Actress Ramya: ವಿಕೆಂಡ್ ವಿತ್ ರಮೇಶ್ ನಲ್ಲಿ ಇಂಗ್ಲಿಷ್ ಮಾತಾಡಿದ್ದಕ್ಕೆ ಕಾರಣ ಕೊಟ್ಟ ರಮ್ಯಾ
ಕನ್ನಡದ ಕ್ವೀನ್ ರಮ್ಯಾ (Ramya) ಇವರು ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ನಲ್ಲಿದೆ, ಎಂದೂ ಕೂಡ ತಮ್ಮ ಚಾರ್ಮ್ ಅನ್ನು ಅವರು ಕಳೆದುಕೊಂಡಿಲ್ಲ. ಸಿನಿಮಾ ರಂಗದಿಂದ ದೂರ ಇದ್ರೂ ಕೂಡ ತಮ್ಮ ಬೇಡಿಕೆಯನ್ನು ಎಲ್ಲೂ ಕೂಡ ಇವರು ಕಳೆದುಕೊಂಡಿಲ್ಲ. ಎಲ್ಲೆ ಹೋದ್ರೂ ರಮ್ಯಾ ಸ್ಯಾಂಡಲ್‌ವುಡ್‌ನ ಕ್ವೀನೆ ಆಗಿದ್ದಾರೆ, ಇದೀಗ ರಮ್ಯ ಅವರು ವಿಕೆಂಡ್ ವಿತ್ ಕಾರ್ಯಕ್ರಮಕ್ಕೆ ಹೋಗಿ ಟ್ರೊಲ್ ಆದ ಬಗ್ಗೆ ರೆಸ್ಪಾನ್ಸ್ ಮಾಡಿದ್ದಾರೆ.
ಟ್ರೊಲ್ ಆದ ನಟಿ ರಮ್ಯಾ
ವೀಕೆಂಡ್ ವಿತ್ ರಮೇಶ್ (Weekend With Ramesh) ಸೀಸನ್ 5ರ ಮೊದಲ ಅತಿಥಿಯಾಗಿ ನಟಿ ರಮ್ಯಾ ಎಂಟ್ರಿ ಕೊಟ್ಟಿದ್ದರು, ಈ ಶೋ ನಲ್ಲಿ ತಮ್ಮ ಜೀವನದ ಅನುಭವ, ಅನಿಸಿಕೆಯನ್ನು ಮೆಲುಕು ಹಾಕಿದ್ದಾರೆ, ಸಾಧಕರ ಕುರ್ಚಿಯಲ್ಲಿ ರಮ್ಯಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೊನೆಗೂ ರಮ್ಯಾ ಸಂಚಿಕೆ ಪ್ರಸಾರವಾಯಿತು, ಬಾಲ್ಯ, ಶಾಲಾ ಅನುಭವ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ರಮ್ಯ ಮಾತನಾಡಿದ್ದು ಮಾತ್ರ ಇಂಗ್ಲೀಷ್ ಭಾಷೆಯಲ್ಲಿ ಇದಕ್ಕೆ ನೆಟ್ಟಿಗರ ಕಾಮೆಂಟ್ ವ್ಯಕ್ತವಾಗಿತ್ತು. ನಮ್ಮ ಅಮ್ಮ, ಅಜ್ಜಿಗೆ ನಿಮ್ಮ ಇಂಗ್ಲೀಷ್ ಅರ್ಥ ಆಗಲಿಲ್ಲ ಎಂದು ಹಲವಾರು ಪ್ರತಿಕ್ರಿಯಿಸಿದ್ದರು. ಜೊತೆಗೆ ಟ್ರೋಲ್ ಮಾಡಿದ್ದರು. ಈ ಟ್ರೋಲ್‌ಗೆ ಇದೀಗ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ರಮ್ಯ ರಿಯಾಕ್ಷನ್ ಹೇಗಿತ್ತು
ಮೊನ್ನೆಯಷ್ಟೆ ಮೀಮ್ ಒಂದಕ್ಕೆ ಕಾಮೆಂಟ್ ಮಾಡಿರುವ ರಮ್ಯಾ ಮುಂದಿನ ಶೋನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಕಾಮೆಂಟ್ ಮಾಡಿದ್ದರು, ಇದೀಗ ಮಾಧ್ಯಮ ದವರು ಮೊನ್ನೆ ಯಾದ ಟ್ರೊಲ್ ಗೆ ಏನು ಹೇಳ್ತೀರಿ ಅಂದಾಗ ಅಲ್ಲಿ ಬಂದ ನನ್ನ ಪ್ರೆಂಡ್ಸ್ , ಪರಿಚಯದವರೆಲ್ಲ ಕನ್ನಡ ಗೊತ್ತಿಲ್ಲದೆ ಇರುವವರು, ಅವರಿಗೆ ಅರ್ಥ ವಾಗಲಿ ಅಂಥ ಇಂಗ್ಲಿಷ್ ಬಳಕೆ ಮಾಡಿದೆ, ಟ್ರೋಲ್ ಗೆ ನಾನು ತಲೆಕೆಡಿಸಿಕೊಳ್ಳಲು ಆಗೋದಿಲ್ಲ ಅಂದಿದ್ದಾರೆ, ಈ ವಿಡಿಯೋದ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ನಟಿಸಲಿದ್ದಾರಾ?
ನಟಿ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎಂದು ಎಲ್ಲ ಅಭಿಮಾನಿಗಳು ಕಾಯ್ತಾ ಇದ್ದಾರೆ, ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಅಭಿ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಭಿ ಅಲ್ಲದೆ, ರಮ್ಯಾ , ಪುನೀತ್ ರಾಜ್‌ಕುಮಾರ್ ಜೊತೆ ಅರಸು ಮತ್ತು ಆಕಾಶ್ ಚಿತ್ರಗಳಲ್ಲಿ ನಟಿಸಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು, ಇನ್ನು ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾಗಿರುವ ರಮ್ಯಾ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಾಣದ ಉತ್ತರಕಾಂಡ ಚಿತ್ರದಲ್ಲಿ ನಟಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.