Karnataka Times
Trending Stories, Viral News, Gossips & Everything in Kannada

Shiva Rajkumar: ತನ್ನ ಈ ಸಿನೆಮಾ ನೋಡಲು ಯಾರು ಥಿಯೇಟರ್ ಗೆ ಬರಲಿಲ್ಲ ಎಂದ ಶಿವಣ್ಣ

Advertisement

ಕನ್ನಡ ಸಿನೆಮಾರಂಗದ ಹ್ಯಾಟ್ರಿಕ್ ಹೀರೋ (Hat-Trick Hero) ಶಿವರಾಜ್ ಕುಮಾರ್ (Shivarajkumar) ಅವರು ಇದೀಗ ಅಷ್ಟೇ ವೇದಾ ಸಿನೆಮಾದ ಯಶಸ್ಸಿನ ಗುಂಗಿನಲ್ಲಿದ್ದಾರೆ. ಅವರು ಅಭಿನಯಿಸಿದ್ದ ಅದೆಷ್ಟೊ ಸಿನೆಮಾ ಸೂಪರ್ ಹಿಟ್ ಆಗಿ ಅಪಾರ ಸಂಖ್ಯೆ ಅಭಿಮಾನಿಗಳ ಪ್ರೀತಿ ಸಂಪಾದಿಸಿದರೆ ಇನ್ನು ಕೆಲವು ಅವರಿಗೆ ಆಶ್ಚರ್ಯ ಆಗುವ ಮಟ್ಟಕ್ಕೆ ಫ್ಲಾಪ್ ಆಯಿತು. ನಟ ಶಿವಣ್ಣ ಅವರು ಇತ್ತೀಚೆಗೆ ತಾವು ಅಭಿನಯಿಸಿದ್ದ ಈ ಒಂದು ಸಿನೆಮಾ ಯಾಕೆ ಫ್ಲಾಪ್ ಆಗಿದೆ ಎಂದು ಈಗಲೂ ಕಾಡುತ್ತಿರುವುದಾಗಿ ಹೇಳಿಕೊಂಡಿದ್ದರು ಹಾಗಾದರೆ ಆ ಸಿನೆಮಾ ಯಾವುದು ಅದು ಫ್ಲಾಪ್ ಆಗಲು ಕಾರಣ ಯಾರು ಇನ್ನು ಅನೇಕ ವಿಚಾರದ ಬಗ್ಗೆ‌ ಈ ಲೇಖನದಲ್ಲಿ ತಿಳಿಸಲಿದ್ದೇವೆ.

ಈ Movie Hit ಆಗಲೇ ಇಲ್ಲ‌:

ಶಿವರಾಜ್ ಕುಮಾರ್ (Shiva Rajkumar) ಅವರು ಈ ಸಿನೆಮಾ ನಟಿಸಿದರೆ ಖಂಡಿತಾ ಜನರು ಇಷ್ಟಪಡ್ತಾರೆ ಎಂದು ಸ್ವತಃ ರಾಜ್ ಕುಮಾರ್ ಹಾಗೂ ಅವರ ಸಹೋದರ ವರದಣ್ಣ ಕೂಡ ಅಂದುಕೊಂಡಿದ್ರು ಆದರೆ ಆ ಸಿನೆಮಾ ಮಾತ್ರ ಹಿಟ್ ಆಗಲೇ ಇಲ್ಲ. ಶಿವರಾಮ ಕಾರಂತರ (shivarama karanth) ಚಿಗುರಿದ ಕನಸು (Chiguridha kanasu movie) ಕಾದಂಬರಿ ಆಧಾರಿತ ವನ್ನೆ ಸಿನೆಮಾ ಮಾಡಲಾಗಿದ್ದು ಅದರಲ್ಲಿ ಶಿವರಾಜ್ ಕುಮಾರ್ ಅವರು ನಾಯಕರಾಗಿ ಅಭಿನಯಿಸಿದ್ದರು. ಈ ಸಿನೆಮಾದಲ್ಲಿ ಬಂಗಾರದ ಮನುಷ್ಯ ಹೊಲುವ ಸ್ಟೋರಿ ಇದ್ದು ವ್ಯಕ್ತಿಯೂ ತನ್ನ ತಾಯಿನಾಡನ್ನು ಅರಸಿ ಅಲ್ಲಿರುವ ಪ್ರಕೃತಿಗೆ ಮಾರು ಹೋಗಿ ಅಲ್ಲೇ ಜೀವನ ಕಂಡುಕೊಳ್ಳಲು ಬಯಸುವುದನ್ನು ಕಾಣಬಹುದು. ಈ ಮೂಲಕ ಕೃಷಿ ಅರೆಸಿದರೆ ದೇಶದ ನಿರುದ್ಯೋಗ ತಡೆಯಲು ಸಾಧ್ಯ ಎಂಬುದನ್ನು ನಿರ್ದೇಶಕ ಟಿ ಎಸ್ ನಾಗಾಭರಣ (TS Nagabharana) ಕೂಡ ಈ ಸಿನೆಮಾದಲ್ಲಿ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಸಿನೆಮಾ ಮಾತ್ರ ಹಿಟ್ ಆಗದೇ ಟಿವಿ ನಲ್ಲಿ ತೆರೆಕಂಡಾಗ ಎಲ್ಲರಿಗೂ ಆ ಸಿನೆಮಾ ತುಂಬಾ ಇಷ್ಟವಾಯಿತು.

