Geetha-Vijay: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾ-ವಿಜಿ! ಧಿಡೀರ್ ಟ್ವಿಸ್ಟ್

Advertisement
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವಂತಹ ಹಲವಾರು ಧಾರವಾಹಿಗಳಲ್ಲಿ ಗೀತಾ ಧಾರವಾಹಿ (Geetha Serial) ಕೂಡ ಅತ್ಯಂತ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ನಡೆಯುತ್ತಿರುವ ಸಂಚಿಕೆಯಲ್ಲಿ ಗೀತಾ ವಿಜಿ ಇಬ್ಬರೂ ಕೂಡ ಹೊರಗೆ ಪ್ರಕೃತಿಯ ನಡುವೆ ಬಂದಿದ್ದು ಆ ದೃಶ್ಯಗಳು ಪ್ರತಿಯೊಬ್ಬ ಪ್ರೇಕ್ಷಕರನ್ನು ಕೂಡ ಸೆಳೆಯುತ್ತಿದೆ. ಹೌದು ಈ ಸಂಚಿಕೆಯಲ್ಲಿ ಗೀತಾ ಹಾಗೂ ವಿಜಿ ಇಬ್ಬರು ಕೂಡ ಪ್ರಕೃತಿಯ ಮಡಿಲಲ್ಲಿ ವಿಶೇಷವಾಗಿ ಮದುವೆಯಾಗಿದ್ದಾರೆ.
ಗೀತಾ ವಿಜಿ (Geetha-Vijay) ಮುಂದೆ ನಿಂತುಕೊಂಡಿದ್ದು ವಿಜಿ ಹಳೆಯದನ್ನು ನೆನೆಸಿಕೊಂಡು ನಾನು ನಿನ್ನ ಜೊತೆಗೆ ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದೇನೆ ನನ್ನನ್ನು ಕ್ಷಮಿಸಿ ಬಿಡು ಎಂಬುದಾಗಿ ಹೇಳುತ್ತಾನೆ. ಇದೆ ವೇಳೆ ಗೀತಾಳನ್ನು ತನ್ನ ಎದೆಗೆ ತಬ್ಬಿಕೊಂಡು ನೀನು ನನ್ನ ಹೃದಯದ ಬಡಿತವನ್ನು ಮಾತ್ರ ಕೇಳಬೇಕು ಎಂಬುದಾಗಿ ಹೇಳುತ್ತಾ ಪ್ರಕೃತಿಯ ಸಾಕ್ಷಿಯಾಗಿ ಅವಳನ್ನು ಮದುವೆಯಾಗಿದ್ದೇನೆ ಎಂಬುದಾಗಿ ಹೇಳುತ್ತಾನೆ. ಆಗ ಗೀತಾ ವಿಜಿಗೆ ನಾವಿಬ್ಬರು ಕಲ್ಪನೆಯಲ್ಲಿ ಮಾತ್ರ ಮದುವೆಯಾಗಲು ಸಾಧ್ಯನಾ ಎಂಬುದಾಗಿ ಕೇಳಿದಾಗ ವಿಜಿ ನನ್ನ ತಂಗಿ ಶ್ರುತಿ ಮದುವೆ ಆದ ನಂತರ ನಾವಿಬ್ಬರು ದೊಡ್ಡದಾಗಿ ಅದ್ದೂರಿಯಾಗಿ ಮದುವೆಯಾಗುವ ಮೂಲಕ ಎಲ್ಲರೂ ಮೆಚ್ಚುವಂತ ಸಂಸಾರ ಮಾಡೋಣ ಎಂಬುದಾಗಿ ಹೇಳುತ್ತಾನೆ.
ಈ ಕಡೆ ಗೀತಾ ಹಾಗೂ ವಿಜಿ ಇಬ್ಬರು ಕೂಡ ವರುಣ್ ಮನೆಗೆ ಬರುತ್ತಾರೆ ಎಂದು ಹೇಳಿದಾಗ ಆತ ಈಗ ನಕಲಿ ಅಪ್ಪ ಅಮ್ಮನನ್ನು ಹುಡುಕಲು ಸಿದ್ಧನಾಗಿ ನಿಂತಿದ್ದು ಸಾಕಷ್ಟು ಟೆನ್ಶನ್ ಮಾಡಿಕೊಂಡಿದ್ದಾನೆ. ಒಟ್ಟಾರೆಯಾಗಿ ಗೀತಾ (Geetha) ಧಾರಾವಾಹಿ ಸಾಕಷ್ಟು ರೋಚಕ ತಿರುವುಗಳ ಜೊತೆಗೆ ಪ್ರೇಕ್ಷಕರ ನಾಡಿಮಿಡಿತವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಕಡೆ ಮತ್ತೊಂದು ಘಟನೆ ಕೂಡ ಧಾರವಾಹಿಯಲ್ಲಿ ನಡೆದಿದೆ.
ಚಂದ್ರಿಕಾಳಿಗೆ ಭಾನುಮತಿ ಕಪಾಳಕ್ಕೆ ಎರಡು ಬಾರಿ ಬಿಗದಿದ್ದಾಳೆ. ಅದೇ ವೇಳೆ ಹೊಡೆಯುತ್ತಿರುವಾಗ ಸುಧಾರಾಣಿ ಭಾನುಮತಿಯ ಕೈಯನ್ನು ಅಡ್ಡವಾಗಿ ಹಿಡಿದುಕೊಂಡಿದ್ದಾಳೆ. ಭಾನುಮತಿ ಸುಧಾರಾಣಿ ಕೈ ಹಿಡಿದುಕೊಂಡಿರುವುದನ್ನು ಕೋಪದಿಂದ ದಿಟ್ಟಿಸಿ ನೋಡುತ್ತಿದ್ದಾಳೆ ಎನ್ನುವಲ್ಲಿಗೆ ಸಂಚಿಕೆ ಮುಗಿದಿದೆ. ಮುಂದಿನ ಸಂಚಿಕೆಯಲ್ಲಿ ಏನಾಗುತ್ತದೆ ಎನ್ನುವ ಕುತೂಹಲ ಹಾಗೂ ಕಾತುರತೆ ನೋಡು ಗೀತಾ ದಾರವಾಹಿಯ ಪ್ರೇಕ್ಷಕರಲ್ಲಿ ಈಗ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಗೀತಾ ಧಾರವಾಹಿಯ ಪ್ರತಿಯೊಂದು ಸಂಚಿಕೆಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.