲಿ ಪ್ರತಿಯೊಂದು ಪಾತ್ರದಲ್ಲಿಯೂ ಡಿಫ್ರೆಂಟ್ ಆಗಿ ಕಾಣಿಸುತ್ತೇವೆ. ಅದು ಕಥೆಯನ್ನು ಆಧರಿಸಿರುತ್ತದೆ, ಕಥೆಗೆ ತಕ್ಕ ಹಾಗೆ ಭಾವನೆಗಳನ್ನು ವ್ಯಕ್ತಪಡಿಸಿದಾಗ ನಾವು ಡಿಫ್ರೆಂಟ್ ಆಗಿ ಕಾಣಿಸುತ್ತೇವೆ. ಮೇಕಪ್ ಹಾಕಿಕೊಳ್ಳದೆ ಅಭಿನಯಿಸುವುದು ನಿರ್ದೇಶಕರಿಗೂ ಕೂಡ ಒಪ್ಪಿಗೆ ಇದೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಹೆಚ್ಚಾಗಿ ಇತ್ತು. ಹಾಗಾಗಿ ಮೇಕಪ್ ಹಾಕಿಕೊಳ್ಳಬೇಕಿತ್ತು. ಅದು ಆ ಕಲೆಗೆ ಕೊಡುವ ಗೌರವ. ನನ್ನ ಮೇಕಪ್ ಆರ್ಟಿಸ್ಟ್ ಗಳು ಮೇಕಪ್ ಮಾಡುತ್ತಿದ್ದರು. ಅದು ನನಗೆ ಸರಿ ಬರದೆ ನಾನೇ ಮೇಕಪ್ ಮಾಡಿಕೊಳ್ಳುತ್ತಿದೆ. ಇದರಿಂದ ಅವರು ನನ್ನನ್ನು ಹೇಟ್ ಮಾಡುತ್ತಾರೆ. ಇನ್ನು ಹೇರ್ ಸ್ಟೈಲ್ ಈವರೆಗೆ ಎಲ್ಲಾ ಸಿನಿಮಾದಲ್ಲಿಯೂ ಕೇವಲ ಜಡೆ ಆಗಿತ್ತು. ಕ್ಯಾಮೆರಾ ಮುಂದೆ ಎಲ್ಲವೂ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ ಹೇರ್ ಸ್ಟೈಲ್ ಆಗಾಗ ಹಾಳಾಗುತ್ತಿತ್ತು. ಇದರಿಂದ ಹೇರ್ ಸ್ಟ್ರೈಲ್ ಮಾಡಿದವರಿಗೂ ಅಸಮಾಧಾನ ಆಗುತ್ತಿತ್ತು.

ನಾನು ಮೇಕಪ್ ಹಾಕುವುದಿಲ್ಲ ಯಾಕೆಂದರೆ ಸಿನಿಮಾಟೋಗ್ರಾಫರ್ ಗಳು ಅಷ್ಟು ಚೆನ್ನಾಗಿ ಲೈಟಿಂಗ್ ಮಾಡುತ್ತಾರೆ. ಮೇಕಪ್ ಇಲ್ಲದೆಯೂ ನಾನು ಚೆನ್ನಾಗಿ ಕಾಣಿಸುತ್ತೇನೆ. ಪೋಸ್ಟ್ ಪ್ರೊಡಕ್ಷನ್(Post Production) ಸಮಯದಲ್ಲಿ ಎಡಿಟಿಂಗ್ ಮಾಡುವಾಗ, ಮೊಡವೆಗಳನ್ನು ನೋಡಿ ಆಗ ಮೇಕಪ್ ಮಾಡಿಕೊಂಡಿಲ್ಲ ಎನ್ನುವುದು ಅವರ ಗಮನಕ್ಕೆ ಬರುತ್ತದೆ ಎಂದು ಪಲ್ಲವಿ ತಿಳಿಸಿದ್ದಾರೆ.

ಬಾಲಿವುಡ್ ನಲ್ಲಿ ಇದೇ ರೀತಿ ಮೇಕಪ್ ಮಾಡಿಕೊಳ್ಳಬೇಕು. ಎನ್ನುವ ಒತ್ತಡ ಇದೆ. ಆದರೆ ನನಗೆ ಆ ಕಡೆಯ ವಿಚಾರ ಗೊತ್ತಿಲ್ಲ. ಹಾಗಾಗಿ ಕೂಲ್ ಆಗಿದ್ದೇನೆ ಮೇಕಪ್ ಧರಿಸುವುದರಿಂದ ಕಾನ್ಫಿಡೆನ್ಸ್ ಹೆಚ್ಚಾಗುತ್ತೆ ಅಂದ್ರೆ ಮೇಕಪ್ ಮಾಡಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ. ಆದ್ರೆ ನಾನು ಮೇಕಪ್ ಇಲ್ಲದೆ ಕಾನ್ಫಿಡೆನ್ಸ್ ಆಗಿ ಅಭಿನಯಿಸುತ್ತೇನೆ ಹಾಗಾಗಿ ಹೀಗೆ ಇರಲು ಇಷ್ಟಪಡುತ್ತೇನೆ” ಎಂದು ಸಾಯಿ ಪಲ್ಲವಿ ತನ್ನ ಮೇಕಪ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Leave A Reply

Your email address will not be published.