Karnataka Times
Trending Stories, Viral News, Gossips & Everything in Kannada

Dr ShivaRajkumar: ಆ ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡ ನಂತರ ಮೂರು ದಿನ ಶಿವಣ್ಣ ಸ್ನಾನಾನೆ ಮಾಡಿರ್ಲಿಲ್ವಂತೆ!

ಕರ್ನಾಟಕದಲ್ಲಿ ಕಳೆದ ಮೂರು ಜನರೇಷನ್ ಗಳಿಂದಲೂ ಕೂಡ ಟಾಪ್ ನಾಯಕ ನಟನಾಗಿ ಕಾಣಿಸಿಕೊಂಡು ಬಂದಿರುವಂತಹ ಏಕೈಕ ಕಲಾವಿದ ಎಂದರೆ ಅದು ದೊಡ್ಡಮನೆಯ ಹಿರಿ ಮಗ ನಮ್ಮ ಕನ್ನಡದ ನೆಚ್ಚಿನ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್(Shivarajkumar). ಕನ್ನಡಿಗರು ಅವರನ್ನು ಪ್ರೀತಿಯಿಂದ ಶಿವಣ್ಣ ಎನ್ನುವುದಾಗಿಯೇ ಕರೆಯುತ್ತಾರೆ. ಅಷ್ಟರಮಟ್ಟಿಗೆ ಕಳೆದ 35 ವರ್ಷಗಳಿಂದಲೂ ಅಧಿಕಕಾಲ ಶಿವಣ್ಣ ಅವರು ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

Advertisement

ಈಗಾಗಲೇ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತಹ ಕನ್ನಡದ ಸಿಂಹದಮರಿ ಆಗಿರುವಂತಹ ಶಿವಣ್ಣ(Shivanna) ಒಂದು ಕಾಲದಲ್ಲಿ ಅವರು ಕೂಡ ಒಬ್ಬ ಪ್ರೇಕ್ಷಕನಾಗಿ ಸಿನಿಮಾಗಳನ್ನು ಆನಂದಿಸುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮ ತಂದೆಯನ್ನು ಹೊರತುಪಡಿಸಿ ಮತ್ತೊಬ್ಬ ಕಲಾವಿದನನ್ನು ಕೂಡ ಅವರು ತಮ್ಮ ನೆಚ್ಚಿನ ನಟ ಎನ್ನುವುದಾಗಿ ಕರೆಯುತ್ತಿದ್ದರಂತೆ. ಇದನ್ನು ಖುದ್ದಾಗಿ ಶಿವಣ್ಣ ಅವರೇ ಹಲವಾರು ಕಾರ್ಯಕ್ರಮಗಳ ವೇದಿಕೆಯ ಮೇಲೆ ಕೂಡ ಹೇಳಿಕೊಂಡಿದ್ದಾರೆ. ಆ ಒಬ್ಬ ನಟನನ್ನು ಮಾತನಾಡಿಸಬೇಕು ಆತನನ್ನು ಆಲಂಗಿಸಿಕೊಳ್ಳಬೇಕು ಎನ್ನುವ ಆಸೆಯನ್ನು ಕೂಡ ಹೊಂದಿದ್ದರು.

Advertisement

ಇಂದು ಶಿವಣ್ಣನನ್ನು ಮೀಟ್ ಆಗಲು ಅವರ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾಯುತ್ತಿರಬಹುದು ಆದರೆ ಆ ಕಾಲದಲ್ಲಿ ಶಿವಣ್ಣ ಕೂಡ ಈ ಸಲಬರೇಟಿಯ ಜೊತೆಗೆ ಒಂದು ಫೋಟೋವನ್ನು ತೆಗೆದುಕೊಳ್ಳಬೇಕು ಅವರ ಜೊತೆಗೆ ಇರಬೇಕು ಎನ್ನುವ ಆಸೆಯನ್ನು ಕಂಡಿದ್ದರು. ಆ ನಟ ಇನ್ಯಾರು ಅಲ್ಲ ತಮಿಳು ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಉಳಗನಯಗನ್ ಕಮಲ್ ಹಾಸನ್(Kamal Haasan).

Advertisement

ಹೌದು ಮಿತ್ರರೇ ಶಿವಣ್ಣ ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿಯಾಗಿದ್ದು ಅಂದಿನ ಕಾಲದಲ್ಲಿ ಕಮಲ್ ಹಾಸನ್ ನಟನೆಯ ಪ್ರತಿಯೊಂದು ಸಿನಿಮಾಗಳನ್ನು ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು. ಕಮಲ್ ಹಾಸನ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಇನ್ನು ಕಮಲ್ ಹಾಸನ್ ಅವರನ್ನು ಆಲಂಗಿಸಿದ ನಂತರ ಮೂರು ದಿನಗಳ ಕಾಲ ಆಲಂಗನೆ ತಾಜಾ ವಾಗಿರಲಿ ಎನ್ನುವ ಕಾರಣಕ್ಕಾಗಿ ಶಿವಣ್ಣ ಸ್ನಾನವನ್ನೇ ಮಾಡಿರಲಿಲ್ಲವಂತೆ. ಅಷ್ಟರಮಟ್ಟಿಗೆ ಶಿವಣ್ಣ ಕಮಲ್ ಹಾಸನ್ ಅವರ ಹುಚ್ಚು ಅಭಿಮಾನಿಯಾಗಿದ್ದರು ಎಂದರು ಕೂಡ ತಪ್ಪಾಗಲಾರದು. ಶಿವಣ್ಣನವರ ಕಮಲ್ ಹಾಸನ್(Kamal Haasan) ಅಭಿಮಾನದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.