1991ರಲ್ಲಿ ಸೌದಾಗಾರ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಖ್ಯಾತ ನಟಿ (Bollywood Actress) ಮನೀಷಾ ಕೊಯ್ರಾಲ (Manisha Koirala) ಅವರು ಚಿತ್ರರಂಗಕ್ಕೆ ಪರಿಚಿತರಾಗುತ್ತಾರೆ. ಇದಾದ ನಂತರ ಅವರು ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾ ಹಿಂದಿ ಜೊತೆಗೆ ತಮಿಳು ತೆಲುಗು ಬಂಗಾಳಿ ಸೇರಿದಂತೆ ಅನ್ಯ ಭಾಷೆಗಳಲ್ಲಿ ಕೂಡ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಮನಿಷಾ ಕೊಯ್ರಾಲ ಅವರ ತಮಿಳ್ ಸಿನಿಮಾ ಕರಿಯರ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಟಿ ಮನಿಷಾ ಕೊಯ್ರಾಲ ಅವರ ಕೊನೆಯ ತಮಿಳು ಸಿನಿಮಾ 2002ರಲ್ಲಿ ಬಿಡುಗಡೆ ಆಗಿದ್ದು ಇದು ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ನಟನೆಯ ಬಾಬಾ ಸಿನಿಮಾ ಆಗಿತ್ತು. ಇದಾದ ನಂತರ ಅವರು ಯಾವುದೇ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಕೊನೆಯ ಸಿನಿಮಾ ಬಾಬಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿರಲಿಲ್ಲ. ಇದರ ಕುರಿತಂತೆ ಮಾತನಾಡುತ್ತ ನಟಿ, ” ರಜನಿಕಾಂತ್ ಅವರ ಸಿನಿಮಾ ಆಗಿರುವ ಕಾರಣದಿಂದಾಗಿ ಬಾಬಾ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು ಆದರೆ ಆ ಸಿನಿಮಾ ನಿರೀಕ್ಷೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಹೀಗಾಗಿ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಫ್ಲಾಪ್ ಆಯ್ತು.
ಸಿನಿಮಾದ ವಿಫಲತೆ ಎನ್ನುವುದು ಕೇವಲ ಸಿನಿಮಾದ ಕಲೆಕ್ಷನ್ ಮೇಲೆ ಮಾತ್ರವಲ್ಲದೆ ನನ್ನ ಸಿನಿಮಾ ಕರಿಯರ್ ಮೇಲೆ ಪ್ರಭಾವ ಬೀರಿ ಅದಾದ ಮೇಲೆ ನನಗೆ ಯಾವುದೇ ತಮಿಳು ಹಾಗೂ ದಕ್ಷಿಣ ಭಾರತದ ಚಿತ್ರಗಳು ಹುಡುಕಿಕೊಂಡು ಬರಲಿಲ್ಲ. ರಜನಿಕಾಂತ್ ಅವರ ಸಿನಿಮಾಗಳು ಫ್ಲಾಪ್ ಆಗೋದಕ್ಕೆ ಸಾಧ್ಯವೇ ಇಲ್ಲ ಆದರೆ ಬಾಬಾ ವಿಭಿನ್ನವಾಗಿತ್ತು. ಆದರೆ ಅದೇ ಸಿನಿಮಾ ಮತ್ತೊಮ್ಮೆ ರಿಲೀಸ್ ಆದಾಗ ದೊಡ್ಡ ಮಟ್ಟದ ಯಶಸ್ಸನ್ನು ಖಂಡಿತ ಎನ್ನುವ ಬಗ್ಗೆ ಕೂಡ ನಟಿ ಮನಿಷಾ ಕೊಯ್ರಾಲ (Manisha Koirala) ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮನಿಷ ಕೊಯ್ರಾಲ ಅವರ ಸಿನಿಮಾ ಜೀವನ ಎನ್ನುವುದು ಬಾಬಾ ಸಿನಿಮಾದ ವಿಫಲತೆಯ ನಂತರ ಸಂಪೂರ್ಣವಾಗಿ ನಿಂತು ಹೋಯ್ತು ಎಂದು ಹೇಳಬಹುದು. ತಮಿಳು ಸಿನಿಮಾಗಳ ಆಫರ್ ಕಡಿಮೆಯಾಗುವುದಕ್ಕೆ ರಜನಿಕಾಂತ್ ಅವರು ನೇರವಾಗಿ ಕಾರಣವಾಗಿಲ್ಲದಿದ್ದರೂ ಅವರ ಸಿನಿಮಾದ ಸೋಲೆ ಅದಕ್ಕೆ ಕಾರಣವಾಯಿತು ಎಂದು ಹೇಳಬಹುದು. ಸದ್ಯಕ್ಕೆ ಮನಿಷಾ ಕೊಯ್ರಾಲ ಅವರು ಬಾಲಿವುಡ್ ಚಿತ್ರರಂಗದಲ್ಲಿ ವ್ಯಸ್ತರಾಗಿದ್ದು ಅವರ ಕೊನೆಯ ಸಿನಿಮಾ ಕಾರ್ತಿಕ್ ಆರ್ಯನ್ (Kartik Aaryan) ನಟನೆಯ ಶಹಜಾದ ಸಿನಿಮಾ. ಮನಿಶಾ ಕೊಯ್ರಾಲ ಅಟನೆಯ ಯಾವ ಸಿನಿಮಾ ನಿಮ್ಮ ನೆಚ್ಚಿನ ಸಿನಿಮಾ ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.