YT- Kannada Movie Junction

ಏನಂದ್ರು ಶಿವಣ್ಣ:

ಶಿವರಾಜ್ ಕುಮಾರ್ (Shiva Rajkumar) ಅವರ ಬಳಿ ಈ ಸಿನೆಮಾ ಯಾಕೆ ಹಿಟ್ ಆಗಿಲ್ಲ ಎಂದು ಕೇಳಿದ್ದಕ್ಕೆ ನನಗೂ ಈ ಪ್ರಶ್ನೆ ಹಲವು ಬಾರಿ ಕಾಡಿದೆ. ನಾವು ಈ ಸಿನೆಮಾ ಮಾಡಲು ಎಲ್ಲಿ ಎಡವಿದ್ದೇವೆ ಎಂಬುದು ನನಗೆ ಗೊತ್ತಾಗಲಿಲ್ಲ. ಜನರಿಗೆ ಇನ್ನು ಯಾವ ರೀತಿ ಸಿನೆಮಾ ನೀಡಬೇಕು ಎಂಬುದೆ ತಿಳಿಯದು ಅಷ್ಟೊಳ್ಳೆ ಸಿನೆಮಾ ಫ್ಲಾಪ್ ಆಯಿತು. ಈಗಲೂ ಈ ಸಿನೆಮಾ ಫ್ಲಾಪ್ ಆದ ವಿಚಾರ ನನ್ನನ್ನು ಆಗಾಗ ಕಾಡುತ್ತದೆ ಎಂದು ಶಿವರಾಜ್ ಕುಮಾರ್ ಅವರೇ ಹೇಳಿದ್ದಾರೆ.

ಕಾರಣವೇನು‌:

ಈ ಸಿನೆಮಾ ಫ್ಲಾಪ್ (Movie Flopped) ಆಗಲೂ ಮುಖ್ಯವಾಗಿ ಎರಡು ಕಾರಣ ಕಾಣಬಹುದು. ಮೊದಲನೇ ಯದ್ದಾಗಿ ಆಗ ಟ್ರೆಂಡ್ ಆದ ಸಿನೆಮಾಗಳು ರೌಡಿಸಂ ರೀತಿಯದ್ದು ಕರಿಯಾ, ದಾಸ ಇತ್ಯಾದಿ ಸಿನೆಮಾ ಜನರಿಗೆ ಇಷ್ಟವಾಗುತ್ತಿತ್ತು ಎರಡನೇಯದ್ದಾಗಿ ಜನರೇ ಈ ಸಿನೆಮಾ ಸೋಲಿಗೆ ಕಾರಣ ಎನ್ನಬಹುದು. ಅಂದರೆ ಜನರ ಮನಸ್ಥಿತಿ ಅರಿತು ಸಿನೆಮಾ ಮಾಡಿದರೂ ಎಷ್ಟೋ ಬಾರಿ ಜನರಿಗೆ ಅದು ರೀಚ್ ಆಗಲಾರದು.

Leave A Reply

Your email address will not be published.